Advertisement

ಲಸಿಕೆಗೆ ಇನ್ನೂ 1 ವರ್ಷ ಕಾಯಬೇಕು!

12:38 AM May 24, 2020 | Sriram |

ದೇಶದಲ್ಲಿ ಕೋವಿಡ್-19 ಲಸಿಕೆ ಸಂಶೋಧನೆಯು ಇನ್ನೂ ಆರಂಭಿಕ ಹಂತದಲ್ಲಿದ್ದು, ಇವುಗಳು ಫಲ ನೀಡಬೇಕೆಂದರೆ ಇನ್ನೂ ಕನಿಷ್ಠಪಕ್ಷ ಒಂದು ವರ್ಷವಾದರೂ ಬೇಕು ಎಂದು ಭಾರತೀಯ ತಜ್ಞರು ಅಂದಾಜಿಸಿದ್ದಾರೆ. ದೇಶದ‌ ಹಲವು ಸಂಸ್ಥೆಗಳು ಕೋವಿಡ್-19 ವೈರಸ್‌ಗೆ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿರುವ ನಡುವೆಯೇ ತಜ್ಞರಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಸದ್ಯ ದೇಶದಲ್ಲಿ ಝೈಡಸ್‌ ಕ್ಯಾಡಿಲಾ, ಸೇರಮ್‌ ಇನ್‌ ಸ್ಟಿಟ್ಯೂಟ್‌, ಬಯಾಲಾಜಿಕಲ್‌ ಇ, ಭಾರತ್‌ ಬಯೋಟೆಕ್‌, ಇಂಡಿಯನ್‌ ಇಮ್ಯುನಾಲಾಜಿಕಲ್ಸ್‌ ಮತ್ತು ಮಿನ್‌ವ್ಯಾಕ್ಸ್‌ ಎಂಬ ಸಂಸ್ಥೆಗಳು ಲಸಿಕೆ ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿ ನಿರತವಾಗಿವೆ. ಈ ಪೈಕಿ ಕೆಲವು ಸಂಸ್ಥೆಗಳು ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಂಶೋಧನೆ ಆರಂಭಿಸಿವೆ. ಲಸಿಕೆ ಅಭಿವೃದ್ಧಿಪಡಿಸಿ, ಅವುಗಳನ್ನು ಪ್ರಾಣಿಗಳ ಮೇಲೆ ಪ್ರಯೋಗಿಸುವ ಪ್ರಕ್ರಿಯೆಯು ವರ್ಸಾಂತ್ಯದಲ್ಲಿ ಆರಂಭವಾಗಲಿದೆ. ನಂತರವೂ ಹಲವು ಪ್ರಕ್ರಿಯೆಗಳಿದ್ದು, ಕೋವಿಡ್-19 ಗೆ ಅತಿ ಶೀಘ್ರದಲ್ಲಿ ಲಸಿಕೆ ಸಿಗಲಿದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ ತಜ್ಞರು.

ರೆಮ್‌ ಡೆಸಿವಿಯರ್‌ ನಿರೀಕ್ಷೆ
ಕೋವಿಡ್-19 ಲಸಿಕೆ ಕೈಗೆಟಕದೇ ಇರುವ ಈ ಸಂದರ್ಭದಲ್ಲಿ ಜಗತ್ತಿನಾದ್ಯಂತ ಇತರೆ ಕಾಯಿಲೆಗಳಿಗೆ ಬಳಸಲಾಗುವ ವಿವಿಧ ಔಷಧಗಳನ್ನೇ ಕೋವಿಡ್-19 ಗೆ ಚಿಕಿತ್ಸೆಯಾಗಿ ಬಳಸಲಾ ಗುತ್ತಿದೆ. ಇಂಥ ಔಷಧಗಳ ಪೈಕಿ ಸದ್ಯಕ್ಕೆ ಸ್ವಲ್ಪಮಟ್ಟಿಗೆ ನಿರೀಕ್ಷೆ ಹುಟ್ಟಿಸಿರುವುದು ಆಂಟಿ ವೈರಲ್‌ ಔಷಧ ರೆಮ್‌ ಡೆಸಿವಿಯರ್‌. ಹೀಗೆಂದು ಆರೋಗ್ಯ ತಜ್ಞರೇ ಅಭಿಪ್ರಾಯಪ ಟ್ಟಿದ್ದಾರೆ. 5 ವರ್‌ಷಗಳ ಹಿಂದೆ ಮಾರಣಾಂತಿಕ ಎಬೊಲಾ ವೈರಸ್‌ ಪತ್ತೆಯಾದಾಗ, ಅಭಿವೃದ್ಧಿಪಡಿಸಲಾದ ರೆಮ್‌ ಡಿಸಿವಿಯರ್‌ ಔಷಧವನ್ನೇ ಈಗ ಕೋವಿಡ್-19 ಸೋಂಕಿಗೂ ಬಳಸಲಾಗುತ್ತಿದ್ದು, ಸೋಂಕಿತರು ಬೇಗನೆ ಗುಣಮುಖರಾಗು ತ್ತಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ಒಟ್ಟಾರೆ 130ಕ್ಕೂ ಹೆಚ್ಚು ಔಷಧಗಳನ್ನು ಕೋವಿಡ್-19 ಸೋಂಕಿತರ ಮೇಲೆ ಪ್ರಯೋಗಿಸಲಾಗುತ್ತಿದೆ. ಈ ಪೈಕಿ ಅತಿ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬಂದಿರುವುದು, ರೋಗಿಗಳು ಬೇಗನೆ ಚೇತರಿಸಿಕೊಳ್ಳುತ್ತಿರುವುದು ಮತ್ತು ಮರಣ ಪ್ರಮಾಣ ಕಡಿಮೆಯಾಗಲು ಸಹಾಯಕವಾಗಿ ರುವುದು ರೆಮ್‌ ಡೆಸಿವಿಯರ್‌ ಔಷಧದ ಬಳಕೆಯಿಂದ ಎಂದಿದ್ದಾರೆ ಜಮ್ಮುವಿನ ಸಿಎಸ್‌ಐಆರ್‌ ನ ಇಂಡಿಯನ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಇಂಟಗ್ರೇಟಿವ್‌ ಮೆಡಿಸಿನ್‌ ನಿರ್ದೇಶಕ ರಾಮ್‌ ವಿಶ್ವಕರ್ಮ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next