Advertisement

ಕೋವಿಡ್‌ 19: ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ

06:37 AM Jul 05, 2020 | Lakshmi GovindaRaj |

ಚಿಕ್ಕನಾಯಕನಹಳ್ಳಿ: ಕೋವಿಡ್‌ 19 ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬ ಭಯ ಬಿಟ್ಟರೆ ಕೋವಿಡ್‌ 19 ಬಂದರೆ ಸಾವನ್ನಪ್ಪುವ ಸಾಧ್ಯತೆ ಅತಿ ಕಡಿಮೆಯಾಗಿರು ತ್ತದೆ. ಅಧಿಕಾರಿಗಳು ಸಾರ್ವಜನಿಕರಿಗೆ ಕೋವಿಡ್‌ 19 ಬಗ್ಗೆ ಜಾಗೃತಿ  ಮೂಡಿಸಿ ಧೈರ್ಯ ತುಂಬುವ ಕೆಲಸ ಮಾಡ ಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಹೇಳಿದರು.

Advertisement

ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೋವಿಡ್‌ 19 ವೈರಸ್‌ಗೆ ಔಷಧಿ  ವ್ಯಾಕ್ಸಿನೇಷನ್‌ ಇಲ್ಲವಾಗಿರುವುದ ರಿಂದ, ಕೋವಿಡ್‌ 19 ಪೀಡಿತ ರೋಗಿಗಳಿಗೆ ಯಾವುದೇ ಚಿಕಿತ್ಸೆ ನೀಡಲಾಗುವುದಿಲ್ಲ ಎಂದರು. ಒಂದು ವೇಳೆ ಆ ವ್ಯಕ್ತಿ ಹೃದಯ ಸಂಬಂಧಿ ರೋಗಗಳು, ಜ್ವರ, ತಲೆನೋವು, ಬಿ.ಪಿ. ಇತರೆ ರೋಗಗಳಿಂದ  ಬಳಲುತ್ತಿದ್ದರೆ ಅಂಥ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ವಿನಃ ಯಾವುದೇ ಸಮಸ್ಯೆ ಇಲ್ಲದ ಕೋವಿಡ್‌ 19 ಪೀಡಿತನಿಗೆ ಚಿಕಿತ್ಸೆ ನೀಡಲಾಗುವುದಿಲ್ಲ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕೊಂಡರೆ ಕೋವಿಡ್‌ 19ದಿಂದ  ಗುಣಮುಖರಾಗು ತ್ತಾರೆ. ಅನವಶ್ಯಕವಾಗಿ ಸಾರ್ವಜನಿಕರು ಭಯ ಬೀಳುತ್ತಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ದಿನನಿತ್ಯದ ಕೆಲಸಗಳಲ್ಲಿ ತೊಡಗಿ ಕೊಳ್ಳಬೇಕು, ಅಧಿಕಾರಿಗಳು ಸಾರ್ವಜನಿಕರಿಗೆ ಕೋವಿಡ್‌ 19 ಬಗ್ಗೆ  ತಿಳಿವಳಿಕೆ ನೀಡಿ ಧೈರ್ಯ ತುಂಬಬೇಕು ಎಂದು ಸೂಚಿಸಿದರು. ಡಿಸಾcರ್ಜ್‌ ಮಾಡಿದ ವ್ಯಕ್ತಿಗಳಿಗೆ ಕೋವಿಡ್‌ 19 ಪಾಸಿಟಿವ್‌ ಬಂದಿದೆ. ಇನ್ನೂ ವರದಿ ಬರದೇ ಯಾಕೆ ಅವರನ್ನು ಡಿಸಾರ್ಜ್‌ ಮಾಡಲಾಯಿತು.

ಇನ್ನೂ ಎರಡು ಮೂರು ದಿನ  ಆಸ್ಪತ್ರೆಯಲ್ಲಿ ಇದ್ದಿದ್ದರೆ, ಆಕಾಶ ಕೆಳಗೆ ಬೀಳುತ್ತಿತ್ತಾ? ಪಾಸಿಟಿವ್‌ ಬಂದ ವ್ಯಕ್ತಿಗಳು ಓಡಾಡಿದ ಕಡೆ ಪರಿಶೀಲನೆ ಮಾಡಿ, ಸೀಲ್‌ಡೌನ್‌ ಪ್ರದೇಶದಲ್ಲಿನ ಜನರಿಗೆ ಅವಶ್ಯಕತೆ ಇದ್ದ ವಸ್ತುಗಳನ್ನು ಅವರಿಂದ ಹಣ ಪಡೆದು ಸರಬರಾಜು ಮಾಡಿ,  ಸರ್ಕಾರದಿಂದ ಉಚಿತವಾಗಿ ಯಾವುದೇ ಸೌಲಭ್ಯ ನೀಡಲಾಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next