Advertisement
ಇವೆಲ್ಲಾ ಮಾಮೂಲು. ಎಷ್ಟು ದಿನ ಮನೆಯೊಳಗೇ ಇರೋದು ಯಾರಿಗೋ ಹೆದರಿಕೊಂಡು ಎನ್ನುವಂತಿದೆ ಜನರ ವರ್ತನೆ. ಇದಕ್ಕೆ ಪೂರಕವಾಗಿ ಮನೆಯಲ್ಲೇ ಇರಿ ಎಂಬ ಸರಕಾರಗಳ ಆದೇಶವನ್ನು ಧಿಕ್ಕರಿಸಿ, ಶನಿವಾರ ಆರೆಂಜ್ ಕೌಂಟಿಯ ನ್ಯೂಪೋರ್ಟ್ ಕಡಲತೀರದಲ್ಲಿ ಸಾವಿರಾರು ಜನರು ಸೇರಿದ್ದರು. ಆರೆಂಜ್ ಕೌಂಟಿ ರಿಜಿಸ್ಟರ್ ವರದಿ ಮಾಡಿರುವಂತೆ ಶುಕ್ರವಾರ ಶುಕ್ರವಾರ 40 ಸಾವಿರ ಜನರು ಕಡಲ ತೀರದಲ್ಲಿದ್ದರು. ಕೇವಲ ಈ ಒಂದು ಪ್ರದೇಶವಲ್ಲದೇ ಲಾಸ್ ಏಂಜಲೀಸ್ ಮತ್ತಿತರ ಕಡೆಯೂ ಇಂಥ ಬೆಳವಣಿಗೆಗಳು ನಡೆದಿವೆ.
ಈ ಕುರಿತು ಕ್ಯಾಲಿಫೋರ್ನಿಯಾದ ಗವರ್ನರ್ ಗೈವಿನ್ ನ್ಯೂಸಮ್ ಕಡಲತೀರಗಳಲ್ಲಿ ಕಿಕ್ಕಿರಿದ್ದು ಸೇರಿದ ಜನರ ವಿರುದ್ಧ ಕೆಂಡಾಮಂಡಲವಾಗಿದ್ದು, “ಸೋಂಕಿಗೆ ಯಾವುದೇ ವಾರಾಂತ್ಯ ಇರುವುದಿಲ್ಲ ಅಥವಾ ಅದು ವಾರಾಂತ್ಯದಲ್ಲಿ ರಜೆ ತೆಗೆದುಕೊಂಡು ಮನೆಗೆ ತೆರಳುವುದಿಲ್ಲ’ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಜತೆಗೆ ಬೀಚ್ ನಲ್ಲಿ ವಿಹರಿಸಿದ್ದವರ ಮೇಲೆ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿದ್ದಾರೆ.
Related Articles
ಈ ಕುರಿತು ಲಾಸ್ ಏಂಜಲೀಸ್‌ನ ಮೇಯರ್‌ಎರಿಕ್ ಗಾರ್ಸೆಟ್ಟಿ ಟ್ವೀಟ್ ಮಾಡಿದ್ದು, “ಒಂದು ತಿಂಗಳಿನಿಂದ ಪಟ್ಟ ಶ್ರಮವನ್ನು ಕ್ಷಣಿಕದಲ್ಲಿ ವ್ಯರ್ಥವಾಗಲು ಬಿಡುವುದಿಲ್ಲ’ ಎಂದಿದ್ದಾರೆ. ಲಾಸ್ ಏಂಜಲೀಸ್ ಕೌಂಟಿಯಲ್ಲಿ, ಎಲ್ಲಾ ಕಡಲತೀರಗಳ ಪ್ರದೇಶವನ್ನು ಮುಚ್ಚಲು ಆದೇಶಿಸಲಾಗಿದೆ.
Advertisement
ಪಕ್ಕದ ರಾಜ್ಯದವರು ಕಾರಣವೇ?ಈ ಹಿಂದೆ ಟೆಕ್ಸಾಸ್, ಜಾರ್ಜಿಯಾ, ಮಿಸ್ಸಿಸ್ಸಿಪ್ಪಿ, ದಕ್ಷಿಣ ಕೆರೊಲಿನಾ ಮತ್ತು ಇತರ ಪ್ರದೇಶಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲುಗೊಳಿಸಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಮುಕ್ತವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ. ಜತೆಗೆ ಇಲ್ಲಿನ ಪ್ರದೇಶಗಳ ಬೀಚ್ ಮತ್ತು ಪಾರ್ಕ್ ಗಳ ಭೇಟಿಗೂ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ರಾಜ್ಯ ಸರಕಾರಗಳ ನಡೆ ಬಗ್ಗೆಯೂ ಟೀಕೆ ವ್ಯಕ್ತವಾಗುತ್ತಿದ್ದು, ಸೋಂಕು ಹರಡುವಿಕೆ ನಡುವೆಯೂ ಈ ನಿರ್ಧಾರ ಕೈಗೊಂಡಿರುವುದಕ್ಕೆ ನಾಗರಿಕರ ಆಕ್ರೋಶ ಕೇಳಿಬರುತ್ತಿದೆ.
ವಾರಾಂತ್ಯದಲ್ಲಿ ಉಷ್ಣಾಂಶ ಪ್ರಮಾಣ ಏರಿಕೆಯಾಗಿದೆ. ಈ ತಾಪಮಾನವನ್ನು ಸಹಿಸಲಾಗದೇ ಜನರು ಮನೆಯಿಂದ ಹೊರಬೀಳುತ್ತಿದ್ದಾರೆ ಎನ್ನಲಾಗಿದೆ.