Advertisement

ಕೋವಿಡ್ 19 : ಹರಿಯಾಣದಲ್ಲಿ ಮೇ 31 ರ ತನಕ ಲಾಕ್ ಡೌನ್ ವಿಸ್ತರಣೆ

07:57 PM May 23, 2021 | Team Udayavani |

ಹರಿಯಾಣ : ರಾಜ್ಯದಲ್ಲಿ ಕೋವಿಡ್ 19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮೇ 31 ರ ಬೆಳಿಗ್ಗೆ 5 ಗಂಟೆಯವರೆಗೆ ಲಾಕ್‌ ಡೌನ್ ನನ್ನು ಒಂದು ವಾರ ವಿಸ್ತರಿಸಲಾಗಿದೆ ಎಂದು ಹರಿಯಾಣ ಸರ್ಕಾರ ಇಂದು(ಭಾನುವಾರ, ಮೇ 23) ತಿಳಿಸಿದೆ.

Advertisement

“ರಾಜ್ಯದಲ್ಲಿ ಕೋವಿಡ್ ಸೋಂಕಿನ ಪಾಸಿಟಿವ್ ಪ್ರಮಾಣ ಕಡಿಮೆಯಾಗಿದ್ದರೂ, ಮೇ 31 ರ ಬೆಳಿಗ್ಗೆ 5 ಗಂಟೆಯವರೆಗೆ ಒಂದು ವಾರ ವಿಸ್ತರಿಸಲಾಗಿದೆ” ಎಂದು ಅಧಿಕೃತ ಆದೇಶ ಹೊರಡಿಸಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ತಿಳಿಸಿದೆ.

ಇದನ್ನೂ ಓದಿ : ತಿಮಿಂಗಿಲ ವಾಂತಿ ಸಾಗಾಟ ಮಾಡುತ್ತಿದ್ದ ಮೂವರ ಬಂಧನ, 5.35 ಕೆಜಿ ತೂಕದ ವಾಂತಿ ವಶ

ಆದಾಗ್ಯೂ,  ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದ್ದು, ರಾತ್ರಿ ಕರ್ಫೂ ಜಾರಿಯಲ್ಲಿರುವ ಕಾರಣದಿಂದ ಹಗಲಿನಲ್ಲಿ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿದ್ದು, ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಸೂಚನೆ ನೀಡಿದೆ.

ಅಂಗಡಿಗಳನ್ನು ಎರಡು ಗುಂಪುಗಳಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.

Advertisement

ಮಾಲ್ ಗಳನ್ನು ತೆರೆಯುಲು ಅನುಮತಿಸದೇ, ನಿರ್ಬಂಧವನ್ನು ಮುಂದುವರಿಸಿದೆ.

ಮೇ 17 ರಿಂದ ಜಾರಿಗೆ ಬರುವಂತೆ ಮೇ 24 ರವರೆಗೆ ಹರಿಯಾಣದಲ್ಲಿ ಒಂದು ವಾರದ ಸಂಪೂರ್ಣ ಲಾಕ್‌ ಡೌನ್ ಅನ್ನು ಈಗಾಗಲೇ ವಿಧಿಸಲಾಗಿತ್ತು. ಆದರೇ, ಈ ಲಾಕ್ ಡೌನ್ ನನ್ನು ಈಗ ಮತ್ತೆ ಒಂದು ವಾರಗಳ ಕಾಲ ಕೆಲವು ನಿರ್ಬಂಧಗಳ ಸಡಿಲಗೊಳಿಸುವುದರೊಂದಿಗೆ ವಿಸ್ತರಣೆ ಮಾಡಿದೆ.

ಇದನ್ನೂ ಓದಿ : ಮೋದಿ ಕಣ್ಣೀರಾದ ಕ್ಷಣ : ಪ್ರಧಾನಿಗೆ ಆಸ್ಕರ್ ಕೊಡಬೇಕೆಂದು ವ್ಯಂಗ್ಯವಾಡಿದ ನಿರ್ದೇಶಕ ವರ್ಮಾ

Advertisement

Udayavani is now on Telegram. Click here to join our channel and stay updated with the latest news.

Next