Advertisement

ಲಾಕ್ ಡೌನ್: ಪಶ್ಚಿಮಬಂಗಾಳದ ಮಸೀದಿಯಲ್ಲಿ ನೂರಾರು ಮಂದಿ ನಮಾಜ್, 50 ಜನರ ವಿರುದ್ಧ FIR

09:12 AM Apr 12, 2020 | Nagendra Trasi |

ನವದೆಹಲಿ:ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಮುಂದುವರಿದಿರುವ ನಡುವೆಯೇ ಪಶ್ಚಿಮಬಂಗಾಳದ ಮುಷಿರಾಬಾದ್ ಮಸೀದಿಯಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಸಾಮೂಹಿಕ ನಮಾಜ್ ಮಾಡಿದ 50 ಮಂದಿ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ವರದಿಗಳ ಪ್ರಕಾರ, ಲಾಕ್ ಡೌನ್ ಆದೇಶ ಉಲ್ಲಂಘಿಸಿ ಮುಷಿರಾಬಾದ್ ನ ಗೋಪಿಪುರ್ ಮಸೀದಿಯಲ್ಲಿ ನೂರಾರು ಮಂದಿ ಸೇರುವ ಮೂಲಕ ನಮಾಜ್ ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲದೇ ಇವರಲ್ಲಿ ಯಾರೂ ಕೂಡಾ ಸಾಮಾಜಿಕ ಅಂತರವನ್ನು ಅನುಸರಿಸಿಲ್ಲ, ಮಾಸ್ಕ್ ಸಹ ಧರಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಮಸೀದಿಯಲ್ಲಿ ನಮಾಜ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ನೂರಾರು ಮಂದಿ ಮಸೀದಿಯಿಂದ ಹೊರಬರುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ, ನಮಾಜ್ ಸಲ್ಲಿಸಲು ಆಗಮಿಸಿದ ಎಲ್ಲರನ್ನೂ ಮಸೀದಿ ಬಿಟ್ಟು ತೆರಳುವಂತೆ ಸೂಚಿಸಿದ್ದರು ಎಂದು ವರದಿ ವಿವರಿಸಿದೆ.

ಲಾಕ್ ಡೌನ್ ತೆರವುಗೊಳಿಸುವವರೆಗೆ ಮಸೀದಿಯಲ್ಲಿ ನಮಾಜ್ ನಡೆಸಬಾರದು ಎಂದು ಇಮಾಮ್ ಗೆ ಪೊಲೀಸರು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಏತನ್ಮಧ್ಯೆ ಪಶ್ಚಿಮಬಂಗಾಳದ 10 ಹಾಟ್ ಸ್ಪಾಟ್ ಗಳಲ್ಲಿ 14 ದಿನ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲು ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next