Advertisement
ಕೆಎಸ್ಸಾರ್ಟಿಸಿಯಿಂದ ನಿತ್ಯ ದೇಶದ ವಿವಿಧ ಭಾಗಗಳಿಗೆ 8 ಸಾವಿರಕ್ಕೂ ಮಿಕ್ಕಿ ಐಷಾರಾಮಿ ಮತ್ತು ಸಾಮಾನ್ಯ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ಕೋವಿಡ್ 19 ಆತಂಕದಿಂದ ಮಾ. 1ರಿಂದ ಎ. 7ರ ವರೆಗೆ ಕೆಎಸ್ಸಾರ್ಟಿಸಿಯ ಒಟ್ಟು 10 ವಿಭಾಗಗಳ ಕಾರ್ಯಾಚರಣೆ ಮಾಡುವ ಪ್ರೀಮಿಯಂ (ಐಷಾರಾಮಿ) ಬಸ್ ಸಂಚಾರ ಕಡಿತಗೊಂಡ ಕಾರಣ 37.28 ಕೋಟಿ ರೂ. ನಷ್ಟ ಉಂಟಾಗಿದೆ. ಒಟ್ಟು 16 ಡಿಪೋಗಳ ನಾನ್ ಪ್ರೀಮಿಯಂ (ಸಾಮಾನ್ಯ) ಸಾರಿಗೆಯಲ್ಲಿ 144 ಕೋಟಿ ರೂ.ಗೂ ಹೆಚ್ಚಿನ ನಷ್ಟ ಉಂಟಾಗಿದೆ.
Related Articles
ರಾಜ್ಯದಲ್ಲಿ ಸದ್ಯ ಕೇವಲ 16 ಕೆಎಸ್ಸಾರ್ಟಿಸಿ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ತುರ್ತು ಅವಶ್ಯಕ ಸೇವೆಗಳಾದ ಮೆಡಿಕಲ್, ಪೊಲೀಸ್, ಭದ್ರತಾ ಸಿಬಂದಿ, ಪ್ಯಾರಾ ಮೆಡಿಕಲ್ ಸಿಬಂದಿ, ಮಹಾನಗರ ಪಾಲಿಕೆ, ಸರಕಾರಿ ಸಿಬಂದಿ ಸಹಿತ ಜಿಲ್ಲಾಡಳಿತ ಸೂಚಿಸಿದ ಸೇವೆಗಳಿಗೆ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದೆ. ನಿಗಮ ವ್ಯಾಪ್ತಿಯ ರಾಮನಗರ-1, ಮೈಸೂರು-4, ಮಂಗಳೂರು-4, ದಾವಣಗೆರೆ-1, ಶಿವಮೊಗ್ಗ-6 ಸಹಿತ ಒಟ್ಟು 16 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ.
Advertisement
ಅತಿ ದೊಡ್ಡ ನಷ್ಟಕೆಎಸ್ಸಾರ್ಟಿಸಿಯಿಂದ ರಾಜ್ಯದ ವಿವಿಧ ಕಡೆಗಳಿಗೆ ಸಂಚರಿಸುವ ಬಸ್‌ಗಳು ಒಂದು ತಿಂಗಳಿನಿಂದ ಸಮರ್ಪಕವಾಗಿ ಕಾರ್ಯಾಚರಣೆ ನಡೆಸಲಿಲ್ಲ. ಇದೇ ಕಾರಣಕ್ಕೆ ಸದ್ಯ 182 ಕೋಟಿ ರೂ.ಗೂ ಹೆಚ್ಚಿನ ನಷ್ಟ ಉಂಟಾಗಿದೆ. ಇತ್ತೀಚಿನ ದಿನಗಳಲ್ಲಿ ಬಸ್ ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ ಆದ ಅತೀ ದೊಡ್ಡ ಮೊತ್ತದ ನಷ್ಟ ಇದಾಗಿದೆ.
– ಶಿವಯೋಗಿ ಕಳಸದ,
ಕೆಎಸ್ಸಾರ್ಟಿಸಿ ಎಂಡಿ