Advertisement

ಕೋವಿಡ್-19 ಲಾಕ್ ಡೌನ್: ಒಂಬತ್ತು ಜಿಲ್ಲೆಗಳಲ್ಲಿ ಏನಿರುತ್ತೆ? ಏನಿರಲ್ಲ?

11:13 AM Mar 27, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಆತಂಕ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರಕಾರ ಇಂದು ಒಂಬತ್ತು ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಧಾರವಾಡ, ಮೈಸೂರು, ಕೊಡಗು, ಕಲಬುರ್ಗಿ, ಬೆಳಗಾವಿ, ಮಂಗಳೂರು ಜಿಲ್ಲೆಗಳಲ್ಲಿ ಮಾರ್ಚ್ 23ರಿಂದ ಮಾರ್ಚ್ 31ರವರೆಗೆ ಲಾಕ್ ಡೌನ್ ಆಗಿರಲಿದೆ.

  • ಈ ಒಂಬತ್ತು ಜಿಲ್ಲೆಗಳಲ್ಲಿ ಪರಿಸ್ಥಿತಿ ಯಾವ ರೀತಿ ಇರಲಿದೆ. ಮುಂದೆ ಓದಿ.
  • ಈ 9 ಜಿಲ್ಲೆಗಳಲ್ಲಿ ವೈದ್ಯಕೀಯ, ಔಷದಿ, ದಿನಸಿ, ಕೃಷಿ ಮೊದಲಾದ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಿರ್ಭಂದಿಸಲಾಗಿದು.
  • ಈ 9 ಜಿಲ್ಲೆಗಳಲ್ಲಿ ಕಾರ್ಮಿಕರು ಹೆಚ್ಚಿರುವ ಕೈಗಾರಿಕೆಗಳಲ್ಲಿ, ದಿನ ಬಿಟ್ಟು ದಿನ ಅರ್ಧ ಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿಸುವುದು.
  • ಈ 9 ಜಿಲ್ಲೆಗಳಲ್ಲಿ ಅಂತರ್ ಜಿಲ್ಲೆಯ ಸಾರಿಗೆ ವ್ಯವಸ್ಥೆಯನ್ನು 31ನೇ ಮಾರ್ಚ್ 2020ರವರೆಗೆ ಸ್ಥಗಿತಗೊಳಿಸಲಾಗಿದೆ.
  • ಬಾರ್, ರೆಸ್ಟೋರೆಂಟ್, ಕ್ಲಬ್, ಪಬ್, ಬಸ್ ಸಂಚಾರ, ಆಟೋ -ಕ್ಯಾಬ್ ಸೇವೆ, ಮಾಲ್ ಎಲ್ಲವೂ ಸ್ಥಗಿತವಾಗಿರಲಿದೆ.
  • ರಾಜ್ಯಾದ್ಯಂತ ಎಲ್ಲಾ ಎಸಿ ಬಸ್ ಗಳನ್ನು ಮಾರ್ಚ್ 31ರವರೆಗೆ ನಿರ್ಬಂಧಿಸಲಾಗಿದೆ.
Advertisement

ಏನಿರಲಿದೆ

  • ಅಗತ್ಯ ಸೇವೆಗಳಾದ ಹಾಲು-ಪೇಪರ್, ದಿನಸಿ ವಸ್ತುಗಳು, ಮೆಡಿಕಲ್ ಸ್ಟೋರ್ ಎಂದಿನಂತೆ ಕಾರ್ಯನಿರ್ವಹಿಸಲಿದೆ.
  • ದ್ವಿತೀಯ ಪಿಯುಸಿಯ ಬಾಕಿ ಇರುವ ಒಂದು ಪರೀಕ್ಷೆ ಸೋಮವಾರ ನಡೆಯಲಿದೆ.
  • ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳು ತೆರೆದಿರಲಿದೆ.
Advertisement

Udayavani is now on Telegram. Click here to join our channel and stay updated with the latest news.

Next