Advertisement

ಕೋವಿಡ್ ಲಾಕ್ ಡೌನ್ ಎಫೆಕ್ಟ್ : ಈಗ ಪರಿಶುದ್ಧಳಾಗುತ್ತಿದ್ದಾಳೆ ಗಂಗಾ ಮಾತೆ!

09:28 AM Apr 06, 2020 | Hari Prasad |

ಹೊಸದಿಲ್ಲಿ: ಲಾಕ್‌ಡೌನ್‌ನಿಂದಾಗಿ 130 ಕೋಟಿ ಜನರು, ಗೃಹಬಂಧನದಲ್ಲಿದ್ದಾರೆ! ಇದರ ಪರಿಣಾಮ, ದಶಕಗಳಿಂದ ಮಲಿನವಾಗಿದ್ದ ಗಂಗಾ ನದಿ, ಈಗ ತಾನೇತಾನಾಗಿ ಶುದ್ಧವಾಗುತ್ತಾ ಸಾಗಿದೆ!

Advertisement

ಈಗ ಗಂಗಾ ನದಿಯ ನೀರು, ಸ್ನಾನ ಮಾಡಲು, ಪ್ರಾಣಿಗಳು ಅಥವಾ ಮೀನು ಸಾಕಾಣಿಕೆಗೆ ಬಳಸುವಂತಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ದತ್ತಾಂಶಗಳು ಹೇಳಿವೆ. ಗಂಗಾ ನದಿ ಮಾತ್ರವಲ್ಲದೆ, ಗಂಗಾ ನದಿಯ ಉಪನದಿಗಳಾದ ಹಿಂಡಾನ್‌ ಮತ್ತು ಯಮುನಾ ನದಿಗಳಲ್ಲೂ ಮಾಲಿನ್ಯ ಪ್ರಮಾಣ ಗಣನೀಯವಾಗಿ ತಗ್ಗಿದೆ ಎಂದು ಮಂಡಳಿ ತಿಳಿಸಿದೆ.

ಈವರೆಗೆ, ಮನುಷ್ಯರಿಂದ, ಕೈಗಾರಿಕೆಗಳಿಂದ ನದಿಗೆ ಸೇರುತ್ತಿದ್ದ ತ್ಯಾಜ್ಯದಿಂದಾಗಿ ಈ ನದಿಯ ನೀರು ಸ್ನಾನ ಮಾಡದಷ್ಟು ಕಲುಷಿತವಾಗಿತ್ತು. ಬಂಗಾಳ ಕೊಲ್ಲಿಯನ್ನು ಸೇರುವವರೂ ಇದು ನಿರಂತರವಾಗಿ ಕಲುಷಿತಗೊಳ್ಳುತ್ತಾ ಸಾಗಿತ್ತು . ಆದರೀಗ, ಲಾಕ್‌ ಡೌನ್‌ನ ಪರಿಣಾಮವಾಗಿ, ನದಿಗೆ ಸೇರುತ್ತಿದ್ದ ತ್ಯಾಜ್ಯ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ನದಿ ನೀರು ಉಪಯೋಗ ಯೋಗ್ಯವಾಗಿ ಬದಲಾಗಿದೆ.

ಕೇಂದ್ರ ಪರಿಸರ ಖಾತೆ ಸಚಿವ ಮನೋಜ್‌ ಮಿಶ್ರಾ ಅವರು, ‘ನದಿಯಲ್ಲಿ ಈಗಿರುವ ನೀರಿನ ಗುಣಮಟ್ಟವನ್ನು ಪರಿಶೀಲಿಸಿ, ಈವರೆಗೆ ಆಗಿದ್ದ ಮಾಲಿನ್ಯದ ಪ್ರಮಾಣವನ್ನು ಲೆಕ್ಕ ಹಾಕಲು ಇದೇ ಸರಿಯಾದ ಸಮಯ. ಈ ಕುರಿತಂತೆ ಸಿಪಿಸಿಬಿ ಕಾರ್ಯೋನ್ಮುಖವಾಗಬೇಕು” ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next