Advertisement

ಕೋವಿಡ್-19: ಕಾಸರಗೋಡು 6 ; ಕೇರಳದಲ್ಲಿ 193 ಮಂದಿಗೆ ಸೋಂಕು ದೃಢ

07:56 PM Jul 06, 2020 | Sriram |

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 6 ಮಂದಿಗೆ ಕೋವಿಡ್-19 ವೈರಸ್‌ ಸೋಂಕು ದೃಢಿಕರಿಸಲಾಗಿದೆ.

Advertisement

ಇದೇ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 12 ಮಂದಿ ಗುಣಮುಖರಾಗಿದ್ದಾರೆಂದು ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್‌ ತಿಳಿಸಿದರು.

ರೋಗ ಬಾಧಿತರಲ್ಲಿ ನಾಲ್ವರು ವಿದೇಶದಿಂದಲೂ, ಇಬ್ಬರು ಇತರ ರಾಜ್ಯದಿಂದ ಬಂದವರಾಗಿದ್ದಾರೆ.

ವಿದೇಶದಿಂದ ಬಂದವರು ಕಾಂಞಂಗಾಡ್‌ ನಗರಸಭೆಯ ನಾಲ್ಕು ವರ್ಷದ ಅವಳಿ ಸಹೋದರರು, 30 ವರ್ಷದ ಕಾಂಞಂಗಾಡ್‌ ನಗರಸಭಾ ನಿವಾಸಿ, 26 ವರ್ಷದ ಅಜಾನೂರು ಪಂಚಾಯತ್‌ ನಿವಾಸಿಗೆ ರೋಗ ಬಾಧಿಸಿದೆ. ಇತರ ರಾಜ್ಯದಿಂದ ಬಂದ 34 ವರ್ಷದ ಕೋಡೋಂ ಬೇಳೂರು ನಿವಾಸಿ ಹಾಗು 33 ವರ್ಷದ ಕಯ್ಯೂರು-ಚೀಮೇನಿ ನಿವಾಸಿಗಳಿಗೆ ರೋಗ ಬಾಧಿಸಿದೆ.

ಉಕ್ಕಿನಡ್ಕ ಕಾಸರಗೋಡು ಮೆಡಿಕಲ್‌ ಕಾಲೇಜು, ಪಡನ್ನಕ್ಕಾಡ್‌ ಕೋವಿಡ್‌ ಚಿಕಿತ್ಸಾ ಕೇಂದ್ರ, ಉದಯಗಿರಿ ಸಿ.ಎಫ್‌.ಎಲ್‌.ಟಿ.ಸಿ.ಗಳಲ್ಲಿ ದಾಖಲಾಗಿದ್ದ 12 ಮಂದಿ ಗುಣಮುಖರಾಗಿದ್ದಾರೆ.

Advertisement

ಉಕ್ಕಿನಡ್ಕ ಕಾಸರಗೋಡು ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕುಂಬಳೆ ಪಂಚಾಯತ್‌ನ 23 ವರ್ಷದ ವ್ಯಕ್ತಿ, ಮಡಿಕೈ ಪಂಚಾಯತ್‌ನ 30 ವರ್ಷದ ವ್ಯಕ್ತಿ, ಕಾಸರಗೋಡು ನಗರಸಭೆ ವ್ಯಾಪ್ತಿಯ 54 ವರ್ಷದ ವ್ಯಕ್ತಿ, ಮೊಗ್ರಾಲ್‌ ಪುತ್ತೂರು ಪಂಚಾಯತ್‌ನ 62, 44 ವರ್ಷದ ವ್ಯಕ್ತಿಗಳು, ಪಡನ್ನಕ್ಕಾಡ್‌ ಕೋವಿಡ್‌ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ಮಂಗಲ್ಪಾಡಿ ಪಂಚಾಯತ್‌ನ 50 ವರ್ಷದ ವ್ಯಕ್ತಿ, ಉದುಮ ಪಂಚಾಯತ್‌ನ 44 ವರ್ಷದ ವ್ಯಕ್ತಿ, ಪಳ್ಳಿಕ್ಕರೆ ಪಂಚಾಯತ್‌ನ 47 ವರ್ಷದ ವ್ಯಕ್ತಿ, ಮಡಿಕೈ ಪಂಚಾಯತ್‌ನ 50 ವರ್ಷದ ವ್ಯಕ್ತಿ, ಪುಲ್ಲೂರು-ಪೆರಿಯ ಪಂಚಾಯತ್‌ನ 47 ವರ್ಷದ ವ್ಯಕ್ತಿ, ಉದಯಗಿರಿ ಸಿ.ಎಫ್‌.ಎಲ್‌.ಟಿ.ಸಿ. ಕೋವಿಡ್‌ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ಮೀಂಜ ಪಂಚಾಯತ್‌ನ 49 ವರ್ಷದ ವ್ಯಕ್ತಿ, ಮಧೂರು ಪಂಚಾಯತ್‌ನ 25 ವರ್ಷದ ಮಹಿಳೆಗೆ ಕೋವಿಡ್‌ ನೆಗೆಟಿವ್‌ ಆಗಿದೆ.

ಕೇರಳದಲ್ಲಿ 193 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಸೋಮವಾರ 193 ಮಂದಿಗೆ ಕೋವಿಡ್-19 ವೈರಸ್‌ ಸೋಂಕು ದೃಢಿಕರಿಸಲಾಗಿದೆ.

ಇದೇ ಸಂದರ್ಭದಲ್ಲಿ 167 ಮಂದಿ ಗುಣಮುಖರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

ರೋಗ ಬಾಧಿತರಲ್ಲಿ 92 ಮಂದಿ ವಿದೇಶದಿಂದಲೂ, 65 ಮಂದಿ ಇತರ ರಾಜ್ಯಗಳಿಂದಲೂ ಬಂದವರು. ಸಂಪರ್ಕದ ಮೂಲಕ 35 ಮಂದಿಗೆ ರೋಗ ಬಾಧಿಸಿದೆ. ಮಂಜೇರಿ ಮೆಡಿಕಲ್‌ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 87 ವರ್ಷದ ಮುಹಮ್ಮದ್‌, ಎರ್ನಾಕುಳಂ ಮೆಡಿಕಲ್‌ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ಯೂಸುಫ್‌ ಸಾವಿಗೀಡಾದರು.

ತಿರುವನಂತಪುರ-7, ಕೊಲ್ಲಂ-11, ಆಲಪ್ಪುಳ-15, ಪತ್ತನಂತಿಟ್ಟ-26, ಕೋಟ್ಟಯಂ-6, ಇಡುಕ್ಕಿ-6, ಎರ್ನಾಕುಳಂ-25, ತೃಶ್ಶೂರು-14, ಪಾಲಾಟ್‌-8, ಮಲಪ್ಪುರಂ-35, ಕಲ್ಲಿಕೋಟೆ-15, ಕಣ್ಣೂರು-11, ಕಾಸರಗೋಡು-6, ವಯನಾಡು-8 ಎಂಬಂತೆ ರೋಗ ಬಾಧಿಸಿದೆ.

ತಿರುವನಂತಪುರ-7, ಕೊಲ್ಲಂ-10, ಆಲಪ್ಪುಳ-7, ಪತ್ತನಂತಿಟ್ಟ-27, ಕೋಟ್ಟಯಂ-11, ಎರ್ನಾಕುಳಂ-16, ತೃಶ್ಶೂರು-16, ಪಾಲಾ^ಟ್‌-33, ಮಲಪ್ಪುರಂ-13, ಕಲ್ಲಿಕೋಟೆ-5, ಕಣ್ಣೂರು-10, ಕಾಸರಗೋಡು-12 ಎಂಬಂತೆ ಗುಣಮುಖರಾಗಿದ್ದಾರೆ.

ಇದು ವರೆಗೆ ಕೇರಳದಲ್ಲಿ 5622 ಮಂದಿಗೆ ರೋಗ ದೃಢೀಕರಿಸಲಾಗಿದೆ. ಪ್ರಸ್ತುತ 2252 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿವಿಧ ಜಿಲ್ಲೆಗಳಲ್ಲಾಗಿ 1,83,291 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 2075 ಮಂದಿ ಆಸ್ಪತ್ರೆಯಲ್ಲಿ ನಿಗಾವಣೆಯಲ್ಲಿದ್ದಾರೆ. ಸೋಮವಾರ ಶಂಕಿತ 384 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next