Advertisement

ಕೋವಿಡ್ 19: ಜಪಾನ್ ನಲ್ಲಿ ಮೇ ಅಂತ್ಯದವರೆಗೂ ಎಮರ್ಜೆನ್ಸಿ ವಿಸ್ತರಣೆ

08:22 AM May 05, 2020 | Nagendra Trasi |

ಟೋಕಿಯೋ:ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಮೇ 31ರವರೆಗೆ ಎಮರ್ಜೆನ್ಸಿ(ಲಾಕ್ ಡೌನ್)ಯನ್ನು ಮುಂದುವರಿಸುವುದಾಗಿ ಜಪಾನ್ ವಿತ್ತ ಸಚಿವ ಯಸುಶಿ ನಿಶಿಮುರಾ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

Advertisement

ದೇಶದಲ್ಲಿ ಎಮರ್ಜೆನ್ಸಿ ಮುಂದುವರಿಸಲು ಸೋಮವಾರದ ನಂತರ ಸಂಸತ್ ಅನುಮತಿ ಪಡೆಯಲು ನಿರ್ಧರಿಸಿದ್ದು, ಔಪಚಾರಿಕವಾಗಿ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಎಮರ್ಜೆನ್ಸಿ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಜಪಾನ್ ನಲ್ಲಿ 15ಸಾವಿರಕ್ಕೂ ಅಧಿಕ ಕೋವಿಡ್ 19 ಪ್ರಕರಣಗಳು ದಾಖಲಾಗಿದ್ದು, 510 ಮಂದಿ ಸಾವನ್ನಪ್ಪಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ. ಟೋಕಿಯೋ ಸೇರಿದಂತೆ ಇತರ ಪ್ರದೇಶಗಳಲ್ಲಿ ಕೋವಿಡ್ 19 ವೈರಸ್ ಕ್ಷಿಪ್ರವಾಗಿ ಹರಡುವ ಮೂಲಕ ಹೆಚ್ಚಿನ ಸಮಸ್ಯೆ ಉಂಟು ಮಾಡಿರುವುದಾಗಿ ನಿಶಿಮುರಾ ಈ ಮೊದಲು ತಿಳಿಸಿದ್ದರು.

ಕೋವಿಡ್‌-19 ವೈರಸ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ರಷ್ಯಾ, ಪೆರು ಮತ್ತು ಸೌದಿ ಅರೇಬಿಯಾ ಸೇರಿದಂತೆ 14 ದೇಶಗಳ ಪ್ರವೇಶವನ್ನು ನಿರ್ಬಂಧಿಸಿರುವುದಾಗಿ ಜಪಾನ್‌ ಪ್ರಧಾನಿ ಶಿಂಜೊ ಅಬೆ ತಿಳಿಸಿದ್ದರು. ಜಪಾನ್‌ 70 ಕ್ಕೂ ಹೆಚ್ಚು ದೇಶಗಳ ಪ್ರವೇಶವನ್ನು ನಿಷೇಧಿಸಿತ್ತು. ವಿಶ್ವದ ಇತರೆ ಭಾಗಗಳಿಗೂ ವೀಸಾಗಳನ್ನು ಅಮಾನ್ಯಗೊಳಿಸಿ, 14 ದೇಶಗಳನ್ನು ನಿಷೇಧಿತ ಪಟ್ಟಿಗೆ ಸೇರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next