Advertisement
ದಂಡ ವಿಧಿಸಿದರೂ, ಬಂಧನದ ಬಿಸಿ ಇದ್ದರೂ ಪ್ರಯೋಜನವಾಗುತ್ತಿಲ್ಲ. ಇದಕ್ಕಾಗಿ ಇಂಡೋನೇಷ್ಯಾದ ಜಾವಾ ಪ್ರದೇಶದ ರಾಜಕಾರಣಿಯೊಬ್ಬರು ಕ್ಯಾರೆಂಟೈನ್ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೊಸ ಶಿಕ್ಷೆಯನ್ನು ಹುಡುಕಿದ್ದಾರೆ.
ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ನಿಯಮ ಉಲ್ಲಂಘಿಸುತ್ತಿರುವವರ ಕಾಟ ಹೆಚ್ಚಾಗಿದೆ. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಮುಖ್ಯ ಭೂಮಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ಹಲ್ಲೆಯನ್ನೂ ಮಾಡುತ್ತಿದ್ದಾರೆ. ಇಂಡೋನೇಷ್ಯಾದಲ್ಲೂ ಇಂಥ ಘಟನೆಗಳಿವೆ. ಸೋಂಕು ಶಂಕಿತರು ಕ್ವಾರಂಟೈನ್‌ನಲ್ಲಿ ಇರಬೇಕಾದ್ದು ಕಡ್ಡಾಯ ಎಂದರೂ ಕೆಲವರು ನಿಯಮ ಪಾಲಿಸುತ್ತಿಲ್ಲ. ಯಾವ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳದೇ ಅಲೆದಾಡುತ್ತಿದ್ದಾರೆ. ಈ ಧೋರಣೆಯಿಂದ ಬೇಸತ್ತ ಇಲ್ಲಿನ ಸ್ಥಳೀಯ ಸರಕಾರ ಮತ್ತು ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡುವವರಿಗೆ ತಕ್ಕ ಪಾಠ ಕಲಿಸ ತೊಡಗಿದ್ದಾರೆ. ನಿಯಮ ಉಲ್ಲಂಘಕರನ್ನು ಬಂಧಿಸಿ ಒಂದೆಡೆ ಕೂಡಿ ಹಾಕಲು ನಿರ್ಧರಿಸಿದ್ದು, ಅದಕ್ಕಾಗಿ ಪಾಳು ಬಿದ್ದ ಮನೆಗಳನ್ನು, ಭೂತ ಬಂಗಲೆಗಳನ್ನು ಆಯ್ದುಕೊಳ್ಳುತ್ತಿದೆ. ಎಲ್ಲ ರೀತಿಯಲ್ಲಿ ತಿಳಿ ಹೇಳಿ, ದಂಡ ವಿಧಿಸಿದರೂ ಜಗ್ಗದ ಮೊಂಡರಿಗೆ ವಿಧಿಸಬೇಕಾದ ಶಿಕ್ಷೆ ಹೇಗಿರಬೇಕು ಎಂಬುದಕ್ಕೆ ಜಾವಾದ ಸ್ಥಳೀಯ ಮುಖಂಡ ಈ ಸಲಹೆ ನೀಡಿದ್ದಾರೆ. ಈಗ ಜಾವಾ ದ್ವೀಪದ ಸೆಪಾಟ್ ಗ್ರಾಮದಲ್ಲಿ ಜಾರಿ ಆಗಿದೆ. ಈಗ ಜಕಾರ್ತ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ವಿಸ್ತರಿಸಲಾಗಿದೆ.
Related Articles
Advertisement