ಕೋಲಾರ: ಜಿಲ್ಲೆಯಲ್ಲಿ ಕೋವಿಡ್ 19 ವೈರಸ್‌ಗೆ ಮೊದಲ ಬಲಿ ಆಗಿದೆ. ಈವರೆಗೂ ಸೋಂಕು ದೃಢಪಟ್ಟು, ಕೆಲವರು ಚಿಕಿತ್ಸೆ ಪಡೆದ ನಂತರ ಗುಣಮುಖರಾಗಿ ಮನೆಗೆ ವಾಪಸ್ಸಾಗುತ್ತಿದ್ದರು. ಶುಕ್ರವಾರ ಮೊದಲ ಸಾವು ಸಂಭವಿಸಿದೆ. ಮತ್ತೆ 6 ಕೋವಿಡ್ 19 ಸೋಂಕಿನ ಹೊಸ ಪ್ರಕರಣಗಳು ವರದಿಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 90ಕ್ಕೆ ಏರಿದೆ.
ಒಟ್ಟು ಪ್ರಕರಣಗಳಲ್ಲಿ 42 ಮಂದಿ ಗುಣ ಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 47 ಆಗಿದೆ. ತುರ್ತು ನಿಗಾ ಘಟಕದಲ್ಲಿ ಓರ್ವ ಸೋಂಕಿತ ಚಿಕಿತ್ಸೆ ಪಡೆಯುತ್ತಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಶುಕ್ರವಾರ ಪತ್ತೆ ಯಾದ ಆರು ರೋಗಿಗಳ ಪೈಕಿ ನಾಲ್ವರು ಕೋಲಾರ ತಾಲೂಕಿನಿಂದ, ಕೆಜಿಎಫ್ ಮತ್ತು ಬಂಗಾರಪೇಟೆಯಿಂದ ತಲಾ ಒಬ್ಬ ಸೋಂಕಿತರು ಪತ್ತೆಯಾಗಿದ್ದಾರೆ.
ಕೆಜಿಎಫ್‌ನ 22 ವರ್ಷದ ಆರೋಗ್ಯ ಕಾರ್ಯಕರ್ತೆ ಸೋಂಕಿತ ರಾಗಿದ್ದು, ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಬಂಗಾರಪೇಟೆಯ 45 ವರ್ಷದ ಪುರುಷ ಅಂತರ ರಾಜ್ಯದ ಪ್ರಯಾಣದ ಹಿನ್ನೆಲೆ ಹೊಂದಿದ್ದ ಪಿ.8495ರ ಸಂಪರ್ಕದಿಂದ ಸೋಂಕಿತರಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೋಲಾರದ 35 ಮತ್ತು 45 ವರ್ಷದ ಇಬ್ಬರು ಪುರುಷರು ಅಂತರರಾಜ್ಯ ಪ್ರಯಾ ಣದ ಹಿನ್ನಲೆ,
ಸೋಂಕಿತರಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಲಾರದ ಮತ್ತೂಬ್ಬ 44 ವರ್ಷದ ಪುರುಷ ಪಿ.10445 ರೋಗಿಯಿಂದ ಸಂಪರ್ಕದಿಂದ ಸೋಂಕಿತ ರಾಗಿದ್ದಾರೆ. ಇವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಲಾರದ 49 ವರ್ಷದ ಆರೋಗ್ಯ ಕಾರ್ಯಕರ್ತೆ ಸೋಂಕಿತಳಾಗಿದ್ದು, ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ.
ಜಿಲ್ಲೆಯಲ್ಲಿ ಈಗ ಪ್ರಸ್ತುತ 1472 ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ 10650 ಮಾದರಿ ಗಳನ್ನು ಪರೀಕ್ಷಿಸಲಾಗಿದ್ದು, 10114 ಮಾದರಿ ಗಳು ನೆಗಟೀವ್ ಎಂದು ವರದಿಯಾಗಿದೆ. ಜಿಲ್ಲೆಯಲ್ಲಿ ಆರು ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು ಬಿಡುಗಡೆ ಯಾದವರ ಸಂಖ್ಯೆ 42 ಆಗಿದೆ. ಬಿಡುಗಡೆಯಾದವರಲ್ಲಿ ಕೋಲಾರದ ಇಬ್ಬರು ಮತ್ತು ಶ್ರೀನಿವಾಸಪುರ ತಾಲೂಕಿನ ನಾಲ್ಕು ಮಂದಿ ಸೇರಿದ್ದಾರೆ.
ಅಂತ್ಯಸಂಸ್ಕಾರ: ಜಿಲ್ಲೆಯಲ್ಲಿ ಕೋವಿಡ್ 19ದಿಂದ ಮೊದಲ ಸಾವು ಸಂಭವಿಸಿದ್ದು, ಕೆಜಿಎಫ್ ತಾಲೂಕಿನ ತೂಕಲ್ಲು ಗ್ರಾಮದ 43 ವರ್ಷದ ಮಹಿಳೆ ಮೃತಪಟ್ಟವರಾಗಿದ್ದು, ಅವರ ಮೃತ ದೇಹಕ್ಕೆ ಕೋವಿಡ್ ಮಾರ್ಗಸೂಚಿಯಂತೆ ನಗರದ ಹಿಂದೂ ರುದ್ರಭೂಮಿಯಲ್ಲಿ ನಗರ ಸಭೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಅಂತ್ಯ ಸಂಸ್ಕಾರ ನಡೆಸಿದರು.
ದೆಹಲಿಯಿಂದ ಕೆಜಿಎಫ್ ತಾಲೂಕಿನ ತೂಕಲ್ಲು ಗ್ರಾಮಕ್ಕೆ ಬಂದಿದ್ದ ಈ ಮಹಿಳೆಗೆ ಕೋವಿಡ್ ಪಾಸಿ ಟೀವ್ ಬಂದ ಹಿನ್ನೆಲೆಯಲ್ಲಿ ನಗರ ಹೊರ ವಲಯದ ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರ ಪತಿಗೂ ಪಾಸಿ ಟೀವ್ ಬಂದಿದ್ದು, ಇಡೀ ಕುಟುಂಬವನ್ನು ಕ್ವಾರಂ ಟೇನ್‌ಗೆ ಒಳ ಪಡಿಸಲಾಗಿದೆ. ಶುಕ್ರವಾರ ಮುಂಜಾನೆ ಮೃತ ಪಟ್ಟ ಮಹಿಳೆಯನ್ನು ಸುರಕ್ಷತಾ ಕಿಟ್ ಧರಿಸಿ ನಗರದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.