Advertisement

ಬಿಸಿಜಿ ಲಸಿಕೆ ಹಾಕುವ ರಾಷ್ಟ್ರಗಳಲ್ಲಿ ಕೋವಿಡ್‌-19 ಆರ್ಭಟ ಕಡಿಮೆ

09:28 AM Apr 06, 2020 | mahesh |

ನ್ಯೂಯಾರ್ಕ್‌: ಮಹಾಮಾರಿ ಕೋವಿಡ್‌-19 ನಿಂದಾಗಿ 53 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ತ್ಯಜಿಸಿದ್ದಾರೆ. ದಿನದಿಂದ ದಿನಕ್ಕೆ ಕೋವಿಡ್ 19 ಪ್ರಕರಣಗಳು ಮತ್ತು ಸಾವಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಈ ನಡುವೆ, ಕೋವಿಡ್‌-19 ಗೆ ಔಷಧಿ ಮತ್ತು ಲಸಿಕೆ ಕಂಡು ಹಿಡಿಯುವ ಕಾಯಕದಲ್ಲಿ ಹಲವು ದೇಶಗಳ ವಿಜ್ಞಾನಿಗಳು ತೊಡಗಿಸಿಕೊಂಡಿದ್ದಾರೆ.

Advertisement

ಸುಲಭವಾಗಿ ಕೋವಿಡ್‌-19 ಎದುರಿಸಲು ಸಮರ್ಥ ಔಷಧಿ ಇದುವರೆಗೂ ಲಭ್ಯವಾಗಿಲ್ಲ. ಈ ನಡುವೆ ಅಮೆರಿಕದ ವೈದ್ಯರು ಅಚ್ಚರಿಯ ಪ್ರಯೋಗ ವೊಂದನ್ನು ಮಾಡಿದ್ದಾರೆ. ಈಗಾಗಲೇ BCG (Bacillus Calmette-Guerin) ಲಸಿಕೆ ಹಾಕಿಸಿ ಕೊಂಡವರು ಕೊರೊನಾ ವಿರುದ್ಧ ನಿರಾಯಸವಾಗಿ ಹೋರಾಡಬಹುದು ಎಂದಿದೆ. ಕಡ್ಡಾಯವಾಗಿ BCG ಲಸಿಕೆ ಹಾಕಿಸಬೇಕು ಎಂಬ ನೀತಿ ಹೊಂದಿರುವ ದೇಶಗಳಲ್ಲಿ ಕೋವಿಡ್‌-19 ನಿಂದಾಗಿ ಸಂಭ ವಿಸಿರುವ ಸಾವಿನ ಪ್ರಮಾಣ ಕಡಿಮೆ ಇದೆ ಇದು ಅವರ ಅಧ್ಯಯನದಲ್ಲಿ ತಿಳಿದುಕೊಂಡ ಅಂಶವಾಗಿದೆ. BCG ಲಸಿಕೆ ಕಡ್ಡಾಯ ಇರುವ ದೇಶಗಳಲ್ಲಿ. ಕ್ಷಯ ರೋಗವನ್ನು ತಡೆಗಟ್ಟಲು BCG ಲಸಿಕೆ ಕಡ್ಡಾಯವಾಗಿದೆ. ಆದರೆ ಕಡ್ಡಾಯ ವಲ್ಲದ ದೇಶಗಳಿಗೆ ಹೋಲಿಸಿದರೆ “BCG ಲಸಿಕೆ ಕಡ್ಡಾಯ ಮಾಡಿರುವ’ ದೇಶಗಳಲ್ಲಿ ಕೊರೊನಾ ಸೋಂಕಿತ ಪ್ರಕ ರಣಗಳು, ಸಾವಿನ ಸಂಖ್ಯೆ ತುಂಬಾ ಕಡಿಮೆ ಇದೆ.

ಜಪಾನ್‌ನಲ್ಲಿ ಕಡಿಮೆ
ಜಪಾನ್‌ನಲ್ಲಿ ಕೋವಿಡ್‌-19 ಪ್ರಕರಣಗಳು ಕಡಿಮೆ ಇರುವುದನ್ನು ಗಮನಿಸಿದ ನ್ಯೂಯಾರ್ಕ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಅಸಿಸ್ಟೆಂಟ್‌ ಪ್ರೊಫೆಸರ್‌ ಗೊನ್ಜಾಲೋ ಒಟಾಝು ಅಧ್ಯಯನಕ್ಕೆ ಮುಂದಾಗಿ ದ್ದರು. ಇಲ್ಲಿ ಯಾವೆಲ್ಲ ದೇಶ ಗಳಲ್ಲಿ ಬಿಸಿಜಿ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದೆ, ಯಾವ ರಾಷ್ಟ್ರಗಳಲ್ಲಿ ಕಡ್ಡಾಯ ಇಲ್ಲ ಎಂಬುದರ ಪಟ್ಟಿ ಸಿದ್ಧಪಡಿಸಿ ಕೊರೊನಾ ಪ್ರಕ ರಣಗಳು ಮತ್ತು ಸಾವಿನ ಪ್ರಮಾಣ ವನ್ನು ಹೋಲಿಕೆ ಮಾಡಿದ್ದಾರೆ.
ಇಲ್ಲಿ BCG ಲಸಿಕೆ ಮತ್ತು ಕೋವಿಡ್‌-19 ಕೇಸ್‌ಗಳಿಗೆ ಹತ್ತಿರದ ನಂಟು ಇರುವುದು ಕಂಡುಬಂದಿದೆ. ಅಮೆರಿಕ, ಇಟಲಿಯಲ್ಲಿ “ಅಪಾಯದಲ್ಲಿರು ವವರಿಗೆ ಮಾತ್ರ BCG ಶಿಫಾರಸು ಮಾಡಲಾಗುತ್ತದೆ. ಜರ್ಮನಿ, ಸ್ಪೇನ್‌, ಫ್ರಾನ್ಸ್ ಮತ್ತು ಯುಕೆನಲ್ಲಿ BCG ಲಸಿಕೆಯ ಕಡ್ಡಾಯದ ನಿಯಮ ಇಲ್ಲ. ಜಪಾನ್‌ ಮತ್ತು ಸೌತ್‌ ಕೊರಿಯಾದಲ್ಲಿ ಬಿಸಿಜಿ ಲಸಿಗೆ ಹಾಕುವುದು ಕಡ್ಡಾಯವಾಗಿದೆ. ಈ ಕಾರಣಕ್ಕೆ ಇತರ ರಾಷ್ಟ್ರಗಳಿಗೆ ಹೋಲಿಸಿರೆ ಜಪಾನ್‌ ಮತ್ತು ಸೌತ್‌ ಕೊರಿಯಾದಲ್ಲಿ ಕೋವಿಡ್‌-19 ನಿಂದ ಸಾವಿನ ಪ್ರಮಾಣ ಕಡಿಮೆ ಇದೆ.

ಏನಿದು ಬಿಸಿಜಿ
BCG ಲಸಿಕೆ Bacillus Calmette-Guerin) ಲಸಿಕೆ ಟ್ಯೂಬರ್‌ಕ್ಯುಲಾಸಿಸ್‌ (ಕ್ಷಯ) ಬ್ಯಾಕ್ಟೀರಿಯಾ ವಿರುದ್ಧ ಮಾತ್ರವಲ್ಲದೆ ಇತರ ಸಾಂಕ್ರಾಮಿಕ ರೋಗಗಳು ನಮ್ಮ ದೇಹ ಪ್ರವೇಶಿಸದಂತೆ ರಕ್ಷಣೆ ನೀಡುತ್ತದೆ. ಆದರೆ ಬಿಸಿಜಿ ಅಧ್ಯಯನ ಒಂದು ವರದಿಯಷ್ಟೇ ಆಗಿದ್ದು, ಲಸಿಕೆಯಾಗಿಲ್ಲ. ಆದರೆ BCG ಲಸಿಕೆ ಮೂಲಕ ಕೋವಿಡ್ 19 ತಡೆಯಬಹುದಾದ ಸಾಧ್ಯತೆ ಹೆಚ್ಚೇ ಇದೆ. ನೆದರ್‌ ಲೆಂಡ್‌ ನಲ್ಲಿ 400 ಮಂದಿ ಮೇಲೆ BCG ಲಸಿಕೆ ಪ್ರಯೋಗಿಸಲಾಗುತ್ತಿದೆ. ಇದರ ಫಲಿತಾಂಶಕ್ಕಾಗಿ 2-3 ತಿಂಗಳು ಕಾಯ ಬೇಕಾಗುತ್ತದೆ. ಆಸ್ಟ್ರೇಲಿಯಾ, ಡೆನ್ಮಾರ್ಕ್‌, ಜರ್ಮನಿ, ಯು.ಕೆ ಮತ್ತು ಯು.ಎಸ್‌.ಎ.ನಲ್ಲೂ ಪ್ರಯೋಗ ನಡೆಯಲಿದೆ.

ಲಸಿಕೆ ಯಾಕೆ ಕಡ್ಡಾಯವಿಲ್ಲ
ಇದೇ ಸಂದರ್ಭದಲ್ಲಿ ಈ ಲಸಿಕೆಯನ್ನು ಎಲ್ಲ ರಾಷ್ಟ್ರಗಳಲ್ಲಿ ಯಾಕೆ ಕಡ್ಡಾಯಗೊಳಿಸಿಲ್ಲ ಎಂಬ ಕುತೂಲವೂ ಇದೆ. ಅದಕ್ಕೆ ನಿರ್ದಿಷ್ಟ ಕಾರಣಗಳಿವೆಯೇ ಎಂಬುದನ್ನು ಪತ್ತೆ ಹಚ್ಚಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next