Advertisement

ಕೋವಿಡ್ 19 ಆತಂಕದಿಂದ ಹೋಮ್‌ ಕ್ವಾರಂಟೈನ್ ಆದ ದೊಡ್ಡಣ್ಣ

09:11 AM Jul 09, 2020 | Lakshmi GovindaRaj |

ಕೋವಿಡ್ 19 ಸೋಂಕಿನ ಸಮಸ್ಯೆಯಿಂದ ದೇಶವೇ ತತ್ತರಿಸುತ್ತಿದೆ. ದಿನಪ್ರತಿ ಸೋಂಕಿತರ ಸಂಖ್ಯೆ, ಸಾವನ್ನಪ್ಪುತ್ತಿರುವ ಸಂಖ್ಯೆಯೂ ಏರಿಕೆ ಕಾಣುತ್ತಿದೆ. ಆದರೆ ಮತ್ತೊಂದು ಕಡೆ ಕೋವಿಡ್ ಸೋಂಕಿನ ಪರೋಕ್ಷ ಹೊಡೆತದಿಂದ ಹಲವರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ  ಭಯ ಸ್ಯಾಂಡಲ್​ವುಡ್ ಮಂದಿಯನ್ನೂ ಬಿಟ್ಟಿಲ್ಲ. ಕೆಲ ದಿನಗಳ ಹಿಂದಷ್ಟೇ  ಸಂಸದೆ ಸುಮಲತಾ ಅವರಿಗೆ ಕೋವಿಡ್‌ 19 ಪಾಸಿಟಿವ್ ಬಂದಿದ್ದು, ಇದೀಗ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇವರ ನಿಕಟವರ್ತಿಯಾಗಿದ್ದ ನಿರ್ಮಾಪಕ, ನಟ ರಾಕ್‌ಲೈನ್‌ ವೆಂಕಟೇಶ್‌ ಕೂಡ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಬೆನ್ನಲ್ಲೇ ಹಿರಿಯ ನಟ ದೊಡ್ಡಣ್ಣನಿಗೂ ಕೋವಿಡ್‌ 19 ಆತಂಕ ಶುರುವಾಗಿದೆ.

Advertisement

ಹೌದು! ದೊಡ್ಡಣ್ಣ ಸಹ ಸುಮಲತಾ, ಹಾಗೂ ರಾಕ್‌ಲೈನ್‌ ವೆಂಕಟೇಶ್ ಸಂಪರ್ಕದಲ್ಲಿದ್ದು, ಈ ಹಿಂದೆ ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರವಾಗಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಅವರು ಸ್ವಯಂ ಪ್ರೇರಿತರಾಗಿ  ಹೋಮ್ ಕ್ವಾರಂಟೈನ್‌ ಆಗಿದ್ದಾರೆ. ಅಲ್ಲದೇ ಕಲಾವಿದರ ಸಂಘದ ಖಜಾಂಚಿಯಾಗಿರುವುದರಿಂದ ಮನೆಯಿಂದಲೇ ಸಂಘದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next