Advertisement

ಕೋವಿಡ್-19 ಬಾಧೆ: ಪಡುಬಿದ್ರಿ ಬಾದೆಟ್ಟು ಪ್ರದೇಶ ಸೀಲ್‌ಡೌನ್‌

11:12 PM Jun 02, 2020 | Sriram |

ಪಡುಬಿದ್ರಿ: ಮಹಾರಾಷ್ಟ್ರದಿಂದ ಬಂದಿದ್ದ ಪಡುಬಿದ್ರಿಯ ಬಾದೆಟ್ಟು ಪ್ರದೇಶ‌ದಲ್ಲಿನ ನಾಲ್ವರ ಕೋವಿಡ್-19 ವರದಿ ಪಾಸಿಟಿವ್‌ ಆಗಿದ್ದು, ಅವರನ್ನು ಉಡುಪಿಯ ಡಾ| ಟಿಎಂಎ ಪೈ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪಡುಬಿದ್ರಿ ಬಾದೆಟ್ಟು ಪ್ರದೇಶದ ನಾಲ್ಕು ಮನೆಗಳು ಸೀಲ್‌ಡೌನ್‌ ಆಗಿವೆ.

Advertisement

ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು ಕಾರ್ಕಳದಲ್ಲಿ ಕ್ವಾರಂಟೈನ್‌ನಲ್ಲಿದ್ದಾಗ ಇವರ ಜತೆಗಿದ್ದ ಮಹಿಳೆಗೆ ಕೋವಿಡ್-19 ಲಕ್ಷಣ ಕಂಡುಬಂದಿದ್ದರೂ ವರದಿ ಬರುವ ಮೊದಲೇ ಮನೆಗೆ ಕಳುಹಿಸಲಾಗಿತ್ತು. ಮಂಗಳವಾರ ಆಸ್ಪತ್ರೆಗೆ ದಾಖಲಾದವರಲ್ಲಿ 38ರ ಹರೆಯದ ಮಹಿಳೆ ಮತ್ತು 46, 16 ಹಾಗೂ 40ರ ವಯೋಮಾನದ ಪುರುಷರು ಇದ್ದಾರೆ. ಇವರ ಜತೆಗಿದ್ದ ಮಹಿಳೆ ಈಗಾಗಲೇ ಕುಂದಾಪುರದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮೂರು ವರ್ಷದ ಮಗುವಿಗೆ ಕೊರೊನಾ ನೆಗೆಟಿವ್‌ ಆಗಿದ್ದು, ಆ ಮಗು ಮುಂಡ್ಕೂರಿನ ಅಜ್ಜಿ ಮನೆಯಲ್ಲಿದೆ.

ಸ್ಥಳಕ್ಕೆ ಕಾಪು ತಹಶೀಲ್ದಾರ್‌ ಮಹಮ್ಮದ್‌ ಐಸಾಕ್‌, ಪಡುಬಿದ್ರಿ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ| ಬಿ.ಬಿ. ರಾವ್‌, ಪಿಎಸ್‌ಐ ಸುಬ್ಬಣ್ಣ, ಪಡುಬಿದ್ರಿ ಪಿಡಿಒ ಪಂಚಾಕ್ಷರಿ ಸ್ವಾಮಿ, ಹೆಜಮಾಡಿ ಗ್ರಾಮಲೆಕ್ಕಿಗ ಅರುಣ್‌ ಕುಮಾರ್‌ ಹಾಗೂ ಪಡುಬಿದ್ರಿ ಗ್ರಾಮಲೆಕ್ಕಿಗ ಶ್ಯಾಮ್‌ಸುಂದರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next