Advertisement

ಹಾಸನದಲ್ಲಿ 85ಕ್ಕೇರಿದ ಕೋವಿಡ್‌ 19 ಸೋಂಕು

06:19 AM May 23, 2020 | Lakshmi GovindaRaj |

ಹಾಸನ: ಮುಂಬೈನಿಂದ ಹಾಸನ ಜಿಲ್ಲೆಗೆ ಬಂದವರಿಂದ ಕೋವಿಡ್‌ 19 ಕಂಟಕ ಮುಂದುವರಿಯುತ್ತಲೇ ಇದೆ. ಶುಕ್ರವಾರ ಹೊಸದಾಗಿ18 ಕೋವಿಡ್‌ 19 ಪಾಸಿಟಿವ್‌ ಪ್ರಕರಣ ವರದಿಯಾಗಿದ್ದು, ಜಿಲ್ಲೆಯಲ್ಲೀಗ ಕೋವಿಡ್‌ 19 ಸೋಂಕಿತರ  ಒಟ್ಟು ಸಂಖ್ಯೆ 85ಕ್ಕೆ ಏರಿದೆ. ಶುಕ್ರವಾರ ವರದಿಯಾದ 18 ಕೋವಿಡ್‌ 19 ಪಾಸಿಟಿವ್‌ ಪ್ರಕರಣಗಳೆಲ್ಲವೂ ಚನ್ನರಾಯಪಟ್ಟಣ ತಾಲೂಕು ಮೂಲದವು.

Advertisement

ಎಲ್ಲರೂ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ ನಲ್ಲಿದ್ದವರು. ಜಿಲ್ಲೆಯಲ್ಲಿನ  ಒಟ್ಟು 85 ಪ್ರಕರಣಗಳಲ್ಲಿ 60 ಮಂದಿ ಸೋಂಕಿತರು ಚನ್ನರಾಯಪಟ್ಟಣ ತಾಲೂಕು ಮೂಲದವರಾಗಿದ್ದಾರೆ. ಸೋಂಕಿತರು ಮೇ 12ರಿಂದ ಮೇ 15ರ ನಡುವೆ ಮಹಾರಾಷ್ಟ್ರದಿಂದ ಬಂದವರಾಗಿದ್ದು, ಎಲ್ಲರನ್ನೂ ಕ್ವಾರಂಟೈನ್‌ನಲ್ಲಿಡಲಾಗಿತ್ತು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಇದುವರೆಗೂ ವರದಿಯಾಗಿರುವ 85 ಸೋಂಕಿತರಲ್ಲಿ ಇಬ್ಬರು ಮಾತ್ರ ತಮಿಳುನಾಡಿ ನಿಂದ ಬಂದವರಾಗಿದ್ದು, ಇನ್ನುಳಿದ ಎಲ್ಲಾ  83 ಸೋಂಕಿತರು ಮಹಾರಾಷ್ಟ್ರದಿಂದ ಬಂದವರು. ಸೋಂಕಿತರೆಲ್ಲರೂ ಹಾಸನದ ಕೋವಿಡ್‌ 19 ಆಸ್ಪತ್ರೆಯಾಗಿ ಘೋಷಣೆಯಾಗಿರುವ ಹಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದರು. ತಮಿಳುನಾಡಿನಿಂದ ಕಾರ್ಮಿಕನೊಬ್ಬ ಲಾರಿಯಲ್ಲಿ ಬಂದು ಹಾಸನ ನಗರದ ಗಂಧದ ಕೋಠಿಯಲ್ಲಿ ವಲಸಿಗ ಕಾರ್ಮಿಕರ ಶಿಬಿರದಲ್ಲಿದ್ದ.

ಆತ ಬೆಳಗ್ಗೆ 5ಕ್ಕೆ ಬಂದು ತನ್ನ ಪತ್ನಿಯಿದ್ದ ಶಿಬಿರದಲ್ಲಿದ್ದ. ಆತನನ್ನು  ಅಲ್ಲಿದ್ದ ಕಾರ್ಮಿಕರೇ ಬೆಳಗ್ಗೆ 7ರ ವೇಳೆಗೆ ಆಸ್ಪತ್ರೆಗೆ ತಂದು ಒಪ್ಪಿಸಿದ್ದರು. ಅನಂತರ ಪತಿ – ಪತ್ನಿಗೂ ಪಾಸಿಟಿವ್‌ ಕಂಡು ಬಂದಿತ್ತು. ತಮಿಳುನಾಡಿನಿಂದ ಬಂದ ಕಾರ್ಮಿಕನ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರ ಗಂಟಲು ದ್ರವ ಪರೀಕ್ಷೆ ಮಾಡಿಸಲಾಗಿತ್ತು. ಅವರಲ್ಲಿ ಕೋವಿಡ್‌ 19 ನೆಗೆಟಿವ್‌ ಕಂಡು ಬಂದಿದೆ ಎಂದು ಸ್ಪಷ್ಟಪಡಿಸಿದರು.

1654 ಜನ ಆಗಮನ: ಹೊರ ರಾಜ್ಯಗಳಿಂದ ಇಂದಿನವರೆಗೆ 1654 ಜನ ಹಾಸನ ಜಿಲ್ಲೆಗೆ ಬಂದಿದ್ದು, ಅವರ ಪೈಕಿ 450 ಜನ ರ ಪರೀಕ್ಷಾ ವರದಿ ಬರಬೇಕಾಗಿದೆ ಎಂದ ಜಿಲ್ಲಾಧಿಕಾರಿ, 2 ದಿನಗಳಿಂದೀಚೆಗೆ ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ  ಕಡಿಮೆಯಾಗಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next