ರಾಮನಗರ: ಜಿಲ್ಲೆಯಲ್ಲಿ ಈವರೆಗೂ ಕೋವಿಡ್-19 ಸೋಂಕಿನ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. 2020ರ ಫೆಬ್ರವರಿ ಎರಡನೇ ವಾರದಿಂದಲೇ ಜಿಲ್ಲಾಡಳಿತ ತೆಗೆದುಕೊಂಡ ಕಠಿಣ ಕ್ರಮಗಳು ಸೋಂಕು ಹರಡುವುದನ್ನು ತಪ್ಪಿಸಿದೆ. ಲಾಕ್‌ಡೌನ್‌ಗೂ ಮುನ್ನವೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸರು ಜಿಲ್ಲೆಯ ಹೆದ್ದಾರಿ ಬದಿಗಳ ಹೋಟೆಲ್, ಟೀ ಅಂಗಡಿ ಮುಚ್ಚಿಸಿದೆ. ಹೆದ್ದಾರಿ ವಾಹನ ಸಂಚಾರದ ಮೇಲೆ ತೀವ್ರ ನಿಗಾ, ಕೋವಿಡ್-19 ಸೋಂಕಿನ ಜನಜಾಗೃತಿ, ಸ್ವತ್ಛತೆ ಜಾಗೃತಿಗಳು ಬಹಳ ನೆರವಾದವು. ಜಿಲ್ಲಾ ವ್ಯಾಪ್ತಿಯ ಬೆಂಗಳೂರು- ಮೈಸೂರು, ಬೆಂಗಳೂರು-ಮಂಗಳೂರು ಹೆದ್ದಾರಿ ಹೋಟೆಲ್‌ಗಳನ್ನು ಜಿಲ್ಲಾಡಳಿತ
ಮುಚ್ಚಿಸಿ, ಸೋಂಕು ಹರಡುವುದನ್ನು ತಪ್ಪಿಸಿದೆ.
ಜಿಲ್ಲಾಡಳಿತದ ಈ ಕ್ರಮಕ್ಕೆ ಆಗ ಜನತೆ ಬೇಸರಗೊಂಡರಾದರೂ, ಈಗ ಬೆನ್ನು ತಟ್ಟುತ್ತಿದ್ದಾರೆ. ಮಾರ್ಚ್ ಆರಂಭದಲ್ಲೇ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಆರೋಗ್ಯ ಇಲಾಖೆ ಐಸೋಲೇಷನ್ ವಾರ್ಡು ಸ್ಥಾಪಿಸಿ, ವಿದೇಶಿಯರ ಮೇಲೆ ಅಧಿಕಾರಿಗಳು ನಿಗಾವಹಿಸಿದ್ದರು. ಸಹಾಯವಾಣಿ ಸ್ಥಾಪಿಸಲಾಗಿತ್ತು. ಜಾಗೃತಿ ಎಷ್ಟರ ಮಟ್ಟಿಗಿತ್ತು ಅಂದರೆ ಮಾರ್ಚ್ 9ರಂದು ನಡೆದ ಹೋಳಿ ಹಬ್ಬ ತನ್ನ ರಂಗು ಕಳೆದುಕೊಂಡಿತ್ತು. ಶಾಲಾ -ಕಾಲೇಜುಗಳ ರಜೆ ಆರಂಭವಾಯಿತು. ಜನರಲ್ಲಿ ಜಾಗೃತಿ ಮೂಡಿ ಮಾಸ್ಕ್, ಸ್ಯಾನಿಟೈಸರ್‌ಗಳಿಗೆ ಮುಗಿಬಿದ್ದರು. ಚಿತ್ರ ಮಂದಿರಗಳು, ಆಹಾರ ಮಳಿಗೆಗಳನ್ನು ಬಂದ ಮಾಡಿಸಲಾಯಿತು. ವಿದೇಶಗಳಿಂದ ರಾಮನಗರ ಜಿಲ್ಲೆಗೆ ಬಂದ 30 ಮಂದಿಯ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿತು.
ಮಾರ್ಚ್ 18ರಂದು ಚನ್ನಪಟ್ಟಣ ಮತ್ತು ಮಾಗಡಿಗೆ ವಿದೇಶಗಳಿಂದ ಮರಳಿದ ಇಬ್ಬರ ರಕ್ತ ಮಾದರಿ ಪರೀಕ್ಷೆ ನೆಗೆಟಿವ್ ಬಂದಿತ್ತು. ಜಿಲ್ಲೆಯ ಜನರು ಗಂಭೀರವಾಗಿ ಪರಿಗಣಿಸಿ, ಕೆಮ್ಮು, ನೆಗಡಿ ಬಂದವರು ಆಸ್ಪತ್ರೆಗಳತ್ತ ದೌಡಾಯಿಸಿದರು. ಔಷಧ ಸಿಂಪಡಿಸಲಾಯಿತು. ಅಂತರ್‌ಜಿಲ್ಲಾ ವಾಹನ ಓಡಾಟ ಬಂದ್ ಆಯಿತು. ರೇಷ್ಮೆ ಗೂಡು ಮಾರುಕಟ್ಟೆ ಮುಚ್ಚಲು ಜಿಲ್ಲಾಡಳಿತ ನಿರ್ದರಿಸಿತು. ಈ ವೇಳೆಗೆ ಜಿಲ್ಲೆಯಲ್ಲಿ 118 ಮಂದಿ ಮೇಲೆ ಆರೋಗ್ಯ ಇಲಾಖೆ ನಿಗಾ ಆರಂಭಿಸಿತ್ತು. ಲಾಕ್‌ಡೌನ್ ಆರಂಭವಾದ ನಂತರ ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಜನ ಹೊರಗೆ ಬರುತ್ತಿದ್ದಾರೆ. 100 ಹಾಸಿಗೆಗಳ ಕೋವಿಡ್ 19 ಆಸ್ಪತ್ರೆ ಸಿದ್ಧವಾಗಿದೆ.
ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಪಂ ಸಿಇಒ ಇಕ್ರಂ. ಎಸ್ಪಿ ಅನೂಪ್ ಶೆಟ್ಟಿ, ಡಿಎಚ್‌ಒ ಡಾ.ನಿರಂಜನ್ ಮತ್ತು ತಂಡ, ನಗರಾಭಿವೃದ್ದಿ ಕೋಶದ ನಿರ್ದೇಶಕ ಮಾಯಣ್ಣ ಗೌಡ, ನಗರಸಭೆಯ ಆಯುಕ್ತೆ ಬಿ.ಶುಭಾ, ರಾಮನಗರ ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್, ಇಒ ಶಿವಕುಮಾರ್ ಮುಂತಾದವರ ಶ್ರಮ ಕೆಲಸ ಮಾಡುತ್ತಿದೆ. ಜನರ ಸಹಕಾರ ದೊರೆಯದ ಹೊರತು ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲಾಗುವುದಿಲ್ಲ ಎಂಬುದು ಈ ಅಧಿಕಾರಿಗಳ ಹೇಳಿಕ
ಜಿಲ್ಲೆಯಲ್ಲಿ ಸೋಂಕು ಕಂಡಿಲ್ಲ. ಕಂಡರೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. 100 ಹಾಸಿಗೆಗಳ ಕೊರೊನಾ ಆಸ್ಪತ್ರೆ ಸಿದ್ಧವಿದೆ. 16 ಐಸಿಯುಗಳು, 3 ವೆಂಟಿಲೇಟರ್‌ಗಳು ಆರೋಗ್ಯ ಸೇವೆಗೆ ಸಿದ್ಧವಾಗಿವೆ. 9 ಫಿವರ್ ಕ್ಲೀನಿಕ್‌ಗಳು ಕಾರ್ಯಾರಂಭಿಸಿವೆ.
ಎಂ.ಎಸ್.ಅರ್ಚನಾ, ಜಿಲ್ಲಾಧಿಕಾರಿ
ಬಿ.ವಿ. ಸೂರ್ಯಪ್ರಕಾಶ್