Advertisement

ಮನೆಯಲ್ಲೇ ಹಬ್ಬ ಪ್ರಯಾಣ  ಬೇಡ

11:05 PM Sep 30, 2021 | Team Udayavani |

ಹೊಸದಿಲ್ಲಿ: “ಶೀಘ್ರದಲ್ಲಿಯೇ ದೇಶದಲ್ಲಿ ಹಬ್ಬಗಳ ಸರಣಿ ಶುರುವಾಗಲಿದೆ. ಹೀಗಾಗಿ ಅನಗತ್ಯ ಪ್ರಯಾಣ ಬೇಡ. ಮನೆಯಲ್ಲಿಯೇ ಸರಳವಾಗಿ ಹಬ್ಬ ಆಚರಿಸಿ’  ಹೀಗೆಂದು ಕೇಂದ್ರ ಸರಕಾರ ಮನವಿ ಮಾಡಿಕೊಂಡಿದೆ.

Advertisement

ಹೊಸದಿಲ್ಲಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಮತ್ತು ಐಸಿಎಂಐಆರ್‌ ಮಹಾನಿರ್ದೇಶಕ ಡಾ|  ಬಲರಾಮ ಭಾರ್ಗವ, ಈ ಮನವಿ ಮಾಡಿದ್ದಾರೆ. ಸದ್ಯ ಸೋಂಕು ಪ್ರಮಾಣ ಕಡಿಮೆಯಾಗಿದ್ದರೂ, ಹೆಚ್ಚಿನ ಜನರು ಸೇರಿದರೆ ಅದು ಹರಡುವ ಸಾಧ್ಯತೆ ಇದೆ. ಹೀಗಾಗಿ, ಜನರು ಮುಂದಿನ ದಿನಗಳಲ್ಲಿ ಬರಲಿರುವ ಹಬ್ಬ, ಉತ್ಸವಗಳ ಅವಧಿಯಲ್ಲಿ ಅನಗತ್ಯ ಪ್ರಯಾಣ ಮಾಡಬಾರದು. ಮನೆಯಲ್ಲಿಯೇ ಹಬ್ಬಗಳನ್ನು ಆಚರಿಸ ಬೇಕು ಎಂದು ದೇಶವಾಸಿಗಳಿಗೆ ಮನವಿ ಮಾಡಿ ದ್ದಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ.

ಶೇ.69 ಮಂದಿಗೆ ಮೊದಲ ಡೋಸ್‌: ದೇಶದ ಶೇ.69 ಮಂದಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ. ಶೇ.25 ಮಂದಿಗೆ ಎರಡೂ ಡೋಸ್‌ ನೀಡಲಾಗಿದೆ ಎಂದು ಹೇಳಿ ದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶ ದಲ್ಲಿ 67.4 ಲಕ್ಷ ಡೋಸ್‌ ಲಸಿಕೆಯನ್ನು ಇದುವರೆಗೆ ನೀಡಲಾಗಿದೆ. ಕಳೆದ ವಾರದ ವರೆಗೆ ದೃಢಪಟ್ಟ ಶೇ.59.66 ಕೇಸುಗಳ ಪೈಕಿ ಕೇರಳದ ಪಾಲು ಹೆಚ್ಚು. ಅಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚು ಸಕ್ರಿಯ ಸೋಂಕು ಪ್ರಕರಣಗಳಿವೆ ಎಂದು ಹೇಳಿದ್ದಾರೆ.ದೇಶದಲ್ಲಿ ಸೋಂಕು ಪತ್ತೆ ಪರೀಕ್ಷೆಯನ್ನು ತಗ್ಗಿಸಿಲ್ಲ. ಪ್ರತಿದಿನ 15ರಿಂದ 16 ಲಕ್ಷ ಪರೀಕ್ಷೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಸೋಂಕು ಹೆಚ್ಚಳ: ಎರಡು ದಿನಗಳಿಂದ ದೇಶದಲ್ಲಿ ಇಳಿಕೆ ಹಂತದಲ್ಲಿದ್ದ ಸೋಂಕು ಸಂಖ್ಯೆ ಕೊಂಚ ಏರುಮುಖವಾಗಿದೆ. ಬುಧ ವಾರ ದಿಂದ ಗುರುವಾರದ ಅವಧಿ ಯಲ್ಲಿ  23, 529 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದೇ ಅವಧಿಯಲ್ಲಿ 311 ಮಂದಿ ಅಸುನೀಗಿ ದ್ದಾರೆ. ಸಕ್ರಿಯ ಸೋಂಕು ಸಂಖ್ಯೆಯ ಪ್ರಮಾಣ 2,77,020ಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.97.85 ಆಗಿದೆ.

28 ಕೋಟಿ  ಡೋಸ್‌ ಖರೀದಿ :

Advertisement

ಈ ತಿಂಗಳೇ ಕೇಂದ್ರ ಸರಕಾರ 27ರಿಂದ 28 ಕೋಟಿ ಡೋಸ್‌ ಲಸಿಕೆ ಖರೀ ದಿಸಲು  ಮುಂದಾಗಿದೆ. ಪುಣೆ ಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿ ಯಾ ಮತ್ತು ಹೈದರಾಬಾದ್‌ನ ಭಾರತ್‌ ಬಯೋಟೆಕ್‌ನ ಕೊವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ಲಸಿಕೆಗಳನ್ನು ಖರೀದಿಸ ಲಾಗುತ್ತದೆ. ಮೊತ್ತಂದು ಪ್ರಮುಖ ನಿರ್ಧಾರದಲ್ಲಿ ಕೇಂದ್ರ ಸರಕಾರ ಡಿ.31ರ ವರೆಗೆ ಲಸಿಕೆಗಳಿಗೆ ಕಸ್ಟಮ್ಸ್‌ ಸುಂಕವನ್ನು ಮನ್ನಾ ಮಾಡಿ ಆದೇಶ ಹೊರಡಿಸಿದೆ. ಇದರಿಂದಾಗಿ ದೇಶೀಯ ಕಂಪೆನಿಗಳಿಗೆ ಲಸಿಕೆ ಉತ್ಪಾದನೆ ಮಾಡಲು ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next