Advertisement
ರಾಜ್ಯದಲ್ಲಿ ಈ ವರೆಗೆ ಇಬ್ಬರು ಸಾವಿಗೀಡಾಗಿದ್ದಾರೆ. ಸೋಂಕಿತರ ಪೈಕಿ 26 ಮಂದಿ ಗುಣಮುಖರಾಗಿದ್ದಾರೆ; ಅವರಲ್ಲಿ ನಾಲ್ವರು ವಿದೇಶಿಯರು. ಪ್ರಸ್ತುತ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಾಗಿ 237 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕಾಸರಗೋಡು ಮೆಡಿಕಲ್ ಕಾಲೇಜನ್ನು ನಾಲ್ಕು ದಿನಗಳೊಳಗೆ ಕೋವಿಡ್ 1 ಕೇರ್ ಸೆಂಟರ್ ಆಗಿ ಮಾರ್ಪಡಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
Related Articles
ಕಾಸರಗೋಡು ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ಪೊಲೀಸರು ಡಬ್ಬಲ್ ಲಾಕ್ ಭದ್ರತೆ ಏರ್ಪಡಿಸಿದ್ದಾರೆ.
Advertisement
ಕಾಸರಗೋಡು ನಗರಸಭೆ ಮತ್ತು 6 ಗ್ರಾಮ ಪಂಚಾಯತ್‌ಗಳು ಪೊಲೀಸರ ಬಿಗಿ ಸುಪರ್ದಿಯಲ್ಲಿವೆ.
ಕೋವಿಡ್ 19 ಸೋಂಕು ಅತ್ಯಧಿಕ ಪ್ರಮಾಣದಲ್ಲಿ ಖಚಿತಗೊಂಡಿರುವ ಪ್ರದೇಶಗಳಲ್ಲಿ ರಾಜ್ಯ ಸರಕಾರದ ಆದೇಶ ಪ್ರಕಾರ ಈ ಡಬ್ಬಲ್ ಲಾಕ್ ಭದ್ರತೆ ಏರ್ಪಡಿಸಲಾಗಿದೆ.
ಕಾಸರಗೋಡು ನಗರಸಭೆ, ಮಧೂರು, ಮೊಗ್ರಾಲ್ ಪುತ್ತೂರು, ಚೆಂಗಳ, ಚೆಮ್ನಾಡ್, ಪಳ್ಳಿಕ್ಕರೆ, ಉದುಮ ಗ್ರಾಮ ಪಂಚಾಯತ್ ಪೊಲೀಸರ ವಿಶೇಷ ನಿಗಾದಲ್ಲಿವೆ.