Advertisement

ಖಾಲಿ ಅಪಾರ್ಟ್‌ಮೆಂಟ್‌ನಲ್ಲಿ ಕೋವಿಡ್‌ 19 !

01:40 AM Aug 28, 2020 | mahesh |

ಬೀಜಿಂಗ್‌: ಹಲವು ತಿಂಗಳುಗಳಿಂದ ಖಾಲಿ ಇರುವ ಅಪಾಟ್‌ಮೆಂಟ್‌ನ ಶೌಚಾಲಯದಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಒಂದು ತಿಂಗಳಿನಲ್ಲಿ ಐದು ಮಂದಿಗೆ ಶೌಚಾಲಯದಿಂದಲೇ ಕೋವಿಡ್ ಸೋಂಕು ಹರಡಲು ಕಾರಣವಾಗಿದೆ.

Advertisement

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸಾರ್ಸ್‌ ಕೋವ್‌ 2 ಮುಖ್ಯವಾಗಿ ಮೂಗು ಅಥವಾ ಬಾಯಿಂದ ಹೊರಬರುವ ಹನಿಗಳ ಮೂಲಕ ಹರಡುತ್ತದೆ. ಸಾಂಕ್ರಾಮಿಕ ರೋಗದ ಮೊದಲ ವಾರದಿಂದಲೇ ವಿಜ್ಞಾನಿಗಳು ಕೊವಿಡ್‌ 19 ರೋಗಿಗಳ ಮಲದಲ್ಲಿನ ಸಾಂಕ್ರಾಮಿಕ ಸಾರ್ಸ್‌ ಕೋವ್‌ 2 ವೈರಸ್‌ ಸಹ ಪಾತ್ರ ವಹಿಸುತ್ತದೆ ಎಂದು ಹೇಳಿದ್ದರು. ಶೌಚಾಲಯದ ಫ್ಲಶ್‌ನಿಂದ ತ್ಯಾಜ್ಯ ಕೊಳವೆಗಳ ಮೂಲಕ ವೈರಸ್‌ ಹರಡಬಹುದೇ ಎಂಬುದನ್ನು ಅರಿಯುವ ಸಲುವಾಗಿ ವಿಜ್ಞಾನಿಗಳು ಆನ್‌ ಸೈಟ್‌ ಟ್ರೇಸರ್‌ ಸಿಮ್ಯುಲೇಷನ್‌ ಪ್ರಯೋಗ ನಡೆಸಿದರು. ಸ್ನಾನ ಗೃಹಗಳಲ್ಲಿ ಏರೋಸಾಲ್‌ ಎಂದು ಕರೆಯಲ್ಪಡುವ ಕಣಗಳ ಬಗ್ಗೆ ಕಂಡುಕೊಂಡರು. ಫೆಬ್ರವರಿಯಿಂದ ಪ್ರತಿಯೊಂದು ಮಹಡಿಗಳಲ್ಲಿ ಎರಡು ಪ್ರಕರಣಗಳು ದೃಢಪಟ್ಟವು. ಸಾರ್ಸ್‌ ಕೋವ್‌ 2 ತುಂಬಿದ ಕಣಗಳು ಮಲದಿಂದ ಕೊಳಾಯಿಗಳ ಮೂಲಕ ಎಲ್ಲರ ಮನೆಗಳಿಗೆ ಹರಡಿತ್ತು.ಚರಂಡಿಯಲ್ಲಿನ ಪೈಪ್‌ಲೈನ್‌ ಮೂಲಕ 329 ಮಂದಿಗೆ ಸಾರ್ಸ್‌ ರೋಗ ಹರಡಿತ್ತು. ಈ ಘಟನೆಯಲ್ಲಿ 40 ಮಂದಿ ಸಾವನ್ನಪ್ಪಿದ್ದರು. ಇದೇ ರೀತಿ ಕೋವಿಡ್ ವೈರಸ್‌ ಕೂಡ ಹರಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next