ನೆಲಮಂಗಲ: ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಗೊಳ್ಳುತ್ತಿದ್ದಂತೆ ಕೋವಿಡ್ 19 ರಣಕೇಕೆ ಆರಂಭಿಸಿದೆ. ಅದರ ನಿಯಂತ್ರಣಕ್ಕೆ ಸರ್ಕಾರ ತಾಲೂಕು ಮಟ್ಟದಲ್ಲಿ ಕೋವಿಡ್-19 ಆಸ್ಪತ್ರೆ ಆರಂಭಿಸಲು ಸಿದ್ಧತೆ ನಡೆಸಿದೆ. ರಾಜ್ಯದ 15 ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ 19 ಚಿಕಿತ್ಸೆ ಆರಂಭಿಸಲಾಗಿದ್ದು, ಸರ್ಕಾರ 518 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರ ನಿಗದಿ ಗೊಳಿಸಿ, ಅವಕಾಶ ನೀಡಿದರೆ ಸರ್ಕಾರದ 146 ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್-19 ಆಸ್ಪತ್ರೆಗಳನ್ನಾಗಿಸಲು ಸಿದ್ಧತೆ ನಡೆಸಿದೆ.
ಕನಿಷ್ಠ 30 ಹಾಸಿಗೆ ವ್ಯವಸ್ಥೆ: ತಾಲೂಕು ಮಟ್ಟದಲ್ಲಿ ಕೋವಿಡ್ 19 ಸೋಂಕು ತಗುಲಿದವರನ್ನು ಜಿಲ್ಲಾಸ್ಪತ್ರೆ ಅಥವಾ ಬೆಂಗಳೂರಿಗೆ ಕಳುಹಿಸಬೇಕಿತ್ತು. ಆದರೆ, ತಾಲೂಕು ಕೋವಿಡ್-19 ಆಸ್ಪತ್ರೆಗಳಲ್ಲಿ ಕನಿಷ್ಠ 30 ಹಾಸಿಗೆ ಆರಂಭದಿಂದ ಸೋಂಕಿತರು ಸ್ಥಳೀಯ ಸಾರ್ವ ಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಈಗಾ ಗಲೇ ಬೆಂಗಳೂರು ಸಮೀಪವಿರುವ ನೆಲಮಂಗಲ ತಾಲೂಕಿನ ಹರ್ಷರಾಮಯ್ಯ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ 60 ಹಾಸಿಗೆ ವ್ಯವಸ್ಥೆಗೊಳಿಸಲಾಗಿದ್ದು ಬೆಂಗ ಳೂರಿಗೆ ಹೋಗಬೇಕಾಗಿದ್ದ 11 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಾರಿಯರ್ಗಳಿಗೆ ಕಂಟಕ: ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್ 19 ವಾರಿಯರ್ಸ್‌ಗಳಾಗಿ ಕೆಲಸ ಮಾಡುತ್ತಿರುವ ಪೊಲೀಸರು, ವೈದ್ಯರು, ಕಂದಾಯ ಅಧಿಕಾರಿಗಳು ಸೇರಿ ಸರ್ಕಾರಿ ಅಧಿಕಾರಿಗಳಿಗೆ ಕೋವಿಡ್ 19 ಪಾಸಿಟಿವ್ ಬರುತ್ತಿ ರುವುದರಿಂದ ಚಿಕಿತ್ಸೆ, ಸೌಲಭ್ಯ ನೀಡಲು ಅನೇಕ ಅಧಿಕಾರಿಗಳು ಆತಂಕಪಡುತ್ತಿದ್ದಾರೆ.
ಎಚ್ಚರಿಕೆ ವಹಿಸದ ಸರ್ಕಾರ: ಕೋವಿಡ್ 19 ದಿನೆ ದಿನೇ ಹೆಚ್ಚುತ್ತಿದ್ದರೂ ಹೊರರಾಜ್ಯ ಹಾಗೂ ಜಿಲ್ಲೆಯಿಂದ ಬರುವ ಜನ ಪರೀಕ್ಷೆ ಹಾಗೂ ಮುಂಜಾಗ್ರತೆ ಕ್ರಮ ಅನುಸರಿಸದೆ ಸುತ್ತಾಡುತ್ತಿದ್ದಾರೆ. ಕೆಲವು ಗಡಿಗಳಲ್ಲಿ ತಪಾಸಣೆ ಕೇಂದ್ರವಿದ್ದರೂ, ಪರೀಕ್ಷೆ ಮಾತ್ರ ನಡೆಯುತ್ತಿಲ್ಲ. ಕೋವಿಡ್ 19 ನಿಯಂತ್ರಣ ಮಾಡಬೇಕು ಎಂಬ ಸರ್ಕಾರ ನಿಯಂತ್ರಣಕ್ಕೆ ಎಚ್ಚರಿಕೆ ವಹಿಸಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.
ಕೋವಿಡ್ 19 ಸೋಂಕಿತ ವ್ಯಕ್ತಿ ಪ್ರತಿಕ್ರಿಯಿಸಿ, ಸ್ಥಳೀಯ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯದ ಮೂಲಕ ಚಿಕಿತ್ಸೆ ನೀಡುತ್ತಿರುವುದು ನಮಗೆ ಧೈರ್ಯ ಹೆಚ್ಚಾಗಿದೆ. ಬೆಂಗಳೂರಿನ ನೂರಾರು ಜನರ ಗುಂಪಿನಲ್ಲಿ ಚಿಕಿತ್ಸೆ ಪಡೆಯುವುದಕ್ಕಿಂತ ಉತ್ತಮವಾಗಿದ್ದು, ಸರ್ಕಾರ ಸ್ಥಳೀಯವಾಗಿ ಆಸ್ಪತ್ರೆ ವ್ಯವಸ್ಥೆ ಮಾಡಿದರೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.