Advertisement
ಜಿಲ್ಲೆಯಲ್ಲಿ ಒಟ್ಟು 17,386 ಹೆಕ್ಟೇರ್ ಗೇರು, 335 ಹೆಕ್ಟೇರ್ ಮಾವು ಮತ್ತು 934 ಹೆಕ್ಟೇರ್‌ನಲ್ಲಿ ಬಾಳೆ ಬೆಳೆಯಲಾಗುತ್ತದೆ. ಮಾವು ಕಟಾವಿಗೆ ಒಂದೆರಡು ವಾರ ತಡವಿರುವುದರಿಂದ ಸಮಸ್ಯೆ ಇನ್ನೂ ಆರಂಭವಾಗಿಲ್ಲ. ಆದರೆ ಬಾಳೆ ಹಣ್ಣು, ಕಲ್ಲಂಗಡಿ ಹಾಗೂ ನಾನಾ ತರಕಾರಿ ಬೆಳೆಗಾರರು ಕೈಗೆ ಸಿಕ್ಕ ಬೆಲೆಗೆ ತಮ್ಮ ಫಸಲನ್ನು ಕೊಡುವ ಪರಿಸ್ಥಿತಿ ಉದ್ಭವಿಸಿದೆ. ಬಾಳೆ ಹಣ್ಣು, ಎಲೆಗೆ ಬೇಡಿಕೆ ಕುಸಿದಿದೆ. ಗೇರು ಬೀಜಕ್ಕೂ ಕೆ.ಜಿ.ಗೆ 100-120 ರೂ. ಇದ್ದ ಧಾರಣೆ 70-75 ರೂ.ಗೆ ಕುಸಿದಿದೆ.
ಜಿಲ್ಲೆಯಲ್ಲಿ 55 ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗುತ್ತದೆ. ಉಡುಪಿ, ಕುಂದಾಪುರ ಭಾಗದಲ್ಲಿ ಕಲ್ಲಂಗಡಿ ಉತ್ತಮ ಇಳುವರಿ ನೀಡಿದ್ದು, ಲಾಭದಾಯಕವೂ ಆಗಿದೆ. ಪ್ರಸ್ತುತ ಕಲ್ಲಂಗಡಿ ಕಟಾವಿಗೆ ಬಂದಿದ್ದು ಕಳೆದ ಬಾರಿಗಿಂತ ಕಡಿಮೆ ಬೆಲೆಗೆ ಮಾರುವಂಥ ಅನಿವಾರ್ಯ ಬೆಳೆಗಾರರದ್ದು. ಕಾರ್ಕಳ ಭಾಗದಲ್ಲಿ ಸಪೋಟಾ ಬೆಳೆಗಾರರ ಸಂಖ್ಯೆ ಅಧಿಕವಿದ್ದು, ಜಿಲ್ಲೆಯಲ್ಲಿ ಒಟ್ಟು 89 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಗೋದಾಮು ವ್ಯವಸ್ಥೆ ಇಲ್ಲ
ರೈತರು ಬೆಳೆದ ಹಣ್ಣು-ತರಕಾರಿಗಳನ್ನು ಹಾಳಾಗದಂತೆ ವೈಜ್ಞಾನಿಕ ವಿಧಾನದ ಮೂಲಕ ಸಂರಕ್ಷಿಸಿಡುವ ಗೋದಾಮು ವ್ಯವಸ್ಥೆ ಜಿಲ್ಲೆಯಲ್ಲಿ ಇಲ್ಲದಿರುವುದು ಬೆಳೆ ಗಾರರ ಸಂಕಷ್ಟವನ್ನು ಹೆಚ್ಚಿಸಿದೆ. ಗೋದಾಮು ವ್ಯವಸ್ಥೆ ಇದ್ದಲ್ಲಿ ಸ್ವಲ್ಪ ದಿನ ಕಾಯುವ ಅವಕಾಶವಿತ್ತು. ಈಗ ಹಾಳಾಗಿ ಒಂದು ಪೈಸೆಯೂ ಸಿಗದೆ ಇರುವು ದಕ್ಕಿಂತ ಬಂದದಷ್ಟು ಬರಲಿ ಎಂದು ಮಾರಾಟ ಮಾಡಬೇಕಿದೆ. ಈ ಪರಿಸ್ಥಿತಿ ಬದಲಾಗಬೇಕು ಎನ್ನುತ್ತಾರೆ ಬೆಳೆಗಾರರು.
Related Articles
ರೈತರ ಬೆಳೆಗಳನ್ನು ಹಾಪ್‌ಕಾಮ್ಸ್‌ನಲ್ಲಿ ಖರೀದಿಸುವ ವ್ಯವಸ್ಥೆ ಇದೆ. ಆದರೆ ಇಲ್ಲೂ ಶೇಖರಣೆಗೆ ವ್ಯವಸ್ಥೆ ಇಲ್ಲದಿರುವುದರಿಂದ ದಿನಂಪ್ರತಿ ಮಾರಾಟ ಮಾಡುವಷ್ಟು ಮಾತ್ರ ಹಣ್ಣು-ತರಕಾರಿಗಳನ್ನು ಖರೀದಿಸ ಲಾಗುತ್ತದೆ. ಈ ಪೈಕಿ ಅದರ ಸದಸ್ಯರಿಗೆ ಆದ್ಯತೆ ಹೆಚ್ಚು ನೀಡಲಾಗುತ್ತದೆ.
Advertisement
ಸಹಕಾರ ನೀಡಲಾಗುವುದುರೈತರು ಬೆಳೆದ ಹಣ್ಣು-ತರಕಾರಿಗಳನ್ನು ಮಾರಾಟ ಮಾಡಲು ಯಾವುದೆ ನಿರ್ಬಂಧವಿಲ್ಲ ಮತ್ತು ಪಾಸ್ ಕೂಡ ಅಗತ್ಯವಿಲ್ಲ. ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆಗಳು ಗದ್ದೆಯಲ್ಲಿ ಹಾಳಾದ ಯಾವುದೇ ಪ್ರಕರಣ ನಡೆದಿಲ್ಲ. ಅಗತ್ಯವಿದ್ದಲ್ಲಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿದಲ್ಲಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಗುತ್ತದೆ.
– ಭುವನೇಶ್ವರಿ, ಜಿಲ್ಲಾ ನಿರ್ದೇಶಕಿ ತೋಟಗಾರಿಕೆ ಇಲಾಖೆ ಉಡುಪಿ ಸಂಪರ್ಕ
ರೈತರಿಗೆ ತೋಟಗಾರಿಕೆ ಹಣ್ಣು-ತರಕಾರಿಗಳ ಮಾರಾಟ ಹಾಗೂ ಅಗತ್ಯ ಮಾಹಿತಿಗಳು ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಜಿಲ್ಲಾ ನಿರ್ದೇಶಕರು 9448999225
ಎ.ಎಚ್.ಒ.- 9900910948, ಎ.ಎಚ್.ಒ- 9742489714 ನಿಮ್ಮ ಬೆಳೆ ಮಾಹಿತಿ ನೀಡಿ
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾವಿರಾರು ರೈತರು ತಾವು ಬೆಳೆದ ತರಕಾರಿ, ಹಣ್ಣು ಹಾಗೂ ಆಹಾರ ಬೆಳೆಗಳನ್ನು ಮಾರಲಾಗದೆ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿಯು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಮುಂದಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ರೈತರು, ತರಕಾರಿ ಬೆಳೆಗಾರರು ಈ ಅಂಕಣದ ಪ್ರಯೋಜನ ಪಡೆಯಬಹುದು. ತಮ್ಮ ಬೆಳೆ ಹಾಗೂ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸಪ್‌ಗೆ ಕಳಿಸಿದರೆ ಪ್ರಕಟಿಸಲಾಗುವುದು. ನೀಡಬೇಕಾದ ಮಾಹಿತಿ: ಹೆಸರು, ಉತ್ಪನ್ನದ ಹೆಸರು, ಲಭ್ಯವಿರುವ ಬೆಳೆ ಪ್ರಮಾಣ, ಊರಿನ ಹೆಸರು, ಸಂಪರ್ಕ ಸಂಖ್ಯೆ, ಉತ್ಪನ್ನದ ಬೆಲೆ. ವಾಟ್ಸಪ್ ಸಂಖ್ಯೆ: 76187 74529 ರಾಜೇಶ್ ಗಾಣಿಗ, ಅಚ್ಲಾಡಿ