Advertisement

ಕೋವಿಡ್‌ 19 ಹಿನ್ನೆಲೆಯಲ್ಲಿ ಮಾಸ್ಕ್ ಧಾರಣೆಗಿರುವ ಪ್ರಾಮುಖ್ಯ

07:00 PM Apr 18, 2020 | Sriram |

ಮಾಸ್ಕ್ ಅಥವಾ ಮುಖಕವಚ ಇಂದಿನ ದಿನಗಳಲ್ಲಿ ಎಲ್ಲರಿಗೂ ಆವಶ್ಯಕ. ಅದರ ಬಳಕೆಯ ಬಗ್ಗೆ ಕೆಲವು ಪ್ರಶ್ನೋತ್ತರಗಳು ಇಲ್ಲಿವೆ.

Advertisement

1. ಮಾಸ್ಕ್ ಯಾಕೆ ಧರಿಸಬೇಕು?
ಬಾಯಿ ಮತ್ತು ಮೂಗಿನ ಮೂಲಕ ಕಾಯಿಲೆ ಹರಡುವುದನ್ನು ತಡೆಗಟ್ಟಲು ಮಾಸ್ಕ್ ಧರಿಸಬೇಕು.

2. ಯಾರು ಧರಿಸಬೇಕು?
ಯಾವುದೇ ವ್ಯಕ್ತಿಯ ಜತೆಗೆ ಸಂಪರ್ಕದಲ್ಲಿರುವ ಪ್ರತಿಯೊಬ್ಬರೂ ಈ ದಿನಗಳಲ್ಲಿ ಮಾಸ್ಕ್ ಧರಿಸಬೇಕು.

3. ಮನೆಯವರೆಲ್ಲರಿಗಾಗಿಯೂ ಒಂದೇ ಮಾಸ್ಕ್ ಸಾಕಲ್ಲವೇ?
ಇಲ್ಲ. ಓರ್ವ ವ್ಯಕ್ತಿ ಬಳಸಿದ ಮಾಸ್ಕನ್ನು ಅವನ ರಕ್ತ ಸಂಬಂಧಿಗಳೂ ಸೇರಿದಂತೆ ಇತರರು ಬಳಸುವಂತಿಲ್ಲ.

4. ಜನಸಾಮಾನ್ಯರು ಯಾವ ರೀತಿಯ ಮಾಸ್ಕ್ ಧರಿಸಬೇಕು?
ಹತ್ತಿ ಬಟ್ಟೆಯಿಂದ ತಯಾರಿಸಿದ, ತೊಳೆಯಬಹುದಾದ ಮಾಸ್ಕ್ ಗಳನ್ನು ಬಳಸಬಹುದು.

Advertisement

5. ಹಾಗಾದರೆ ಮೆಡಿಕಲ್‌ಗ‌ಳಲ್ಲಿ ಸಾಧಾರಣವಾಗಿ ಸಿಗುವ ಮಾಸ್ಕ್?
ಇದು ಮೂರು ಲೇಯರ್‌ಗಳ ವಿಶೇಷ ಮಾಸ್ಕ್ ಅಥವಾ ಎನ್‌95/99 ವಿಶೇಷ ಮಾಸ್ಕ್ ಆಗಿರುತ್ತದೆ. ಇದು ವೈದ್ಯಕೀಯ ಸಿಬಂದಿಯ ಉಪಯೋಗಕ್ಕೆ ಮಾತ್ರ.

6. ನಾವು ಇದನ್ನು ಬಳಸಿದರೆ ಏನಾಗುತ್ತದೆ?
ಈ ಮಾಸ್ಕ್ ಕೇವಲ ಕೇವಲ 6 ಗಂಟೆಗಳ ಉಪಯೋಗಕ್ಕೆ ಮಾತ್ರ. ಆ ಬಳಿಕ ಎಸೆಯಬೇಕಾಗುತ್ತದೆ. ಹೀಗೆ ಎಸೆದಾಗ ಅದರಲ್ಲಿರಬಹುದಾದ ರೋಗಾಣುಗಳು ಇತರರ ನೇರ ಸಂಪರ್ಕಕ್ಕೆ ಬರಬಹುದಾದ್ದರಿಂದ ಕೋವಿಡ್‌ ಮಾತ್ರವಲ್ಲದೆ ಇತರ ಕಾಯಿಲೆಗಳೂ ಹರಡುವ ಸಾಧ್ಯತೆಯಿರುತ್ತದೆ. ಆದರೆ ವೈದ್ಯಕೀಯ ಸಿಬಂದಿ ಇದನ್ನು ಬಳಸಿ ಎಸೆಯಲು ಸೂಕ್ತ ರಕ್ಷಣಾ ವಿಧಾನವನ್ನು ಬಳಸುತ್ತಾರೆ. ಅಷ್ಟೇ ಅಲ್ಲ, ಇಂತಹ ಮಾಸ್ಕ್ ಗಳನ್ನು ಜನಸಾಮಾನ್ಯರು ಖರೀದಿಸುವುದರಿಂದಾಗಿ ವೈದ್ಯಕೀಯ ಸಿಬಂದಿಗೆ ಇದರ ಕೊರತೆಯುಂಟಾಗಿ ಅವರ ಆರೋಗ್ಯಕ್ಕೆ ಹಾಗೂ ಅವರು ನೇರವಾಗಿ ಚಿಕಿತ್ಸೆ ಕೊಡುವ ರೋಗಿಗಳ ಆರೋಗ್ಯಕ್ಕೆ ಹಾನಿಯುಂಟಾಗುವ ಸಾಧ್ಯತೆಯಿದೆ.

7. ನಾವು ಮನೆಯಲ್ಲಿಯೇ ಮಾಸ್ಕ್ ತಯಾರಿಸಬಹುದೇ?
ಖಂಡಿತವಾಗಿ. ಶುಭ್ರವಾದ ಹತ್ತಿ ಬಟ್ಟೆಯಿಂದ ಮಾಸ್ಕನ್ನು ತಯಾರಿಸಿ ಬಳಸಬಹುದು. ಇದಕ್ಕೆ ದುಬಾರಿ ಹಣ ತೆರಬೇಕಾಗಿಲ್ಲ. ಬಳಸಿದ ಬಳಿಕ ಸೋಪ್‌ ಅಥವಾ ಡಿಟರ್ಜೆಂಟ್‌ನಿಂದ ಚೆನ್ನಾಗಿ ತೊಳೆದು, ಇಸಿŒ ಹಾಕಿ ಬಳಸಬಹುದು.

8. ಕೇವಲ ಮಾಸ್ಕ್ ಧರಿಸಿದರೆ ಕೋವಿಡ್‌ 19ರಿಂದ ರಕ್ಷಣೆ ಸಾಧ್ಯವೇ?
ಮಾಸ್ಕ್ ನ ಜತೆಗೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಬೇಕು. ಅಂದರೆ ಪ್ರತೀ ವ್ಯಕ್ತಿಗಳ ನಡುವೆ ಪ್ರತೀ ಸಂದರ್ಭದಲ್ಲೂ ಕನಿಷ್ಠ 1 ಮೀಟರ್‌ ದೂರವಿರಬೇಕು.ಪ್ರತೀ ಬಾರಿ ಇತರರೊಡನೆ ವ್ಯವಹರಿಸಿದಾಗ ಅಥವಾ ಇತರರಿಂದ ಯಾವುದೇ ವಸ್ತುವನ್ನು ಸ್ವೀಕರಿಸಿದಾದ ಸಾಬೂನು ಬಳಸಿ ಚೆನ್ನಾಗಿ ಕೈ ತೊಳೆಯಬೇಕು. ಮನೆಯಿಂದ ಹೊರಗೆ ಹೋಗಿ ಬಂದಾಗ ನಮ್ಮ ಜತೆ ತಂದ ಎಲ್ಲ ವಸ್ತುಗಳನ್ನು ಕೂಡ ಸ್ಯಾನಿಟೈಸರ್‌ಬಳಸಿ ಶುದ್ಧ ಮಾಡಬೇಕು. ತರಕಾರಿ ಇತ್ಯಾದಿಗಳನ್ನು ಉಪ್ಪು ನೀರಿನಲ್ಲಿ ತೊಳೆಯಬೇಕು. ಹೊರಗೆ ಹೋಗಿ ಬಂದ ಬಳಿಕ ಕಡ್ಡಾಯವಾಗಿ ಸ್ನಾನ ಮಾಡಬೇಕು.

-ಡಾ| ಅಮಿತಾಶ್‌ ಎಂ.ಪಿ.
ಸಹ ಪ್ರಾಧ್ಯಾಪಕರು, ರೆಸ್ಪಿರೇಟರಿ ಮೆಡಿಸಿನ್‌ ವಿಭಾಗ, ಕೆಎಂಸಿ ಆಸ್ತ್ರತ್ರೆ ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next