Advertisement

2 ವರ್ಷದ ವೇತನ ನೀಡಿದ ಗಂಭೀರ್‌

10:54 PM Apr 02, 2020 | Team Udayavani |

ಹೊಸದಿಲ್ಲಿ: ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಗೌತಮ್‌ ಗಂಭೀರ್‌ ಲೋಕಸಭಾ ಸದಸ್ಯರಾಗಿ 2 ವರ್ಷದ ವೇತನವನ್ನು ಪ್ರಧಾನಮಂತ್ರಿ ಕೋವಿಡ್ 19 ಪರಿಹಾರ ನಿಧಿಗೆ ಸಮರ್ಪಿಸಿದ್ದಾರೆ.

Advertisement

ಟ್ವಿಟರ್‌ ಮೂಲಕ ಅವರು ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇತ್ತೀಚೆಗೆ ಗಂಭೀರ್‌ ಲೋಕಸಭಾ ಸದಸ್ಯ ನಿಧಿಯಿಂದ ಪ್ರಧಾನಿ ಪರಿಹಾರ ನಿಧಿಗೆ 1 ಕೋಟಿ ರೂ. ಪರಿಹಾರ ನೀಡಿದ್ದನ್ನು ಸ್ಮರಿಸಬಹುದು. ಭಾರತೀಯ ಕ್ರಿಕೆಟ್‌ ತಂಡದ ಫೀಲ್ಡಿಂಗ್‌ ಕೋಚ್‌ ಆರ್‌. ಶ್ರೀಧರ್‌ ಅವರು ಸಾಮಾಜಿಕ ಜಾಲತಾಣದ ಮೂಲಕ 4 ಲಕ್ಷ ರೂ. ನಗದನ್ನು ಪರಿಹಾರ ನಿಧಿಗೆ ಅರ್ಪಿಸಿದ್ದಾರೆ. ಭಾರತದ ಹೆಮ್ಮೆಯ ಪ್ರಜೆಯಾಗಿ ಇದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾನು ಪ್ರಧಾನಿ ಪರಿಹಾರ ನಿಧಿಗೆ 3 ಲಕ್ಷ ರೂ. ಮತ್ತು ತೆಲಂಗಾಣ ಮುಖ್ಯಮಂತ್ರಿ ನಿಧಿಗೆ 1 ಲಕ್ಷ ರೂ. ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next