Advertisement

ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗೆ ಕೋವಿಡ್‌ 19

06:46 AM Jun 26, 2020 | Lakshmi GovindaRaj |

ಶಿರಾ: ತಾಲೂಕಿನ ಕಾಮಗೊಂಡನಹಳ್ಳಿ ಗ್ರಾಮದ ಶಿಕ್ಷಕರ ಮಗ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗೆ ಕೋವಿಡ್‌ 19 ದೃಢವಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, 100 ಮೀಟರ್‌ ಅಂತರದ 50 ಮನೆ  ಗಳನ್ನು ಹೋಂ ಕ್ವಾರಂಟೈನ್‌ ಒಳಪಡಿಸಲಾಗಿದೆ. ಆಂಧ್ರ ಪ್ರದೇಶದ ರಾಯದುರ್ಗ ಸೋಂಕಿನಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗೆ ಕೋವಿಡ್‌ 19 ಪಾಸಿಟಿವ್‌ ಬಂದಿದ್ದು ಕಾಮಗೊಂಡನಹಳ್ಳಿ ಸೀಲ್‌ಡೌನ್‌ಮಾಡಲಾಗಿದೆ.

Advertisement

ತಾಯಿಯಿಂದ  ಮಗನಿಗೆ ಸೋಂಕು: ಶಾಲೆಗಳು ರಜೆ ಇದ್ದ ಕಾರಣ ಸೋಂಕಿತ ವಿದ್ಯಾರ್ಥಿಯ ತಾಯಿ ಆಂಧ್ರಪ್ರದೇಶದ ರಾಯದುರ್ಗದಲ್ಲಿದ್ದರು, ಈ ವೇಳೆ ಮಕ್ಕಳು ಸಹ ಜೊತೆಯಲ್ಲಿದ್ದರು. ರಾಯದುರ್ಗದಲ್ಲಿ ವಾಸಿಸುವ ಮನೆ ಮುಂದಿನ ಕುಟುಂಬದ  ಸದಸ್ಯರಿಗೆ ಕೋವಿಡ್‌ 19 ಪಾಸಿಟಿವ್‌ ಇದ್ದ ಕಾರಣ ಇವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿತ್ತು. ವಿದ್ಯಾರ್ಥಿಯ ತಂದೆ ಶಿಕ್ಷಕನಾಗಿದ್ದು, ಜೂ.18ರಂದು ದ್ವೀತಿಯ ಪಿಯುಸಿ ಇಂಗ್ಲಿಷ್‌ ಪ್ರಶ್ನೆ ಪತ್ರಿಕೆ ಪರೀಕ್ಷೆ ಇದ್ದ ಕಾರಣ  ಪಟ್ಟನಾಯಕನಹಳ್ಳಿ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು.

ಮಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯ ಬೇಕಿದ್ದ ಕಾರಣ ಜೂ.21ರಂದು ಮಗ ರಾಯದುರ್ಗದಿಂದ ಪಟ್ಟನಾಯಕನ ಹಳ್ಳಿಗೆ ವಾಪಸಾಗಿ, ಹೋಂ ಕ್ವಾರಂಟೈನ್‌  ನಲ್ಲಿದ್ದ ವಿದ್ಯಾರ್ಥಿಯ ತಾಯಿಗೆ ಜ್ವರ ಹೆಚ್ಚಾದ ಕಾರಣ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದಾರೆ. ಜೂ.23 ರಂದು ತಾಯಿಗೆ ಕೋವಿಡ್‌ 19 ದೃಢವಾಗಿದೆ. ತಕ್ಷಣ ರಾಯದುರ್ಗದಿಂದ ಶಿರಾ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ ಕಾರಣ  ತಕ್ಷಣ ಕಾರ್ಯಪ್ರವೃತ್ತರಾದ ಆರೋಗ್ಯ ಇಲಾಖೆ ವಿದ್ಯಾರ್ಥಿ ಮತ್ತು ತಂದೆಯ ಗಂಟಲ ದ್ರವ ಪರೀಕ್ಷೆ ಮಾಡಿದ್ದು ವಿದ್ಯಾರ್ಥಿಗೆ ಕೋವಿಡ್‌ 19 ದೃಢ ವಾಗಿ, ತಂದೆಯ ವರದಿ ನೆಗಟಿವ್‌ ಬಂದಿದೆ.

ಗುರುವಾರ ಕಾಮಗೊಂಡನಹಳ್ಳಿ ಸೀಲ್‌ಡೌನ್‌  ಮಾಡಲಾಗಿದ್ದು ವಿದ್ಯಾರ್ಥಿಗೆ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ತಂದೆಗೆ ಶಿರಾ ಪಟ್ಟಣದ ತಾಯಿ ಮಕ್ಕಳ ಅಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next