Advertisement
ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ ಇದು ಕೇವಲ ದೈಹಿಕ ಸಮಸ್ಯೆಯಾಗಿ ಕಾಡುತ್ತಿಲ್ಲ. ಕೋವಿಡ್ ಭೀತಿ, ಕೆಲಸದ ಒತ್ತಡ, ಉದ್ಯೋಗ ಕಳೆದುಕೊಳ್ಳುವ ಭೀತಿಯ ನಡುವೆ ಜನರು ಬದುಕುತ್ತಿದ್ದಾರೆ. ನಾಳೆ ಏನಾಗಲಿದೆ ಎಂಬುದು ಯಾರೂ ಊಹಿಸಲಾದ ಪರಿಸ್ಥಿತಿ.
Related Articles
Advertisement
ಪ್ರತಿ ದಿನ ಅಥವ ವಾರಕ್ಕೆ ಒಮ್ಮೆ ಮದ್ಯಪಾನ, ತಂಬಾಕು ಮತ್ತಿತರ ವಸ್ತುಗಳನ್ನು ಸೇವಿಸುತ್ತಿದ್ದವರೂ ಅವುಗಳ ಅಲಭ್ಯತೆಯಿಂದ ಖನ್ನತೆಗೆ ಒಳಗಾಗು ತ್ತಿದ್ದಾರೆ. ಇತ್ತೀಚೆಗೆ ಆಲ್ಕೋಹಾಲ್ ಅಂಶ ಇರುವ ಸ್ಯಾನಿಟೈಸರ್ ಅನ್ನು ವ್ಯಕ್ತಿಯೊಬ್ಬರು ಸೇವಿಸಿ ಮೃತ ಪಟ್ಟದ್ದನ್ನು ಇಲ್ಲಿ ಸ್ಮರಿಸಬಹುದು.
ವಿಶೇಷವಾಗಿ ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಬೆರೆತಿದ್ದವರು ಇಂದು ಮನೆಗೆ ಸೀಮಿತರಾಗಿದ್ದಾರೆ. ಆಟವಾಡಲೂ ಹೊರಗೆ ಹೋಗುವಂತಿಲ್ಲ. ಪಾರ್ಕ್, ಆಟಿಕೆ ಮತ್ತು ದೈಹಿಕ ವ್ಯಾಯಾಮಗಳನ್ನು ಒದಗಿಸುವಂಥ ಕ್ರೀಡೆ ಗಳತ್ತ ಅವರು ಹೆಚ್ಚು ಆಕರ್ಷಿತರಾಗಿರುತ್ತಾರೆ. ಲಾಕ್‌ಡೌನ್ ಪರಿಸ್ಥಿತಿ ಆ ಅವಕಾಶವನ್ನು ತಪ್ಪಿಸಿದೆ. ಇದರಿಂದ ಮಕ್ಕಳು ಶುದ್ಧ ಗಾಳಿಯಿಂದ ವಂಚಿತರಾಗುತ್ತಿದ್ದಾರೆ ಎಂಬುದು ಲಂಡನ್ನಿನ ವೈದ್ಯರ ಅಭಿಪ್ರಾಯ.
ಮಕ್ಕಳಿಗಾಗಿ ಲಾಕ್‌ಡೌನ್ ಸಡಿಲಿಕೆಕೋವಿಡ್ -19 ಹರಡುವುದನ್ನು ತಡೆಯುವ ಕಠಿಣ ಕ್ರಮಗಳಡಿ ಮಾರ್ಚ್ 14 ರಿಂದ ಸ್ಪೇನ್‌ನಲ್ಲಿ ಮಕ್ಕಳನ್ನು ಮನೆಯಲ್ಲಿ ಇರಬೇಕು ಎಂದು ಸರಕಾರ ವಿಶೇಷ ಆದೇಶ ಪ್ರಕಟಿಸಿತ್ತು. ಈಗ ಸರಕಾರ ಏಪ್ರಿಲ್ 27 ರ ಬಳಿಕ ನಿಯಮವನ್ನು ಸಡಿಲಿಸುವ ಸೂಚನೆ ನೀಡಿದೆ. ಇಂತಹ ಕ್ರಮಗಳಿಂದ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಸ್ಪ್ಯಾನಿಷ್ ಮಕ್ಕಳ ಹಕ್ಕುಗಳ ಒಕ್ಕೂಟವು ಎಚ್ಚರಿಸಿತ್ತು. ಡೆನ್ಮಾರ್ಕ್‌ನಂತಹ ಇತರ ದೇಶಗಳು 11 ವರ್ಷದೊಳಗಿನವರಿಗೆ ಶಾಲೆಗಳನ್ನು ತೆರೆಯಲು ಪ್ರಾರಂಭಿಸಿದರೆ, ನಾರ್ವೆ ಶಿಶುವಿಹಾರಗಳನ್ನು ಮತ್ತೆ ತೆರೆಯಲು ಸಜ್ಜಾಗಿದೆ. ಮೇ 4ರಂದು ಜರ್ಮನಿ ಕೆಲವು ಶಾಲೆಗಳನ್ನು ಮತ್ತೆ ತೆರೆಯಲಿದೆ.