Advertisement
ಶಂಕಿತ ಕೋವಿಡ್ 19 ಲಕ್ಷಣಗಳನ್ನು ಹೊಂದಿರುವವರನ್ನು ಮುಂಚಿತ ವಾಗಿ ಗುರುತಿಸಿ, ಅವರನ್ನು ಪರೀಕ್ಷೆಗೊಳ ಪಡಿಸುವುದು, ಕ್ವಾರಂಟೈನ್ ಮಾಡುವುದು ಕೋವಿಡ್ 19 ಪ್ರಸರಣ ತಡೆಗೆ ಉಪಯುಕ್ತ ಕ್ರಮ. ಹೀಗೆ ಪರೀಕ್ಷೆಗಾಗಿ ಕಳುಹಿಸಿದ ಶಂಕಿತರ ಗಂಟಲುದ್ರವ ಮಾದರಿಗಳ ಸಂಖ್ಯೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಪ್ರತಿ 10 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಕಳುಹಿಸಲಾದ ಸರಾಸರಿ ಮಾದರಿಯಂತೆ ಈ ಲೆಕ್ಕಾಚಾರ ಹಾಕಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಇದನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.ದೇಶ ಮಟ್ಟದಲ್ಲಿ ಇದುವರೆಗೆ 10 ಲಕ್ಷ ಮಂದಿಗೆ ಸರಾಸರಿ 220ರಂತೆ 3 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಮೂರ್‍ನಾಲ್ಕು ದಿನಗಳ ಹಿಂದೆ 403 ಮಾದರಿಗಳ ಸಂಗ್ರಹವಾಗಿದ್ದಾಗ ಜಿಲ್ಲೆ ರಾಜ್ಯದಲ್ಲಿ ಲಕ್ಷ ಜನಸಂಖ್ಯೆಗೆ ಶೇ.34ರ ಸಾಧನೆ ಮಾಡಿ ಪ್ರಥಮ ಸ್ಥಾನದಲ್ಲಿತ್ತು. ಶುಕ್ರವಾರದ ವರೆಗೆ 839 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಜಿಲ್ಲೆಯ ಜನಸಂಖ್ಯೆ ಸುಮಾರು 13 ಲಕ್ಷ. ಅಂದರೆ ಲಕ್ಷ ಜನಸಂಖ್ಯೆಗೆ ಸುಮಾರು ಶೇ.65ರಂತೆ ಪರೀಕ್ಷೆನಡೆಸಲಾಗಿದೆ. ಇದು ದೇಶ ಮಟ್ಟ ದಲ್ಲೂ ಉತ್ತಮ ಸಾಧನೆಯೇ.
Related Articles
Advertisement
ತೀವ್ರ ಉಸಿರಾಟದ ಸಮಸ್ಯೆಹೊಂದಿದವರ ಗಂಟಲ ದ್ರವ ಸಂಗ್ರಹಿಸಿದ ಸಾಧನೆಯಲ್ಲಿಯೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವಿದೆ. ಉಸಿರಾಟ ಸಮಸ್ಯೆ
ಯುಳ್ಳ ಸುಮಾರು 100 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಇಬ್ಬರು ಗುಣಮುಖ ಜಿಲ್ಲೆಯಲ್ಲಿ ಕೋವಿಡ್ 19 ದೃಢ
ಪಟ್ಟ ಮೂವರಲ್ಲಿ ಇಬ್ಬರು ಈಗಾಗಲೇ ಗುಣಮುಖರಾಗಿ ದ್ದಾರೆ, ಇನ್ನೊಬ್ಬರ ಮೊದಲ ವರದಿ ನೆಗೆಟಿವ್ ಬಂದಿದೆ. ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗದರ್ಶಿ ಸೂತ್ರದನ್ವಯ ಜಿಲ್ಲೆಯು ಆರೆಂಜ್ ಮತ್ತು ನಾನ್ ಹಾಟ್‌ಸ್ಪಾಟ್ ವಲಯದಲ್ಲಿದೆ. ಕೋವಿಡ್ 19 ಸೋಂಕುಪೀಡಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕದವರು ಹಾಗೂ ತೀವ್ರ ಉಸಿರಾಟದ ಸಮಸ್ಯೆಯುಳ್ಳವರನ್ನು ಪತ್ತೆ ಮಾಡಿ ಮಾದರಿಗಳನ್ನು ಸಂಗ್ರಹಿಸಿದ ಕಾರಣ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪ್ರಾಪ್ತಿಯಾಗಿದೆ.
– ಡಾ|ಸುಧೀರ್‌ಚಂದ್ರ ಸೂಡ,
ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ ಜಿಲ್ಲೆ ರೋಗ ಲಕ್ಷಣ ಗುರುತಿಸಲು ಪರೀಕ್ಷೆ ನಡೆಸುವುದು ಬಹಳ ಮುಖ್ಯ. ಇದಕ್ಕಾಗಿ ಆರೋಗ್ಯ ಇಲಾಖೆ ಸಿಬಂದಿ ಉತ್ತಮ ರೀತಿಯಲ್ಲಿ ಶ್ರಮಿಸಿದ್ದಾರೆ.ಆದ್ದರಿಂದ ರಾಜ್ಯದಲ್ಲಿ ಲಕ್ಷ ಜನಸಂಖ್ಯೆಗೆ ಮಾದರಿ ಪರೀಕ್ಷೆಗಳನ್ನು ಅತಿ ಹೆಚ್ಚು ನಡೆಸಿದ ಹಿರಿಮೆಗೆ ಉಡುಪಿ ಪಾತ್ರವಾಗಿದೆ.ಆರೋಗ್ಯ ಇಲಾಖೆ ಸಿಬಂದಿಗೆ ಅಭಿನಂದನೆಗಳು.ಅವರು ಮುಂದೆಯೂ ಇದೇ ಗುಣಮಟ್ಟದಲ್ಲಿ ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ.
– ಜಿ. ಜಗದೀಶ್, ಜಿಲ್ಲಾಧಿಕಾರಿಗಳು, ಉಡುಪಿ