Advertisement

ಭಾರತೀನಗರ ಜನತೆಗೆ ಕೋವಿಡ್‌ 19 ಆತಂಕ

05:22 AM Jun 28, 2020 | Lakshmi GovindaRaj |

ಭಾರತೀನಗರ: ಮದ್ದೂರು ಹಾಗೂ ಭಾರತೀನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತೀನಗರದ ಜನತೆ ಆತಂಕಗೊಂಡಿದ್ದಾರೆ. ಮಳವಳ್ಳಿಯ ತಳಗವಾಡಿಯಲ್ಲಿ ಆಶಾ ಕಾರ್ಯಕರ್ತೆಯಾಗಿ  ಕಾರ್ಯನಿರ್ವಹಿಸುತ್ತಿದ್ದ  ಮಡೇನಹಳ್ಳಿಯ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಇದರಿಂದ ಗ್ರಾಮವನ್ನು ತಾಲೂಕು ಆಡಳಿತ ಸೀಲ್‌ ಡೌನ್‌ ಮಾಡಿದೆ.

Advertisement

ಈಕೆಯ ಪತಿ, ಇಬ್ಬರು ಮಕ್ಕಳು ಹಾಗೂ ತಂದೆಯನ್ನು ಕ್ವಾರಂಟೈನ್‌ ಮಾಡಲಾಗಿದೆ.  ಆಶಾ ಕಾರ್ಯಕರ್ತೆಯ ಪತಿ ಆಟೋ ಡ್ರೆçವರ್‌ ಆಗಿದ್ದು, ಕೆ.ಎಂ.ದೊಡ್ಡಿಯಿಂದ ತೊರೆಬೊಮ್ಮನಹಳ್ಳಿಗೆ ಪ್ರಯಾಣ ಮಾಡುತ್ತಿದ್ದರು. ಹೀಗಾಗಿ ಔಷಧಿ ಸಿಂಪಡಿಸಿ ಮುಂಜಾಗೃತ ಕ್ರಮವಹಿಸಲಾಗಿದೆ. ಮದ್ದೂರಿನ ಪುಸ್ತಕದ  ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ದೇವರಹಳ್ಳಿಯ ಯುವಕನಿಗೂ ಕೋವಿಡ್‌ 19 ದೃಢಪಟ್ಟಿದೆ. ಆ ಯುವಕನ ಕುಟುಂಬದವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ಕ್ರಮ ಕೈಗೊಳ್ಳಲು ಆಗ್ರಹ: ಕೋವಿಡ್‌ 19ದಿಂದ ಭಾರತೀನಗರದ ಜನತೆ ಆತಂಕದಲ್ಲಿದ್ದಾರೆ. ನಿತ್ಯ ವ್ಯಾಪಾರ, ವಹಿವಾಟಿಗೆಂದು ಸಾವಿರಾರು ಜನತೆ ಬಂದು ಹೋಗುತ್ತಾರೆ. ಆದ್ದರಿಂದ ತಾಲೂಕು ಆಡಳಿತ ಕಟ್ಟು ನಿಟ್ಟಿನ ಕ್ರಮ  ಕೈಗೊಳ್ಳಬೇಕೆಂದು ಜನತೆ ಆಗ್ರಹಿಸಿದ್ದಾರೆ. ಆತಂಕ ಬೇಡ: ಮಡೇನಹಳ್ಳಿಯನ್ನು ಪರಿಶೀಲಿಸಿದ ತಹಶೀಲ್ದಾರ್‌ ವಿಜಯ್‌ ಕುಮಾರ್‌ ಮಾತನಾಡಿ, ಕೋವಿಡ್‌ 19 ತಡೆಗೆ ಕ್ರಮ ಕೈಗೊಳ್ಳಲಾಗಿದೆ.

ಮಡೇನಹಳ್ಳಿಯನ್ನು ಸೀಲ್‌ಡೌನ್‌ ಮಾಡಲಾಗಿದೆ.  ಆಶಾ ಕಾರ್ಯಕರ್ತೆ ಮಳವಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರ ಜವಾಬ್ದಾರಿ ಯನ್ನು ಮಳವಳ್ಳಿ ತಾಲೂಕು ಆಡಳಿತಕ್ಕೆ ವಹಿಸಲಾಗಿದೆ ಎಂದರು. ಭಾರತೀನಗರದ ಸಬ್‌ಇನ್‌ಸ್ಪೆಕ್ಟರ್‌ ಶೇಷಾದ್ರಿ ಮಾತನಾಡಿ, ಕೆಮ್ಮು, ನೆಗಡಿ,  ಜ್ವರ ಬಂದ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆದುಕೊಳ್ಳಿ ಎಂದರು. ಕೆ.ಎಂ.ದೊಡ್ಡಿ ಸಿಪಿಐ ಶಿವಮಲವಯ್ಯ ಮೊದಲಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next