ಕೋಲಾರ: ಕೋವಿಡ್ 19 ಮುಕ್ತ ಹಸಿರು ವಲಯವಾದ ಕೋಲಾರ ಗಡಿಗೆ ಹೊಂದಿಕೊಂಡಿರುವ ಆಂಧ್ರದ ವಿ.ಕೋಟೆ, ಪುಂಗ ನೂರು ಪಾಸಿಟಿವ್ ವ್ಯಕ್ತಿಗಳಿಂದ ಕಂಟಕ ಎದುರಾಗಿದ್ದು, ವಿಕೋಟ ಹಾಗೂ ಪುಂಗ ನೂರು ಪಾಸಿಟಿವ್ ವ್ಯಕ್ತಿಗಳ ಪ್ರಥಮ ಸಂಪರ್ಕಿತ 79 ಮಂದಿ ಸೇರಿದಂತೆ ಶುಕ್ರವಾರ ಜಿಲ್ಲೆಯಲ್ಲಿ 136 ಮಂದಿಯನ್ನು ಕ್ವಾರಂಟೈನ್ ಗೊಳಪಡಿಸಲಾಗಿದೆ.
ವಿ.ಕೋಟೆ ಸೋಂಕಿತ ತರಕಾರಿ ವ್ಯಾಪಾರಿ ನಗರದ ಎಪಿಎಂಸಿಯಲ್ಲಿ ಸುತ್ತಾಡಿ ಹೋಗಿರುವ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಯಲ್ಲಿನ 21 ಹಾಗೂ ಟೀ ಅಂಗಡಿಯ 5 ಮಂದಿ ಸೇರಿ 26 ಮಂದಿಯನ್ನು ಪತ್ತೆ ಹಚ್ಚಿ ಮಂಗಸಂದ್ರದಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇದೇ ವಿಕೋಟ ವ್ಯಕ್ತಿಯ ಪ್ರಥಮ ಸಂಪರ್ಕಿತರನ್ನು ಕೆಜಿಎಫ್ ಭಾಗದಲ್ಲಿಯೂ ಗುರುತಿಸಿದ್ದು, 13 ಮಂದಿಯನ್ನು ಕ್ವಾರಂಟೈನ್ ಗೊಳಪಡಿಸಲಾಗಿದೆ. ವಿ.ಕೋಟೆ ಮೂಲದ ತರಕಾರಿ ವ್ಯಾಪಾರಿಯ ಮೊಬೈಲ್ ಜಾಡನ್ನು ಆರೋಗ್ಯ ಅಧಿಕಾರಿ ಗಳು ಅನುಸರಿಸುತ್ತಿದ್ದು, ಒಂದೆರೆಡು ದಿನಗಳಲ್ಲಿ ಮತ್ತಷ್ಟು ಮಂದಿಯನ್ನು ಕ್ವಾರಂಟೈನ್‌ಗೊಳಪಡಿಸಲಾಗುವುದು ಎಂದು ಕೋವಿಡ್ 19 ಜಿಲ್ಲಾ ನೋಡಲ್ ಅಧಿಕಾರಿ ಡಾ.ಚಾರಿಣಿ ತಿಳಿಸಿದ್ದಾರೆ.
ಹಾಗೆಯೇ ಪುಂಗನೂರು ಸಾಸ್ ಫ್ಯಾಕ್ಟರಿಗೆ ಆಂಧ್ರಪ್ರದೇಶದ ಪುಂಗನೂರು ಮೂಲದ ಪಾಸಿಟಿವ್ ವ್ಯಕ್ತಿಯೊಬ್ಬರು ಆಗಮಿಸಿ ಜಿಲ್ಲೆ ಯಲ್ಲಿ ಒಂದು ದಿನ ಬಂದು ಹೋಗಿದ್ದು, ಈ ಸಂಬಂಧ ಸುಮಾರು 40 ಮಂದಿಯನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ. ವಿ.ಕೋಟೆ ಮೂಲದ ಸೋಂಕಿತ ತರಕಾರಿ ವ್ಯಾಪಾರಿಯೊಬ್ಬ ನಗರದ ಎಪಿಎಂಸಿ ಮಾರುಕ ಟ್ಟೆಗೆ ಕಳೆದ ಏ.24 ರಂದು ಬಂದಿದ್ದನೆಂಬ ಮಾಹಿತಿಯಿಂದ ಕೋಲಾರದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಶುಕ್ರವಾರ ಬೆಳಗ್ಗೆ ತಹಶೀಲ್ದಾರ್, ಆರೋಗ್ಯ ಇಲಾಖೆ ಅಧಿಕಾರಿಗಳು ಮಾರುಕಟ್ಟೆ ಪ್ರಾಂಗಣಕ್ಕೆ ದೌಡಾಯಿಸಿದ್ದರು.
ದಂಡ ತೆತ್ತಿದ್ದ ಸೋಂಕಿತ: ಕಳೆದ ಏ.24 ರಂದು ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದ ಈ ಸೋಂಕಿತ ಮಾರುಕಟ್ಟೆಯಲ್ಲೆಲ್ಲಾ ಓಡಾಡಿದ್ದಾನೆ, ಇಲ್ಲಿನ ಎಪಿಎಂಸಿ ಕ್ಯಾಂಟೀನ್ ನಲ್ಲಿ ತಿಂಡಿ ತಿಂದು ಟೀ ಕುಡಿದು ಹೋಗಿ ದ್ದಾನೆ. ಇದರ ಜತೆಗೆ ಮಾಸ್ಕ್ ಧರಿ ಸದೇ ಮಾರುಕಟ್ಟೆಗೆ ಬಂದಿದ್ದ ಈತನಿಗೆ ಎಪಿಎಂಸಿ ಸಿಬ್ಬಂದಿ 100 ರೂ. ದಂಡ ವಿಧಿಸಿ ಮಾಸ್ಕ್ ನೀಡಿದ್ದರು ಎನ್ನಲಾಗಿದ್ದು, ಇದೀಗ ಇಡೀ ಮಾರುಕಟ್ಟೆಯಲ್ಲಿ ಆತಂಕದ ಛಾಯೆ ಆವರಿ ಸಿದೆ.ಕೊರೊನಾದಿಂದ ದೂರವಿರಲು ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಇಲ್ಲಿಗೆ ಬರುವ ವಾಹನಗಳಿಗೂ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿತ್ತು. ಇಲ್ಲೇ ಮೊದಲ ಬಾರಿಗೆ ಸೋಂಕು ಮುಕ್ತ ದ್ವಾರವನ್ನೂ ಅಳವಡಿಸಲಾಗಿತ್ತು. ಈ ಎಲ್ಲಾ ಎಚ್ಚರಿಕೆ ಕ್ರಮಗಳು ಈ ಸೋಂಕಿ ತನ ಓಡಾಟದಿಂದಾಗಿ ಪ್ರಯೋಜನಕ್ಕೆ ಬಾರದಂತಾಗಿದ್ದು, ಇದೀಗ ಮಾರುಕಟ್ಟೆಯಲ್ಲಿ ಸೋಂಕಿತ ವ್ಯವಹಾರ ನಡೆಸಿದನೆನ್ನಲಾದ 21 ಮಂದಿಯನ್ನು ನಗರ ಹೊರವಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಕ್ವಾರಂಟೆಟೈನ್‌ಗೆ ಒಳಪಡಿಸಲಾಗಿದೆ.