ನೆಲಮಂಗಲ: ಕೋವಿಡ್ 19 ಆತಂಕದಲ್ಲಿ ಜೀವನಸಾಗಿಸುತ್ತಿರುವ ಸೋಂಕಿತರಿಗೆ ಸಾಮಾಜಿಕ ಜಾಲತಾಣಗಳ ಸುಳ್ಳು ಸಂದೇಶ ರವಾನೆಯಾಗುತ್ತಿದ್ದು ಕೆಲವು ವ್ಯಕ್ತಿಗಳು, ಆಸ್ಪತ್ರೆಗಳ ವಿರುದ್ಧ ಅಪಪ್ರಚಾರ ನಡೆಯುತ್ತಿರುವುದು ಕಂಡು ಬರುತ್ತಿದೆ.
ರಾಜ್ಯದ ಕೋವಿಡ್ ವ್ಯವಸ್ಥೆಯಲ್ಲಿನ ಕೆಲವು ಸಮಸ್ಯೆಗಳಿಂದ ಪಾಸಿಟಿವ್ ಎಂಬ ಸಂದೇಶ ಬಂದ ತಕ್ಷಣ ಸೋಂಕಿತರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಜತೆಗೆ ಕೆಲವು ಸಾಮಾಜಿಕ ಜಾಲತಾಣ ಗಳಲ್ಲಿಯೂ ಕಿಡಿಗೇಡಿಗಳು ವ್ಯಕ್ತಿಯ ಸುಳ್ಳು ಸಂಪರ್ಕದ ವಿವರ, ಮನೆ ಸದಸ್ಯರಿಗೆ ಸೋಂಕು ಬಂದಿದೆ ಎಂದು ಸುಳ್ಳು ಸಂದೇಶ ಪ್ರಚಾರ ಮಾಡುತ್ತಿರುವುದು ಆತಂಕದ ಜತೆ ಸೋಂಕಿತ ವ್ಯಕ್ತಿಯನ್ನು ಶತ್ರುವಾಗಿ ನೋಡುವ ಪರಿಸ್ಥಿತಿ ಎದುರಾಗಿದೆ.
ದೂರು ದಾಖಲು: ಇದಕ್ಕೆ ಉದಾಹರಣೆ ಎಂಬಂತೆ ತಹಶೀಲ್ದಾರ್‌ಗೆ ಕೋವಿಡ್ 19 ಬಂದಿದೆ ಹಾಗೂ ನೆಲಮಂಗಲದ ವಿಪಿ ಮ್ಯಾಗ್ನೇಸ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಕೋವಿಡ್ 19 ಬಂದಿದೆ ಎಂಬ ಸುಳ್ಳು ಸಂದೇಶ ನೀಡಿ ಜನ ಆಸ್ಪತ್ರೆ ಕಡೆ ಮುಖಮಾಡ ದಂತಾಗಿತ್ತು. ಇದರ ಬಗ್ಗೆ ನೆಲ ಮಂಗಲ ಟೌನ್‌ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿಸ್ತುಕ್ರಮ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಕಳುಹಿಸಿ ದರೆ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಸಾಂಕ್ರಮಿಕ ಕಾಯಿಲೆಗಳ ಕಾಯ್ದೆಯ ಅನ್ವಯ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ತಹಶೀಲ್ದಾರ್ ಶ್ರೀನಿವಾಸ್, ಗ್ರಾಮಾಂತರ ಎಸ್ಪಿ ರವಿ ಡಿ. ಚೆನ್ನಣ್ಣನವರ್ ತಿಳಿಸಿದ್ದಾರೆ.
ಕೋವಿಡ್ 19 ಸೋಂಕಿತ ವ್ಯಕ್ತಿ ಪ್ರತಿಕ್ರಿಯಿಸಿ ಕೋವಿಡ್ 19 ಪಾಸಿಟಿವ್ ಬಂದ ನಂತರ ಕಾಯಿಲೆಗೆ ಭಯ ಪಡುವುದಕ್ಕಿಂತ ಸಾಮಾಜಿಕ ಜಾಲತಾಣದಲ್ಲಿ ಬರುವ ಸುಳ್ಳು ಸುದ್ದಿಗಳಿಂದ ಆತಂಕ ಎದುರಾಗಿದ್ದು ಮಾನಸಿಕ ಹಿಂಸೆ ನೀಡಿದಂತಾ ಗುತ್ತದೆ. ಅಂತಹವರ ವಿರುದ್ದ ಶಿಸ್ತು ಕ್ರಮಕೈಗೊಳ್ಳಿ ಎಂದರು.