Advertisement

ಶ್ರೀಲಂಕಾ ನೌಕಾಪಡೆ 60 ಮಂದಿಗೆ ಕೋವಿಡ್

05:01 PM Apr 26, 2020 | sudhir |

ಕೊಲಂಬೋ: ಶ್ರೀಲಂಕಾ ನೌಕಾಪಡೆಯ 60 ಮಂದಿಗೆ ಕೋವಿಡ್ ಸೋಂಕು ತಗುಲಿದ್ದ ಪರಿಣಾಮ ನೌಕಾಪಡೆಯ 4 ಸಾವಿರ ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಕೇವಲ ಎರಡು ದಿನಗಳಲ್ಲಿ ನೌಕಾಪಡೆಗೆ ಸಂಬಂಧಿಸಿದಂತೆ 60 ಪ್ರಕರಣಗಳು ದಾಖಲಾಗಿವೆ ಶ್ರೀಲಂಕಾ ಸೇನೆಯ ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಶವೇಂದ್ರ ಸಿಲ್ವಾ ಮಾಹಿತಿ ನೀಡಿದ್ದಾರೆ.

Advertisement

ಈ 60 ಮಂದಿಯ ಸಂಪರ್ಕದಲ್ಲಿದ್ದ 4,000 ಮಂದಿಯನ್ನೂ ಕ್ವಾರಂಟೇನ್‌ ಗೆ ಒಳಪಡಿಸಲಾಗಿದೆ ಎಂದು ತಿಳಿಸಿ¨ªಾರೆ. ಮೊದಲ ಹಂತದಲ್ಲಿ 30 ಮಂದಿಗೆ ಕೋವಿಡ್ ಪಾಸಿಟಿವ್‌ ದೃಢಪಟ್ಟಿತ್ತು. ಬಳಿಕ ಮತ್ತೆ 30 ಮಂದಿಯಲ್ಲಿ ಕೋವಿಡ್ ವೈರಸ್‌ ಸೋಂಕು ಕಾಣಿಸಿಕೊಂಡಿತ್ತು. ನೌಕಾಪಡೆಯ ಸಿಬಂದಿ ಹಾಗೂ ಅವರ ಕುಟುಂಬದವರನ್ನು ಕ್ವಾರಂಟೈನ್‌ಗೆ ಒಳಪಡಿಸುವಂತೆ ಶ್ರೀಲಂಕಾ ನೌಕಾಪಡೆ ಆದೇಶಿಸಿದೆ. ಕಳೆದ ತಿಂಗಳ ಮೂರನೇ ವಾರದಿಂದ ಶ್ರೀಲಂಕಾದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ. ಇದುವರೆಗೆ 433 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, 7 ಸಾವುಗಳಾಗಿವೆ. ಒಟ್ಟು 116 ಮಂದಿ ಸೋಂಕು ಮುಕ್ತರಾಗಿದ್ದಾರೆ. ಲಾಕ್‌ಡೌನ್‌ ಅವಧಿ ಎಪ್ರಿಲ್‌ 27ರಂದು ಕೊನೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next