Advertisement

ತಾಜ್ ಮಹಲ್ ಗೂ ತಟ್ಟಿದ ಕೊರೊನಾ ಭೀತಿ : ಮಾರ್ಚ್ 31 ರ ವರೆಗೆ ಪ್ರವಾಸಿಗರಿಗೆ ನಿರ್ಬಂಧ

12:25 AM Mar 21, 2020 | Suhan S |

ನವದಹೆಲಿ : ವಿಶ್ವದೆಲ್ಲೆಡೆ ಹರಡಿರುವ ಕೊರೊನಾ ವೃರಸ್ ಭೀತಿಯನ್ನು ತಡೆಗಟ್ಟಲು ಭಾರತ  ಈಗಾಗಲೇ ಸರ್ವ ಸನ್ನದ್ಧವಾಗಿ ತನ್ನ ಎಲ್ಲಾ ಪ್ರಯತ್ನವನ್ನು ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಮಾಡುತ್ತಿದೆ. ಇದೀಗ ವಿಶ್ವ ಪಾರಂಪರಿಕ ಪ್ರವಾಸಿ ತಾಣವಾದ ತಾಜ್ ಮಹಲ್ ನ್ನು ಮಾರ್ಚ್ 31 ವರೆಗೆ ಮುಚ್ಚಲು ನಿರ್ಧರಿಸಿದೆ.

Advertisement

ರಾಷ್ಟ್ರ ರಾಜಧಾನಿಯಾಗಿರುವ ದೆಹಲಿಯಲ್ಲಿ ಕೋವಿಡ್ 19  ಭೀತಿಯಿಂದಾಗಿ ಮುಂಜಾಗ್ರತ ಕ್ರಮವಾಗಿ ಶಾಲಾ- ಕಾಲೇಜು, ಚಿತ್ರ ಮಂದಿರ ಹಾಗೂ ಕೆಲ ಮಾಲ್ ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸದ್ಯ  ಪ್ರವಾಸೋದ್ಯಮ ಸಚಿವಾಲಯದ ಆದೇಶದ ಮೇರೆಗೆ ಯುನೆಸ್ಕೋ ಮಾನ್ಯತೆಯ ವಿಶ್ವಪಾರಂಪರಿಕ ಪ್ರವಾಸಿ ತಾಣವಾಗಿರುವ ತಾಜ್ ಮಹಲ್ ನ್ನು ಮಾರ್ಚ್ 31 ವರೆಗೆ ಮುಚ್ಚುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಆದೇಶ ಹೊರಡಿಸಿದೆ.

ಕೊರೊನಾ ವರೈಸ್ ಭೀತಿ ವಿಶ್ವದೆಲ್ಲೆಡೆ ಹರಡಿರವುದರಿಂದ, ಭಾರತದಲ್ಲಿ ಇದರ ಸೋಂಕನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಯಂತ್ರಣದಲ್ಲಿಡಲು ಸರ್ಕಾರ ಆಯಾ ರಾಜ್ಯಗಳಿಗೆ ನೀತಿ- ನಿಯಮಗಳನ್ನು ರೂಢಿಸಿಕೊಳ್ಳಲು ಸೂಚಿಸಿದೆ. ಈ ನಿಟ್ಟಿನಲ್ಲಿ ದೇಶದೆಲ್ಲೆಡೆ ಆಯಾ ರಾಜ್ಯಗಳಲ್ಲಿ ಸೋಂಕು ಹೆಚ್ಚಾದ ಕಡೆಗಳಲ್ಲಿ ಕಟ್ಟೆಚ್ಚೆರ ವಹಿಸಲಾಗಿದ್ದು, ಇದರ ಪರಿಣಾಮವಾಗಿ ರಾಷ್ಟ್ರ ರಾಜಧಾನಿಯ ಪ್ರಮುಖ ಪ್ರವಾಸಿ ತಾಣಗಳು ಹಾಗೂ ವಸ್ತು ಸಂಗ್ರಹಾಲಯವನ್ನು ಮಾರ್ಚ್ 31 ರ ವರಗೆ ಮುಚ್ಚಲು ಪ್ರವಾಸೋದ್ಯಮ ಸಚಿವಾಲಯ ಆದೇಶವನ್ನು ನೀಡಿದೆ.

ವಿಶ್ವದಾದ್ಯಂತ ಕೊರೊನಾ ಸೋಂಕಿಗೆ 6500 ಕ್ಕೂ ಹೆಚ್ಚು ಮಂದಿ ಮೃತ ಪಟ್ಟಿದ್ದರೆ, 1,68,000 ಮಂದಿಗೆ ಸೋಂಕು ತಗುಲಿದೆ. ಭಾರತದಲ್ಲಿ ಇದುವರೆಗೆ 125 ಮಂದಿಗೆ ಸೋಂಕು ತಗುಲಿದ್ದು, 3  ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next