Advertisement

ಕೋವಿಡ್-19 ಎಫೆಕ್ಟ್ ನಿಂದ 100 ಕೋಟಿ ರೂ. ನಷ್ಟ: ಗಾಲ್ಫ್ ಕ್ಲಬ್ ಗಳಿಗೆ ಸಂಕಷ್ಟ

04:11 PM Apr 13, 2020 | keerthan |

ಹೊಸದಿಲ್ಲಿ: ಗಾಲ್ಫ್ ಅಂಕಣಗಳಲ್ಲಿ ಸಿಗುತ್ತಿದ್ದ ದಿನನಿತ್ಯದ ಹಣವನ್ನೇ ನಂಬಿಕೊಂಡು ಬದುಕುತ್ತಿದ್ದ ಕ್ಯಾಡಿಗಳ (ಕೆಲಸಗಾರರು) ಬದುಕು ದುರ್ಬರವಾಗಿದೆ. ಆದರೆ ಸಂಕಷ್ಟವಿರುವುದು ಬರೀ ಕ್ಯಾಡಿಗಳಿಗೆ ಮಾತ್ರವಲ್ಲ, ಗಾಲ್ಫ್ ಕೂಟವನ್ನೇ ನಂಬಿಕೊಂಡು ಬದುಕುತ್ತಿದ್ದ ಕ್ಲಬ್‌ಗಳಿಗೂ ದುಸ್ಥಿತಿ ಎದುರಾಗಿದೆ.

Advertisement

ಗಾಲ್ಫ್ ಕೂಟಗಳು ರದ್ದಾಗಿರುವುದು, ಮುಂದೂಡಿಕೆಯಾಗಿರುವುದು ಸೇರಿದರೆ 100 ಕೋಟಿ ರೂ. ನಷ್ಟವಾಗಿದೆ ಎಂದು ಭಾರತ ಗಾಲ್ಫ್ ಕ್ಲಬ್‌ ಗಳ ಅಧ್ಯಕ್ಷ (ಜಿಐಎ) ರಿಷಿ ನಾರಾಯಣನ್‌ ತಿಳಿಸಿದ್ದಾರೆ.

ದೇಶದಲ್ಲಿ  240ಕ್ಕೂ ಅಧಿಕ ಗಾಲ್ಫ್ ಕ್ಲಬ್‌ಗಳಿವೆ. ಕಳೆದ ವರ್ಷ ಆರ್ಥಿಕ ಕುಸಿತದಿಂದ ಈ ಕ್ಲಬ್‌ಗಳು ನಷ್ಟ ಅನುಭವಿಸಿದ್ದವು. ಕಂಪನಿಗಳು ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದವು. ಕೆಲವು ಕೂಟಗಳೇ ನಿಂತು ಹೋಗಿದ್ದವು. ಈ ಬಾರಿ ಕೊರೊನಾ ದಾಳಿಯಾದ ಮೇಲೆ, ಸಂಪೂರ್ಣ ಪರಿಸ್ಥಿತಿ ಪಾತಾಳಕ್ಕೆ ಹೋಗಿದೆ. ನಾಲ್ಕು ಪಿಜಿಟಿಐ (ಪ್ರೊಫೆಶನಲ್‌ ಗಾಲ್ಫ್ ಟೂರ್‌ ಆಫ್ ಇಂಡಿಯಾ) ಕೂಟಗಳು ರದ್ದಾಗಿವೆ, ಇನ್ನು 5-6 ಕೂಟಗಳು ಮುಂದೂಡಿಕೆಯಾಗಿವೆ. ಐಜಿಯು (ಇಂಡಿಯನ್‌ ಗಾಲ್ಫ್ ಯೂನಿಯನ್‌) ಕೂಟಗಳದ್ದೂ ಇದೇ ಕಥೆ.

ಹೀಗಾಗಿ ಕ್ಲಬ್‌ಗಳಿಗೆ ಬರಬೇಕಾಗಿದ್ದ ಪ್ರವೇಶ ಶುಲ್ಕ, ಆತಿಥೇಯತ್ವ ಶುಲ್ಕ, ಆಹಾರ-ಪಾನೀಯ-ಸಾಧನಗಳ ಶುಲ್ಕ ಹೀಗೆ ಕ್ಲಬ್‌ಗಳು ಸಿಕ್ಕಾಪಟ್ಟೆ ಕಳೆದುಕೊಳ್ಳುತ್ತಿವೆ. ಇದರಿಂದ ಕ್ಲಬ್ಬನ್ನೇ ನಂಬಿಕೊಂಡಿದ್ದ ವ್ಯಕ್ತಿಗಳನ್ನು ಸಾಕುವುದು ಕಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next