Advertisement
ಇಲ್ಲಿನ ಅಣ್ಣೇಶ್ವರ ಗ್ರಾಮದ ಕ್ಯಾಪ್ಸಿಕಂ ಬೆಳೆಗಾರ ರೈತ ಮುನಿರಾಜು 2 ಎಕರೆ ಜಮೀನಿನಲ್ಲಿ ಹಳದಿ, ಕೆಂಪು, ಹಸಿರು ಬಣ್ಣದ ಕ್ಯಾಪ್ಸಿಕಂ ಬೆಳೆಯಲು ಬ್ಯಾಂಕಿನಿಂದ 24 ಲಕ್ಷ ಸಾಲ ಪಡೆದಿದ್ದರು. ಬೆಳೆ ಮೂರು ಬಾರಿ ಕೊಯ್ಲಿನಿಂದ 2 ಟನ್ ಆಗಿತ್ತು. ಪ್ರತಿ ಕ್ವಿಂಟಲ್ ಕ್ಯಾಪ್ಸಿಕಂ 800 ರೂಗೆ ಮಾರಾಟವಾಗಿತ್ತು. ಲಾಕ್ ಡೌನ್ ನಂತರ ಬೆಳೆ ಸಾಗಾಟಕ್ಕೆ ಈವರೆಗೆ ಪಾಸ್ ನೀಡಿಲ್ಲ. ಕಾಡಿ ಬೇಡಿ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮಾರುಕಟ್ಟೆಗೆ ಹೋದರೆ ಪ್ರತಿ ಕೆ.ಜಿ ಗೆ 3-4 ರೂ ಬೆಳೆ ಹೇಳುತ್ತಾರೆ. ಹೀಗಾಗಿ ತಿಪ್ಪೆಗೆ ಸುರಿದಿದ್ದೇನೆ. ಕೋವಿಡ್ 19 ಭೀತಿ ಇಲ್ಲದಿದ್ದರೆ ಬಂಡವಾಳ ತೆಗೆದು ಕನಿಷ್ಠ 8-10 ಲಕ್ಷ ರೂ ಲಾಭ ಸಿಗುವ ನಿರೀಕ್ಷೆ ಇತ್ತು ಎಂದು ತಮ್ಮ ಅಳಲು ತೋಡಿಕೊಂಡರು.
Related Articles
Advertisement