Advertisement

ರಕ್ತದಾನ ಕೇಂದ್ರಗಳಿಗೂ ಸಮಸ್ಯೆ

06:10 PM Apr 10, 2020 | Team Udayavani |

ಮೈಸೂರು: ಲಾಕ್‌ಡೌನ್‌ ಪರಿಣಾಮ ರಕ್ತದಾನಕ್ಕೂ ತಟ್ಟಿದೆ. ಇದರಿಂದ ಮೈಸೂರಿನಲ್ಲಿ ರಕ್ತದಾನಿಗಳ ಸಂಖ್ಯೆ ಇಳಿಮುಖವಾಗಿದ್ದು, ಇತರೇ ಚಿಕಿತ್ಸೆಗಳಿಗೂ ಸಮಸ್ಯೆಯಾಗಿದೆ.

Advertisement

ಮೈಸೂರಿನಲ್ಲಿ ವಿವಿಧ ಆಸ್ಪತ್ರೆಗಳಿಗೆ ನಡೆಯುವ ಚಿಕಿತ್ಸೆಗಳಿಗೆ ಸುಮಾರು 300ರಿಂದ 400 ಬಾಟಲ್‌ಗ‌ಳಷ್ಟು ರಕ್ತ ಬೇಕಾಗುತ್ತದೆ. ಲಾಕ್‌ಡೌನ್‌ಗೂ ಮುನ್ನ ಮೈಸೂರಿನ ಕೆ.ಆರ್‌.ಆಸ್ಪತ್ರೆ, ಜೆಎಸ್‌ಎಸ್‌, ನಾರಾಯಣ ಹೃದಯಾಲಯ, ಅಪೊಲೋ ಆಸ್ಪತ್ರೆ, ಕಾವೇರಿ, ಸಂತ ಜೋಸೆಫ್, ಚಂದ್ರಕಲಾ, ಕಾಮಾಕ್ಷಿ ಆಸ್ಪತ್ರೆ ಹಾಗೂ ಜೀವಾಧಾರ ರಕ್ತನಿಧಿ ಕೇಂದ್ರಗಳಲ್ಲಿ ಶೇ.15ರಷ್ಟು ಮಾತ್ರ ರಕ್ತದ ಕೊರತೆಯಾಗುತ್ತಿತ್ತು. ಆಗ ಸರಳ ಚಿಕಿತ್ಸೆಗಳಿಗೆ ಸಡಿಲಿಕೆ ಮಾಡಿ, ಡೆಲಿವರಿ, ಡಯಾಲಿಸೀಸ್‌, ಇತರೇ ಶಸ್ತ್ರ ಚಿಕಿತ್ಸೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿತ್ತು. ಇದರೊಂದಿಗೆ ಜೀವಾಧಾರ ರಕ್ತನಿಧಿ ಕೇಂದ್ರವೊಂದರಲ್ಲೇ 60ರಿಂದ 70 ಬಾಟಲಿಗಳಷ್ಟು ರಕ್ತ ಶೇಖರಣೆಯಾಗಿರುತ್ತಿತ್ತು. 10 ಬಾಟಲ್‌ ಶೇಖರಿಸುವುದಕ್ಕೂ ಕಷ್ಟವಾಗುತ್ತಿದೆ.

ರಕ್ತದಾನ ಶಿಬಿರಗಳು ನಡೆಯುತ್ತಿಲ್ಲ. ದಾನಿಗಳು, ರಿಪ್ಲೇಸ್‌ಮೆಂಟ್‌ ಮಾಡುವವರೂ ಬರುತ್ತಿಲ್ಲ. ಹೀಗಾಗಿ ಕೇಂದ್ರದಲ್ಲಿ ರಕ್ತ ಶೇ.60ರಷ್ಟು ಕೊರತೆಯಾಗಿದೆ. 300ರಿಂದ 400 ಬಾಟಲಿಗಳಷ್ಟು ರಕ್ತ ಸಂಗ್ರಹವಾಗುತ್ತಿದ್ದ ಸ್ಥಳದಲ್ಲಿ 150 ಬಾಟಲಿಗಳಷ್ಟು ಮಾತ್ರ ಸಂಗ್ರವಾಗುತ್ತಿದ್ದು, ಶಸ್ತ್ರ ಚಿಕಿತ್ಸೆಗಳಿಗೆ ತೊಂದರೆಯಾಗಿದೆ. ತುರ್ತುಪರಿಸ್ಥಿಯಲ್ಲಿ ರೋಗಿಗಳು ರಕ್ತ ಪಡೆಯಲು ಪರದಾಡುತ್ತಿದ್ದು ಸರ್ಕಾರ ಪರಿಹಾರ ಕ್ರಮ ತೆಗೆದುಕೊಳ್ಳಬೇಕಿದೆ ಎನ್ನುತ್ತಾರೆ ಜೀವಾಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್‌. ಈಗ ಮೈಸೂರಿನಲ್ಲಿ ದಾನಿಗಳಿಂದ ರಕ್ತ ಸಂಗ್ರಹಿಸಲು ಜೀವಾಧಾರ ಕೇಂದ್ರ ಮುಂದಾಗಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಇಚ್ಛಿಸುವ ದಾನಿಗಳು ಕೇಂದ್ರಕ್ಕೆ ಸಂಪರ್ಕಿಸಿದರೆ, ಮನೆಯಿಂದ ಕರೆದುಕೊಂಡು ಬಂದು, ರಕ್ತದಾನ ಮಾಡಿದ ನಂತರ ಸುರಕ್ಷಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯಿದೆ. ಅಲ್ಲದೆ, ದಾನಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತಿದೆ. ಇದರಿಂದ ಮುಂದೆ ಅವರಿಗೆ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅಗತ್ಯವಿದ್ದಾಗ ಪ್ರಮಾಣ ಪತ್ರ ತೋರಿಸಿ ರಕ್ತ ಉಚಿತವಾಗಿ ಪಡೆಯಬಹುದು ಎಂದು ತಿಳಿಸಿದ್ದಾರೆ. ರಕ್ತದಾನಿಗಳು ಮೊ.ಸಂ. 9243781900, 9243781901 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next