Advertisement
ನಿತ್ಯ ಮಣ್ಣಿನ ಪಾತ್ರೆ, ಸಲಕರಣೆಗಳನ್ನು ಮನೆಯಲ್ಲೇ ತಯಾರಿಸಿ, ಮನೆ ಮನೆಗೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಕುಂಬಾರರ ಜೀವನ ದುಸ್ತರವೆನಿಸಿದೆ. ಆಧುನಿಕ ಕಾಲದಲ್ಲಿ ಮಣ್ಣಿನ ಪಾತ್ರೆಗಳು ಬೇಡಿಕೆ ಕಳೆದುಕೊಂಡಿದ್ದರೂ ಶ್ರಮಕ್ಕೆ ತಕ್ಕಷ್ಟು ಆದಾಯ ಪಡೆಯುತ್ತಿದ್ದರು.
ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ದೇಶವೇ ಲಾಕ್‌ಡೌನ್ ಆಗಿರುವುದರಿಂದ ಕಳೆದ 2-3 ವಾರಗಳಿಂದ ಯಾವುದೇ ವ್ಯಾಪಾರ – ವಹಿವಾಟು ನಡೆಯುತ್ತಿಲ್ಲ. ಇದರಿಂದ ಬೇಡಿಕೆಯಿದೆ ಎಂದು ತಯಾರಿಸಿದ ಸಾಕಷ್ಟು ಮಣ್ಣಿನ ಪರಿಕರಗಳು ಮನೆಯಲ್ಲಿಯೇ ರಾಶಿ ಬಿದ್ದಿದೆ. ಖರೀದಿಸುವವರಿಲ್ಲ. ಪ್ರಮುಖ ಮಾರುಕಟ್ಟೆಯಾಗಿದ್ದ ವಾರದ ಸಂತೆಗಳು ಎಲ್ಲಿಯೂ ನಡೆಯುತ್ತಿಲ್ಲ. ಇದು ಕುಂಬಾರಿಕೆ ಮೇಲೆ ಭಾರೀ ಪರಿಣಾಮ ಬೀರಿದೆ. ಅವಿಭಜಿತ ಕುಂದಾಪುರ ತಾಲೂಕಿನ ಆಲೂರಲ್ಲಿ 6 ಕುಟುಂಬಗಳು, ಕಾಲೊ¤àಡಿನಲ್ಲಿ 4-5 ಕುಟುಂಬಗಳು ಸೇರಿದಂತೆ ವಕ್ವಾಡಿ, ವಾಲೂ¤ರು, ಉಡುಪಿಯ ಬ್ರಹ್ಮಾವರ, ಪೆರ್ಡೂರು, ಆಜ್ರಿ, ಹೆಬ್ರಿ ಮತ್ತಿತರ ಕಡೆಗಳಲ್ಲಿ ಒಟ್ಟಾರೆ ಉಡುಪಿ ಜಿಲ್ಲೆಯಲ್ಲಿ 35 ಕುಟುಂಬಗಳು ಹಾಗೂ ದ.ಕ. ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ಮತ್ತಿತರ ಕಡೆಗಳಲ್ಲಿ ಸೇರಿದಂತೆ ಸುಮಾರು 150 ಕುಟುಂಬಗಳ ಸುಮಾರು 300 ಕ್ಕೂ ಹೆಚ್ಚು ಮಂದಿ ಕುಂಬಾರಿಕೆಯನ್ನು ಕುಲಕಸುಬಾಗಿ ಮಾಡುತ್ತಿದ್ದಾರೆ.
Related Articles
ಈಗಾಗಲೇ ನಮ್ಮ ಸಂಘದಿಂದ 60 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ 500 ರೂ. ಅಂತೆ ಪಿಂಚಣಿ ನೀಡಲಾಗುತ್ತಿದೆ. ಮಣ್ಣಿನ ಪರಿಕಗಳನ್ನು ನಮ್ಮ ಸಂಘದ ಮೂಲಕವೇ ಪೆರ್ಡೂರಿನಲ್ಲಿರುವ ಶೋರೂಂನಲ್ಲಿ ಖರೀದಿ ಮಾಡಲು ವ್ಯವಸ್ಥೆ ಮಾಡಲಾಗುವುದು.
– ಸಂತೋಷ್ ಕುಲಾಲ್, ಅಧ್ಯಕ್ಷರು, ಕುಂಬಾರರ ಗುಡಿ ಕೈಗಾರಿಕೆ ಸಹಕಾರಿ ಸಂಘ ಉಡುಪಿ
Advertisement
ಮಾರುಕಟ್ಟೆಯಿಲ್ಲನಾವು ಒಟ್ಟಿಗೆ 5-6 ಮಂದಿ ಸೇರಿ ಕುಂಬಾರಿಕೆ ವೃತ್ತಿಯನ್ನು ಮಾಡುತ್ತಿದ್ದೇವೆ. ಕಳೆದ ಒಂದು ತಿಂಗಳಿನಿಂದ ಸರಿಯಾದ ವಹಿವಾಟಿಲ್ಲ. ಬೇಸಗೆಯಲ್ಲಿ ಮಾರುಕಟ್ಟೆ ನಿರೀಕ್ಷೆಯಿಂದ ಪರಿಕರ ತಯಾರಿಸಿಟ್ಟಿದ್ದೆವು. ಆದರೀಗ ಮಾರಾಟ, ಸಾಗಾಟ ಸಾಧ್ಯವಿಲ್ಲ. ಇದರಿಂದ ಅಂದಾಜು 1.20 ಲಕ್ಷ ರೂ. ಗೂ ಅಧಿಕ ನಷ್ಟ ಸಂಭವಿಸಿದೆ. ಮಳೆಗಾಲ ಶುರುವಾದರೆ ಮಾರುಕಟ್ಟೆ ಇಲ್ಲ. ಇದರಿಂದ ಡಿಸೆಂಬರ್‌ವರೆಗೆ ಕಷ್ಟವಾಗಲಿದೆ.
– ರಘುರಾಮ ಕುಲಾಲ್, ಆಲೂರು