ನ್ಯೂಯಾರ್ಕ್‌ನಲ್ಲಿ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ವ್ಯಕ್ತಿಯೊಬ್ಬರು ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇನ್ನೇನು ಮೊದಲಿನ ಸ್ಥಿತಿಗೆ ಆರೋಗ್ಯ ಮರಳಿತು ಎಂದು ಯೋಚಿಸುತ್ತಿರಬೇಕಾದರೆ ಅವರ ಎರಡೂ ಕಾಲುಗಳು ಬಲ ಕಡೆದುಕೊಂಡವು ಹಾಗೂ ಶೀತವೇರಲು ತೊಡಗಿತು. ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ ಇದರ ಕುರಿತು ಅಧ್ಯಯನ ನಡೆಸಿದ ವೈದ್ಯಕೀಯ ಜಗತ್ತು ಕೋವಿಡ್ ಈ ರೀತಿಯೂ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನುವುದನ್ನು ಕಂಡುಕೊಂಡಿದೆ.
Advertisement
ಏನಾಗಿತ್ತು?ಈ ವ್ಯಕ್ತಿಯ ಮಹಾಅಪಧಮನಿಯು ತನ್ನ ಕೆಲಸವನ್ನು ಸ್ಥಗಿತಗೊಳಿಸಿತ್ತು. ದೇಹದ ಮುಖ್ಯ ಅಪಧಮನಿಯಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಂಭವಿಸಿತ್ತು. ಇದು ದೇಹದ ಕಾಲುಗಳೊಂದಿಗೆ ಸಂಪರ್ಕವಿಟ್ಟಕೊಂಡಿರುವ ಮುಖ್ಯ ಭಾಗವಾಗಿದೆ. ರಕ್ತವು ಇಲಿಯಾಕ್ ಅಪಧಮನಿಗಳ ಜತೆ ಸಂಪರ್ಕವನ್ನು ಕಳೆದುಕೊಂಡಿತ್ತು. ಇದರಿಂದ ವ್ಯಕ್ತಿಯ ಎರಡೂ ಕಾಲುಗಲಿಗೆ ರಕ್ತ ಸಂಚಾರವಾಗದೆ ಕಾಲು ದುರ್ಬಲವಾಗಲು ಕಾರಣವಾಗುತ್ತದೆ. ಇದು ಅತ್ಯಂತ ಅಪಾಯಕಾರಿ ಘಟ್ಟವಾಗಿದ್ದು, ಶೇ. 20ರಿಂದ 50ರಷ್ಟು ರೋಗಿಗಳ ಸಾವಿಗೆ ಕಾರಣವಾಗಬಹುದು. ಇದು ಹೆಚ್ಚಾಗಿ 38 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ. ಈ ಸಮಸ್ಯೆಯನ್ನು ಸರಿಪಡಿಸಬೇಕಾದರೆ ಶಸ್ತ್ರಚಿಕಿತ್ಸೆ ಮಾಡ ಬೇಕಾಗುತ್ತದೆ. ಇದು ಅತ್ಯಂತ ಸೂಕ್ಷ್ಮಹಂತ. ರಕ್ತ ಹೆಪ್ಪುಗಟ್ಟುವುದರಿಂದ ಮೂತ್ರಪಿಂಡ ವೈಫಲ್ಯ, ಹೃದಯದ ಉರಿಯೂತ ಮತ್ತು ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವುದು ಸೇರಿದಂತೆ ಭಯಾನಕ ಸಮಸ್ಯೆಗಳು ಉಂಟಾಗಬಹುದು.
ಕೋವಿಡ್ ವೈರಸ್ ಬಹು ಅಂಗ ವೈಫಲ್ಯಕ್ಕೂ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ ಇದು ರೋಗಿಯ ಉಸಿರಾಟದ ಸಾಮರ್ಥ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕೋವಿಡ್ -19 ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಹೆಚ್ಚು ಕಂಡುಬರುತ್ತಿದೆ. ರಕ್ತನಾಳಗಳ ಒಳಪದರದ ಮೇಲೆ ಕೋವಿಡ್ ವೈರಸ್ ಆಕ್ರಮಣವು ತುಂಬಾ ಅಪಾಯಕಾರಿ. ಇದು ಅಸ್ವಾಭಾವಿಕ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ಶ್ವಾಸಕೋಶದಲ್ಲಿನ ರಕ್ತ ಹೆಪ್ಪುಗಟ್ಟುವಿಕೆಗೆ ವೈದ್ಯಕೀಯ ಭಾಷೆಯಲ್ಲಿ ಪಲ್ಮನರಿ ಎಂಬಾಲಿಸಮ್ ಎನ್ನುತ್ತಾರೆ. ರಕ್ತನಾಳಕ್ಕೆ ಹಾನಿ
ವಿಶೇಷವಾಗಿ ರಕ್ತನಾಳಗಳಿಗೆ ಕೋವಿಡ್ ಹಾನಿಯುಂಟು ಮಾಡುತ್ತದೆ. ಇದು ನಾನಾ ಅನಾರೋಗ್ಯಕ್ಕೆ ಕಾರಣವಾಗಬಹುದಾಗಿದೆ. ದೇಹದ ಪ್ರತಿಯೊಂದು ಅಂಗಗಳಿಗೂ ಪೋಷಕಾಂಶ ಪೂರೈಸುವ ಜವಾಬ್ದಾರಿಯನ್ನು ರಕ್ತನಾಳಗಳು ನಿರ್ವಹಿಸುತ್ತವೆ. ಆದ್ದರಿಂದ ವೈರಸ್ ರಕ್ತನಾಳಗಳ ಮೇಲೆ ಪರಿಣಾಮ ಬೀರಿದರೆ ಅದರ ಫಲಿತಾಂಶ ಬಹು ಅಂಗಾಂಗಗಳ ವೈಫಲ್ಯದಲ್ಲಿ ಕೊನೆಗೊಳ್ಳಲಿದೆ.
Related Articles
ಕೋವಿಡ್ -19 ನೊಂದಿಗೆ ಸಂಪರ್ಕ ಹೊಂದಬಹುದಾದ ಅತ್ಯಂತ ಭಯಾನಕ ಸಿಂಡ್ರೋಮ್‌ಗಳಲ್ಲಿ ಪೀಡಿಯಾಟ್ರಿಕ್ ಮಲ್ಟಿಸಿಸ್ಟಮ್ ಇನ್‌ಫ್ಲಾಮೇಟರಿ ಸಿಂಡ್ರೋಮ… ಒಂದು. ಇದು ನಿರಂತರ ಜ್ವರ, ಉರಿಯೂತ, ಒಂದು ಅಥವಾ ಹೆಚ್ಚಿನ ಅಂಗಗಳಲ್ಲಿ ಲೋಪಗಳು ಅಂದರೆ ನೋವುಗಳು ಅಥವ ಕಾರ್ಯಕ್ಷಮತೆ ಕಡಿಮೆಯಾಗುವ ಮೂಲಕ ಪ್ರಕಟವಾಗುತ್ತದೆ. . ಕೆಲವು ಪ್ರದೇಶಗಳಲ್ಲಿ ಮಕ್ಕಳಲ್ಲಿ ಕವಸಾಕಿ ಕಾಯಿಲೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇದು ರಕ್ತನಾಳಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತಿದ್ದು, ಮಕ್ಕಳು ಹಲವಾರು ದಿನಗಳವರೆಗೆ ತೀವ್ರ ಜ್ವರ, ಕುತ್ತಿಗೆಯ ಗ್ರಂಥಿಗಳು ಊದಿಕೊಂಡಿರುವುದು, ಕೈ ಮತ್ತು ಕಾಲುಗಳಲ್ಲಿ ನೋವು, ಕೆಂಗಣ್ಣು ಇದರ ಲಕ್ಷಣವಾಗಿದೆ. ಕವಸಾಕಿ ರೋಗವು ಹೃದಯ ಸ್ನಾಯು ಅಥವಾ ಹೃದಯ ಕವಾಟಗಳ ಕಾರ್ಯವನ್ನು ಸ್ಥಗಿತಗೊಳಿಸಬಹುದು. ಕವಸಾಕಿ ಕಾಯಿಲೆಯು ಅಪಧಮನಿಗಳ ಗೋಡೆಗಳಲ್ಲಿ ಉರಿಯೂತವನ್ನು ಮಾಡಿ, ಹೃದಯವನ್ನು ಹಾನಿಗೊಳಿಸುತ್ತದೆ. ಕಾಲ್ಬೆರಳುಗಳು ಕೆಂಪು ಅಥವಾ ನೇರಳೆ ಬಣ್ಣಕ್ಕೆ ತಿರುಗಿ ಬಾತುಕೊಳ್ಳುವುದು ಈ ರೋಗದ ಇನ್ನೊಂದು ಲಕ್ಷಣ.
Advertisement