Advertisement

ಆರೋಗ್ಯದ ಮೇಲೆ ದೀರ್ಘಾವಧಿ ಪರಿಣಾಮ ಬೀರುತ್ತಾ ಕೋವಿಡ್ ?

02:42 PM May 12, 2020 | sudhir |

ರೋಮ್‌ : ಕೋವಿಡ್ ಸೊಂಕಿಗೆ ತುತ್ತಾಗಿದ್ದ ಮೋರೆನಾ ಕೊಲಂಬಿ ಮಾ.16ರಂದು ನೆಗೆಟಿವ್‌ ವರದಿ ಪಡೆದುಕೊಂಡು ಆಸ್ಪತ್ರೆಯಿಂದ ಹೊರ ಬಂದರು. ಕೋವಿಡ್ ಗೆ ತುತ್ತಾದ ಐದು ವಾರಗಳ ಬಳಿಕ ಅಂದರೆ ಎ.21ರಂದು ಅವರು ಪ್ರಸಾಧನ ವಸ್ತುಗಳಿಗೆ ಬಣ್ಣ ಸರಬರಾಜು ಮಾಡುವ ತನ್ನ ಕಂಪೆನಿಯ ನೌಕರಿಗೆ ಹಾಜರಾದರು. ಆದರೆ ಆಕೆಗೆ ಒಂದು ದಿನವೂ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಉಸಿರಾಟದ ಸಮಸ್ಯೆ ಮತ್ತು ಮೈಕೈ ನೋವು ಅವರನ್ನು ಕಾಡ ತೊಡಗಿತು. ಆದರೆ ಮತ್ತೂಮ್ಮೆ ಪರೀಕ್ಷೆ ಮಾಡಿಕೊಂಡಾಗಲೂ ವರದಿ ನೆಗೆಟಿವ್‌ ಬಂತು.

Advertisement

ರೋಮ್‌ನಲ್ಲಿ ಕೋವಿಡ್ ಸೋಂಕಿಗೊಳಗಾದ ಮೊದಲ ರೋಗಿಗಳಲ್ಲಿ ಕೊಲಂಬಿಯೂ ಸೇರಿದ್ದಾರೆ. ಆದರೆ 11 ವಾರಗಳ ಬಳಿಕವೂ ಅವರ ಆರೋಗ್ಯ ಸಹಜ ಸ್ಥಿತಿಗೆ ಬಂದಿಲ್ಲ. ಮಿಲನ್‌ ನಗರದ ಹೊರಭಾಗದ ಬಡಾವಣೆಯಲ್ಲಿ ವಾಸವಾಗಿರುವ ಕೊಲಂಬಿ “ನನ್ನ ಮಾಮೂಲು ದಿನಚರಿಗೆ ಮರಳಲು ಸಾಧ್ಯವಾಗುತ್ತಿಲ್ಲ’ ಎಂದು ದುಃಖ ವ್ಯಕ್ತಪಡಿಸುತ್ತಿದ್ದಾರೆ.

ಇದು ಕೊಲಂಬಿ ಒಬ್ಬರ ಕತೆಯಲ್ಲ. ಇಟಲಿಯಲ್ಲಿ ಈ ರೀತಿ ವರದಿ ನೆಗೆಟಿವ್‌ ಬಂದಿದ್ದರೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ನೂರಾರು ಮಂದಿಯಿದ್ದಾರೆ.

ಕೋವಿಡ್ ಸೋಂಕಿನ ವರದಿ ನೆಗೆಟಿವ್‌ ಆದರೂ ಕೆಲವರು ಪೂರ್ಣವಾಗಿ ಚೇತರಿಸದೆ ಇರುವುದು ಅಥವಾ ಅವರ ಆರೋಗ್ಯ ಹಿಂದಿನ ಸಹಜ ಸ್ಥಿತಿಗೆ ಮರಳದೇ ಇರುವುದು ಒಂದು ಹೊಸ ಬೆಳವಣಿಗೆ. ಇದು ಕೋವಿಡ್ ವೈರಸ್‌ ತಾತ್ಕಾಲಿಕ ಮಾತ್ರವಲ್ಲ ದೀರ್ಘ‌ಕಾಲೀನವಾದ ಅಥವಾ ಶಾಶ್ವತವಾದ ಆರೋಗ್ಯ ಸಂಬಂಧಿ ಪರಿಣಾಮಗಳನ್ನು ಉಂಟು ಮಾಡಲು ಶಕ್ತವಾಗಿದೆ ಎಂಬ ಅಂಶವನ್ನು ಸ್ಪಷ್ಟಪಡಿಸುತ್ತದೆ ಎನ್ನುತ್ತಿದ್ದಾರೆ ವೈದ್ಯರು.

ಚೇತರಿಸಿಕೊಳ್ಳುವ ಅವಧಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದೆ. ಕೆಲವರು ಶೀಘ್ರ ಚೇತರಿಸಿಕೊಂಡರೆ ಕೆಲವರು 40-50 ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದಿದ್ದಾರೆ.

Advertisement

ಹಾಗೆಯೇ ಎಲ್ಲ ಔಷಧಗಳೂ ಎಲ್ಲರೂ ಮೇಲೂ ಒಂದೇ ರೀತಿಯ ಪರಿಣಾಮವನ್ನು ಬೀರುತ್ತಿಲ್ಲ. ಈ ಎಲ್ಲ ಅಂಶಗಳು ಕೋವಿಡ್ ಒಂದು ಸಂಕೀರ್ಣವಾದ ವೈರಸ್‌ ಎನ್ನುವುದನ್ನು ತಿಳಿಸುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next