Advertisement

ಕೋವಿಡ್ ಹೊಡೆತ-ಜಗತ್ತು ತತ್ತರ: 3 ಲಕ್ಷ ದಾಟಿದ ಮೃತರ ಸಂಖ್ಯೆ, 4.5 ಮಿಲಿಯನ್ ಜನರಿಗೆ ಸೋಂಕು

08:27 AM May 16, 2020 | Mithun PG |

ವಾಷಿಂಗ್ಟನ್: ಜಗತ್ತಿನಾದ್ಯಂತ ಕೋವಿಡ್-19 ಗೆ ಬಲಿಯಾದವರ ಸಂಖ್ಯೆ 3 ಲಕ್ಷ ದಾಟಿದ್ದು,   ಸುಮಾರು 4.5 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ರಾಯ್ ಟರ್ಸ್ ಅಂಕಿ ಅಂಶಗಳು ತಿಳಿಸಿವೆ.

Advertisement

ಮೃತರ ಪ್ರಮಾಣ ಅಮೆರಿಕಾದಲ್ಲೇ ಹೆಚ್ಚಿದ್ದು (86.912), ಸೋಂಕಿತರ ಸಂಖ್ಯೆ ಕೂಡ (1.4 ಮಿಲಿಯನ್) ದ್ವಿಗುಣಗೊಳ್ಳುತ್ತಿದೆ. ಸ್ಪೇನ್, ರಷ್ಯಾ, ಯುಕೆ, ಇಟಲಿಯಲ್ಲಿ  ಕೋವಿಡ್ 19 ವೈರಸ್ ತಹಬದಿಗೆ ಬರುವ ಲಕ್ಷಣ ಗೋಚರಿಸುತ್ತಿಲ್ಲವಾಗಿದ್ದು, ಸಣ್ಣ-ಪುಟ್ಟ  ರಾಷ್ಟ್ರಗಳಂತೂ ವೈರಸ್ ಹೊಡೆತಕ್ಕೆ ನಲುಗಿ ಹೋಗಿವೆ.

ಭಾರತದಲ್ಲಿ ಗುರುವಾರದ ವೇಳೆಗೆ ಸೋಂಕಿತರ ಸಂಖ್ಯೆ 78 ಸಾವಿರಕ್ಕೆ ಏರಿಕೆಯಾಗಿದ್ದು, 2,549 ಮಂದಿ ಮೃತಪಟ್ಟಿದ್ದಾರೆ. ರಾಷ್ಟ್ರದಲ್ಲಿ ಸುಮಾರು 2 ಮಿಲಿಯನ್ ಜನರಿಗೆ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಅಮೆರಿಕಾದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ  ವೈರಸ್ ಆರ್ಭಟಕ್ಕೆ 1,754 ಜನರು ಬಲಿಯಾಗಿದ್ದು ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ. ಜಗತ್ತಿನಾದ್ಯಂತ ಸುಮಾರು 17,03,808  ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next