Advertisement

ಕೋವಿಡ್ ಸೋಂಕಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ 10ನೇ ಬಲಿ: ಉಳ್ಳಾಲ ಅಝಾದ್‍ನಗರದ ಮಹಿಳೆ ಬಲಿ

07:34 PM Jun 24, 2020 | sudhir |

ಉಳ್ಳಾಲ: ನಿನ್ನೆಯಷ್ಟೇ ಕೋವಿಡ್ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಉಳ್ಳಾಲ ಅಝಾದ್‍ನಗರದ ಮಹಿಳೆಯೊಬ್ಬರು ಇಂದು ಮೃತಪಟ್ಟಿದ್ದಾರೆ ಇದರೊಂದಿಗೆ ಜೆಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

Advertisement

ಉಳ್ಳಾಲ ಅಝಾದ್‍ನಗರದ 66ರ ಹರೆಯದ ಮಹಿಳೆಗೆ  ಬೇದಿ (ಲೂಸ್‍ಮೋಷನ್) ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಅವರು  ಜೂನ್ 19 ರಂದು ಆಸ್ಪತ್ರೆಗೆ ದಾಖಲಾಗಿದ್ದು ಜೂನ್ 21 ರಂದು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ದಾಖಲಾದ ಸಂದರ್ಭದಲ್ಲಿ ಮಹಿಳೆಯ ಗಂಟಲುದ್ರವ ಪರೀಕ್ಷೆ ತೆಗೆದುಕೊಂಡಿದ್ದು ಮಂಗಳವಾರ ದ್ರವ ಪರೀಕ್ಷೆಯಲ್ಲಿ ಪಾಸೆಟಿವ್ ಬಂದ ಹಿನ್ನಲೆಯಲ್ಲಿ ಮಹಿಳೆಯನ್ನು ನಗರದ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ ಇಂದು ಮಹಿಳೆ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ, ಈ ಕುರಿತು ಅರೋಗ್ಯ ಇಲಾಖೆಯು ಸ್ಪಷ್ಟ ಪಡಿಸಿದೆ.
ಶಾಸಕ ಯು. ಟಿ. ಖಾದರ್ ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಜರಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ಟ್ರಾವೆಲ್ ಹಿಸ್ಟರಿ ನಿಗೂಢ : ಮಹಿಳೆ ಮನೆ ಬಿಟ್ಟು ಎಲ್ಲೂ ಹೊರಗೆ ಹೋಗಿಲ್ಲ, ಮನೆಯಲ್ಲಿರುವವರು ಯಾರೂ ಹೊರಗಿನಿಂದ ಬಂದಿಲ್ಲ ಆದರೆ ಮಹಿಳೆಗೆ ಸೋಂಕು ಹೇಗೆ ತಗುಲಿದೆ ಎನ್ನುವುದೇ ನಿಗೂಢವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಎಂಟು ದಿನಗಳ ಕಾಲ ಚಿಕಿತ್ಸೆಯಲ್ಲಿರುವಾಗ ಸೋಂಕು ತಗುಲಿರುವ ಸಾಧ್ಯತೆಯ ಬಗ್ಗೆಯೂ ಆರೋಗ್ಯ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next