Advertisement

ರಾಜ್ಯದಲ್ಲೂ ನಿಯಂತ್ರಣಕ್ಕೆ ಬರಲಿದೆ ಕೋವಿಡ್ : ಸಚಿವ ಸುರೇಶ ಅಂಗಡಿ

12:32 PM Aug 13, 2020 | sudhir |

ಬೈಲಹೊಂಗಲ: ಕೋವಿಡ್ ಸೋಂಕಿತರು ತಮಗಿರುವ ಇತೆರೆ ಕಾಯಿಲೆಗಳ ಪರಿಣಾಮದಿಂದ ಸಾವನ್ನಪ್ಪುತ್ತಿದ್ದಾರೆ. ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಅನೇಕ ನಿಯಮಗಳನ್ನು ರೂಪಿಸಿದ್ದು, ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ರೈಲ್ವೆ ಖಾತೆ
ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು. ಅವರು ಬುಧವಾರ ಸಂಜೆ ಪಟ್ಟಣದ ಮೆಟಗುಡ್ಡ ಅವರ ವಿಜಯ ಇಂಡಸ್ಟ್ರೀಸ್‌
ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೆಹಲಿ ಮುಂಬೆ„ಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ. ರಾಜ್ಯದಲ್ಲೂ ಸಹ
ಬರುವ ದಿನಗಳಲ್ಲಿ ನಿಯಂತ್ರಣಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ
ಕೊರೊನಾದೊಂದಿಗೆ ಬದುಕು ಸಾಗಿಸಬೇಕಾಗಿದೆ. ಶಾಲೆ, ಕಾಲೇಜು ಪ್ರಾರಂಭಿಸಲು ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಮುನ್ನೆಚ್ಚರಿಕೆ ವಹಿಸುವುದರಿಂದ ಕೋವಿಡ್ ಹಿಮ್ಮೆಟ್ಟಿಸಲು ಸಾಧ್ಯ. ರಾಜ್ಯ, ಕೇಂದ್ರ ಸರಕಾರ ಸಂದಿಗ್ಧ ಪರಿಸ್ಥಿತಿಯಲ್ಲೂ ಉತ್ತಮ ಕಾರ್ಯ ನಿರ್ವಹಿಸಿ ಜನಮನ್ನಣೆಗೆ ಪಾತ್ರವಾಗಿವೆ ಎಂದರು.

Advertisement

ರಕ್ತದ ಕೊರತೆ ಎದ್ದು ಕಾಣುತ್ತಿರುವದನ್ನು ಮನಗಂಡು ಕೊರೊನಾ ಸಂಕಷ್ಟದಲ್ಲೂ ಮಾಜಿ ಶಾಸಕ ಜಗದೀಶ ಮೆಟಗುಡ್ಡ
ಅಭಿಮಾನಿ ಬಳಗ ರಕ್ತದಾನ ಶಿಬಿರ ನಡೆಸಿದ್ದಲ್ಲದೇ 70 ಸಾವಿರ ಮಾಸ್ಕ್, 50 ಸಾವಿರ ಸ್ಯಾನಿಟೈಸರ್‌, ಆಹಾರ ಕಿಟ್‌ ವಿತರಿಸಿದ್ದು, ವಿಜಯ ಇಂಡಸ್ಟ್ರೀಸ್‌ ವತಿಯಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿ ಗೆ 2.50 ಲಕ್ಷ ರೂ. ದೇಣಿಗೆ ನೀಡಿದ ಕಾರ್ಯ ಮೆಚ್ಚುವಂತದ್ದು ಎಂದರು. ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ದೇಶದ್ರೋಹಿಗಳು ಪೂರ್ವ ನಿಯೋಜಿತವಾಗಿ ದಾಳಿ ನಡೆಸಿದ್ದು ಖಂಡನೀàಯ. ಅವರಿಗೆ ತಕ್ಕ ಶಿಕ್ಷೆಗೆ ಸರಕಾರ ಕ್ರಮ ಕೈಗೊಳ್ಳಲಿದೆ.
ಸ್ವದೇಶಿ ಸಾಮಗ್ರಿ ಖರೀದಿಸಿ ದೇಶವನ್ನು ಆರ್ಥಿಕವಾಗಿ ಬಲಪಡಿಸಲು ಎಲ್ಲರೂ ಪಣ ತೊಡಬೇಕಾಗಿದೆ ಎಂದರು.
ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಕೆಎಲ್‌ಇ ನಿರ್ದೇಶಕ ಎಸ್‌.ಸಿ. ಮೆಟಗುಡ್ಡ, ಉದ್ಯಮಿ ವಿಜಯ ಮೆಟಗುಡ್ಡ, ಪುರಸಭೆ
ಸದಸ್ಯ ಗುರು ಮೆಟಗುಡ್ಡ, ಶಿವಾನಂದ ಬಡ್ಡಿಮನಿ, ಸುನೀಲ ಮರಕುಂಬಿ, ಪ್ರಫುಲ ಪಾಟೀಲ, ಸುಭಾಷ ತುರಮರಿ, ರವಿ
ತುರಮರಿ, ಸಂತೋಷ ಹಡಪದ, ಬಿಜೆಪಿ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next