Advertisement

ಕೋವಿಡ್ 19 ಸೋಂಕಿತರ ಸಂಪರ್ಕ ಪತ್ತೆ ಆ್ಯಪ್ ಗಳು ಎಷ್ಟು ಸುರಕ್ಷಿತ?

07:13 PM Aug 18, 2020 | Hari Prasad |

ಕೋವಿಡ್ 19 ಸೊಂಕಿನ ಈ ಕಾಲಘಟ್ಟದಲ್ಲಿ ಎಲ್ಲರಲ್ಲೂ ಒಂದೇ ಭಯ ಏನೆಂದರೆ ನಾವೆಲ್ಲಾದರೂ ಈ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿವೆಯೇ ಎಂಬುದು.

Advertisement

ಒಂದುವೇಳೆ ಈ ರೀತಿಯಾಗಿ ವ್ಯಕ್ತಿಯೊಬ್ಬ ಕೋವಿಡ್ 19 ಸೋಂಕಿಗೆ ಒಳಗಾಗಿದ್ದಾನೆಂದು ಆತನಿಗೆ ತಿಳಿದುಬಿಟ್ಟರೆ ಆ ವ್ಯಕ್ತಿಯು ತನ್ನನ್ನು ತಾನು ಇತರರ ಸಂಪರ್ಕದಿಂದ ದೂರವಿರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಆದರೆ ಈ ರೀತಿಯಾಗಿ ಕೋವಿಡ್ 19 ಸೋಂಕಿಗೆ ಒಳಗಾದ ವ್ಯಕ್ತಿಗಳು ತಮ್ಮ ಮನೆಯಲ್ಲೇ ಕ್ವಾರೆಂಟೈನ್ ನಲ್ಲಿರದೆ ಹೊರಗೆಲ್ಲಾ ತಿರುಗಾಡುತ್ತಿದ್ದರೆ, ತಮ್ಮ ಸಂಪರ್ಕಕ್ಕೆ ಬರುವ ಎಲ್ಲರಿಗೂ ಈ ಸೊಂಕನ್ನು ಪುಕ್ಕಟೆಯಾಗಿ ಹರಡುವ ಅಪಾಯ ಇದ್ದೇ ಇರುತ್ತದೆ.

ಹೀಗಾಗಿ ನಾವು ಕೋವಿಡ್ 19 ಸೋಂಕಿನ ಅಪಾಯದಲ್ಲಿದ್ದೇವೆ ಎಂಬುದನ್ನು ನಮಗೇ ಸ್ವತಃ ತಿಳಿದುಕೊಳ್ಳಲು ಸಾಧ್ಯವಾಗುವಂತೆ ಟೆಕ್ ಕಂಪೆನಿಗಳು ಕೋವಿಡ್ 19 ಸೋಂಕಿನ ಅಪಾಯವನ್ನು ಪತ್ತೆ ಹಚ್ಚುವ ಮೊಬೈಲ್ ಅಪ್ಲಿಕೇಷನ್ ಗಳನ್ನು ತಯಾರಿಸಿ ಮೊಬೈಲ್ ಬಳಕೆದಾರರ ಉಪಯೋಗಕ್ಕೆ ಬಿಟ್ಟಿವೆ. ಇವುಗಳ ಮೂಲಕ ನಮ್ಮ ಸುತ್ತಮುತ್ತ ಕೋವಿಡ್ 19 ಸೋಂಕಿತರು ಇರುವ ಮಾಹಿತಿ ನಮಗೆ ಬೆರಳ ತುದಿಯಲ್ಲಿ ಲಭಿಸುತ್ತದೆ.

ತಂತ್ರಜ್ಞಾನ ಬಹಳವಾಗಿ ಮುಂದುವರೆದಿರುವ ಈ ಕಾಲದಲ್ಲಿ ಇದೊಂದು ಅತ್ಯಂತ ಉಪಯುಕ್ತವಾದ ವ್ಯವಸ್ಥೆಯಾಗಿದೆ. ಆದರೆ ಇದೇ ಸಂದರ್ಭದಲ್ಲಿ ಇವುಗಳ ವಿಶ್ವಾಸಾರ್ಹತೆಯ ಕುರಿತಾಗಿಯೂ ಕೆಲವೊಂದು ಪ್ರಶ್ನೆಗಳು ಏಳುತ್ತಿವೆ ಮತ್ತು ಇದು ನಮ್ಮ ಮಾಹಿತಿ ಮತ್ತು ಗೌಪ್ಯತೆಗೆ ಸಂಬಂಧಿಸಿದ ವಿಷಯಗಳದ್ದಾಗಿದೆ.

Advertisement

ಇಂತಹ ಸಾಫ್ಟ್ ವೇರ್ ಗಳು ಅವುಗಳ ರಚನಾ ಸ್ವರೂಪಕ್ಕೆ ಅನುಗುಣವಾಗಿ ಕೆಲವೊಂದು ಮಾಹಿತಿಗಳನ್ನು ಹೊರಗೆಡಹುದು ಅನಿವಾರ್ಯವಾಗಿರುತ್ತದೆ. ಮತ್ತು ಮಾಹಿತಿಗಳನ್ನು ಸಂಗ್ರಹಿಸಿ ಅವುಗಳನ್ನು ರಕ್ಷಿಸುವಲ್ಲಿ ಕೆಲವು ಸಾಫ್ಟ್ ವೇರ್ ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.

ಕೋವಿಡ್ 19 ವಿಚಾರದಲ್ಲಿ ಹೆಚ್ಚಿನವರ ಕಾಳಜಿ ತಮ್ಮ ಮತ್ತು ತಮ್ಮವರ ಆರೋಗ್ಯ ರಕ್ಷಣೆಯ ವಿಚಾರ ಆಗಿರುವುದರಿಂದ ಅವರು ತಮ್ಮ ಮಾಹಿತಿ ಸುರಕ್ಷತೆಯ ಕುರಿತಾಗಿ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇನ್ನು ಕೆಲವರು ಈ ವಿಚಾರದಲ್ಲಿ ಬಹಳ ಪರ್ಫೆಕ್ಟಾಗಿ ಇರುತ್ತಾರೆ ಮತ್ತು ತಮ್ಮ ಮಾಹಿತಿ ಗೌಪ್ಯತೆಗೆ ಅವರು ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ.

ಅಪಾಯಕಾರಿ ಪತ್ರಿಕೋದ್ಯಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು ಅಥವಾ ರಾಜಕೀಯವಾಗಿ ಪ್ರಕ್ಷುಬ್ಧ ಪ್ರದೇಶಗಳಿಗೆ ತೆರಳುವ ವ್ಯಕ್ತಿಗಳಲ್ಲಿ ಯಾರಾದರೂ https://surfshark.com/servers/india ನಂತಹ ವಿಪಿಎನ್ ಗಳನ್ನು ಬಳಸುತ್ತಿದ್ದಲ್ಲಿ ಈ ಮಾಹಿತಿ ಸುರಕ್ಷತೆಯ ವಿಚಾರದ ಕುರಿತಾಗಿ ಅವರಿಗೆ ಅರಿವದ್ದೇ ಇರುತ್ತದೆ.

ಮೊಬೈಲ್ ಬಳಕೆದಾರರು ತಮಗೆ ಅಗತ್ಯವಿಲ್ಲದಿರುವ ಅಪ್ಲಿಕೇಷನ್ ಗಳನ್ನು ತಮ್ಮ ಮೊಬೈಲ್ ಗಳಿಗೆ ಹಾಕಿಕೊಂಡಲ್ಲಿ ಅದು ಅಪಾಯಕಾರಿ ನಡೆಯೇ ಸರಿ. ಇನ್ನು ಕೆಲವರು ಯಾವುದೇ ಆ್ಯಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಮೊದಲು ಅವುಗಳ ಸಾಚಾತನವನ್ನು ಖಚಿತಪಡಿಸಿಕೊಳ್ಳುತ್ತಾರೆ.

ಕೆಲವು ಅಪ್ಲಿಕೇಷನ್ ಗಳು ಬ್ಲೂಟೂತ್ ಮೂಲಕ ಸಂಭಾವ್ಯತೆಯ ತಪಾಸಣೆಯನ್ನು ಮಾತ್ರವೇ ನಡೆಸುತ್ತವೆ. ಇನ್ನು ಕೆಲವು ಆ್ಯಪ್ ಗಳು ಜಿಪಿಎಸ್ ಹಾಗೂ ಸೆಲ್ ಟವರ್ ಗಳ ಮೂಲಕ ಜಿಯೋ ಲೊಕೇಷನ್ ಗಳನ್ನು ಬಳಸಿಕೊಳ್ಳುತ್ತವೆ. ಇವುಗಳಲ್ಲಿ ಕೆಲವು ಆ್ಯಪ್ ಗಳು ಮಾಹಿತಿಗಳನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಶೇಖರಿಸಿಟ್ಟುಕೊಂಡರೆ ಇನ್ನು ಕೆಲವು ತಮ್ಮ ಆ್ಯಪ್ ಬಳಕೆದಾರರಿಗೆ ಸೆಂಟ್ರಲ್ ಡಾಟಾಬೇಸ್ ವ್ಯವಸ್ಥೆಯನ್ನು ರಚಿಸಿಕೊಟ್ಟಿರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next