Advertisement

ರಾಜ್ಯ ಸರಕಾರದ ನೆರವಿಗೆ ಕೋವಿಡ್‌-19: ಕಾರ್ಯಪಡೆ ಸ್ಥಾಪಿಸಿದ ಕಾಂಗ್ರೆಸ್‌

06:50 PM Apr 12, 2020 | mahesh |

ಮುಂಬಯಿ: ಮಹಾಮಾರಿ ಕೋವಿಡ್-19 ಪ್ರಕೋಪವನ್ನು ನಿಭಾಯಿಸಲು ರಾಜ್ಯ ಸರಕಾರಕ್ಕೆ ಸಹಾಯ ಮಾಡಲು ಕಾಂಗ್ರೆಸ್‌ ಪಕ್ಷದ ಮಹಾರಾಷ್ಟ್ರ ಘಟಕವು ಮಾಜಿ ಮುಖ್ಯಮಂತ್ರಿ ಪೃಥ್ವೀರಾಜ್‌ ಚವಾಣ್‌ ಅವರ ನೇತೃತ್ವದಲ್ಲಿ ಕೋವಿಡ್‌-19 ಕಾರ್ಯಪಡೆಯನ್ನು ಸ್ಥಾಪಿಸಿದೆ. ವಿವಿಧ ಉಪಸಮಿತಿಗಳನ್ನು ಒಳಗೊಂಡಿರುವ ಈ ಕಾರ್ಯ ಪಡೆಯು ಸಾಂಕ್ರಾಮಿಕ ರೋಗದಿಂದ ಉಂಟಾಗುವ ಪರಿಣಾಮದ ವಿಭಿನ್ನ ಅಂಶಗಳನ್ನು ಅಧ್ಯಯನ ಮಾಡಲಿದೆ. ಮಾಜಿ ಸಿಎಂ ಮತ್ತು ಶಾಸಕ ಪೃಥ್ವೀರಾಜ್‌  ಚವಾಣ್‌ ಅವರ ನೇತೃತ್ವದಲ್ಲಿ ಕಾರ್ಯಪಡೆಯು ಕಾರ್ಯನಿರ್ವಹಿಸಲಿದೆ. ಇದರ ಸಂಯೋಜಕರಾಗಿ ಮಾಜಿ ಸಂಸದ ಬಾಲಚಂದ್ರ ಮುಂಗೇಕರ್‌ ಅವರೊಂದಿಗೆ ಇತರ 18 ಮಂದಿ  ಇರಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಮತ್ತು ಕಂದಾಯ ಸಚಿವ ಬಾಳಾಸಾಹೇಬ್‌ ಥೋರಟ್‌ ಹೇಳಿದ್ದಾರೆ.

Advertisement

ರಾಜ್ಯಸಭಾ ಸಂಸದ ರಾಜೀವ್‌ ಸಾತವ್‌, ಮುಂಬಯಿ ಕಾಂಗ್ರೆಸ್‌ ಅಧ್ಯಕ್ಷ ಏಕನಾಥ್‌ ಗಾಯಕ್ವಾಡ್‌, ರಾಜ್ಯ ಘಟಕದ ಮಾಜಿ ಅಧ್ಯಕ್ಷ ಮಾಣಿಕ್‌ ರಾವ್‌ ಠಾಕ್ರೆ, ಎಂಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಬಸವರಾಜ್‌ ಪಾಟೀಲ…, ಮುಜಾಫ‌ರ್‌ ಹುಸೇನ…, ಮಾಜಿ ಸಚಿವ ನಸೀಮ್‌ ಖಾನ…, ಮಾಜಿ ಕೇಂದ್ರ ಸಚಿವ ವಿಲಾಸ್‌ ಮುಟ್ಟೆವåಾÌì, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸುಶಿಬೆನ್‌ ಶಾ, ಮಾಜಿ ಸಚಿವ ಚಂದ್ರಕಾಂತ್‌ ಹಂದೋರೆ, ಶಾಸಕ ಸಂಗ್ರಾಮ್‌ ಥೋಪ್ಟೆ ಮತ್ತು ಮಾಜಿ ಸಚಿವ ರಂಜೀತ್‌ ಕಾಂಬ್ಳೆ, ಮಾಜಿ ಶಾಸಕ ಕಲ್ಯಾಣ್‌ ಕಾಳೆ, ಎಂಪಿಸಿಸಿ ಪ್ರಧಾನ ಕಾರ್ಯದರ್ಶಿ ಗಣೇಶ್‌ ಪಾಟೀಲ್‌ ಮತ್ತಿತರರು ಈ ಕಾರ್ಯಪಡೆಯ ಸದಸ್ಯರಾಗಿದ್ದಾರೆ. ಎಐಸಿಸಿ ಸಂಶೋಧನಾ ವಿಭಾಗದ ರಾಷ್ಟ್ರೀಯ ಸಂಯೋಜಕ ಅಮೋಲ್‌ ದೇಶು¾ಖ್‌ ಅವರು ಕಾರ್ಯಪಡೆಯ ಕಾರ್ಯದರ್ಶಿಯಾಗಿದ್ದಾರೆ.

ಕೋವಿಡ್‌ -19 ಸಾಂಕ್ರಾಮಿಕ ರೋಗದ ಸಾಮಾಜಿಕ- ಆರ್ಥಿಕ ಪರಿಣಾಮದಂಥ ವಿವಿಧ ಅಂಶಗಳನ್ನು ಅಧ್ಯಯನ ಮಾಡಲು ಈ ಕಾರ್ಯಪಡೆಯ ಅಡಿಯಲ್ಲಿ ಅನೇಕ ಉಪ ಸಮಿತಿಗಳನ್ನು ರಚಿಸಲಾಗಿದೆ.

ಮತ್ತೂಂದು ಸಮಿತಿಯು ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಅಧ್ಯಯನ ಮಾಡಲಿದೆ ಹಾಗೂ ಅದನ್ನು ಸುಧಾರಿಸಲು ಮತ್ತು ಬಲಪಡಿಸುವ ಮಾರ್ಗಗಳನ್ನು ಸೂಚಿಸಲಿದೆ. ಅದೇ, ಇನ್ನೊಂದು ಸಮಿತಿಯು ಸರಕಾರದ ಕ್ರಮಗಳ ಬಗ್ಗೆ ಮತ್ತು ಅವುಗಳನ್ನು ಸರಿಯಾಗಿ ಜಾರಿಗೊಳಿಸಲಾಗಿದೆಯೆ ಎಂದು ಸೂಕ್ಷ್ಮವಾಗಿ ಗಮನಿಸಲಿದೆ. ಮಾಧ್ಯಮ, ಸೋಷಿಯಲ್‌ ಮೀಡಿಯಾ ಮತ್ತು ಹೆಲ್ಪ್ಲೈನ್‌ ಉಪಸಮಿತಿಯನ್ನು ಕೂಡ ರಚಿಸಲಾಗಿದೆ. ಈ ಸಮಿತಿಯು ಜಾಗೃತಿ ಮೂಡಿಸಲು ಮತ್ತು ಸರಕಾರ ಕೈಗೊಂಡ ಕ್ರಮಗಳನ್ನು ಪ್ರಚಾರ ಮಾಡಲು ಮತ್ತು ಪರಿಹಾರ ಕಾರ್ಯಗಳನ್ನು ಸೂಕ್ಷ್ಮವಾಗಿ ಗಮನಿಸಲು ಕೆಲಸ ಮಾಡಲಿದೆ. ಈ ಸಮಿತಿಯು ಎಂಪಿಸಿಸಿ ಸ್ಥಾಪಿಸಿದ ಹೆಲ್ಪ್ಡೆಸ್ಕ್ನಿಂದ ಪಡೆದ ದೂರುಗಳು ಮತ್ತು ಸಲಹೆಗಳನ್ನು ಕೂಡ ಪರಿಶೀಲಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next