Advertisement

ಆಗಸ್ಟ್ ಎರಡನೇ ವಾರದಲ್ಲಿ ಸೋಂಕಿನ ಪ್ರಮಾಣ ಹಠಾತ್ ಏರಿಕೆ ಸಾಧ್ಯತೆ : ಅಧ್ಯಯನ ವರದಿ

02:14 PM Aug 02, 2021 | Team Udayavani |

ನವ ದೆಹಲಿ : ಸಂಭಾವ್ಯ ಕೋವಿಡ್ ಸೋಂಕಿನ ಅಲೆಯ ಭೀತಿಯ ನಡುವೆ, ಆಗಸ್ಟ್ ಎರಡನೇ ವಾರದಲ್ಲಿ   ದೇಶದಾದ್ಯಂತ ಸೋಂಕು ಹಠಾತ್ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

Advertisement

ದಿನವೊಂದಕ್ಕೆ ಒಂದುವರೆಲಕ್ಷ ಹೊಸ ಕೋವಿಡ್ ಸೋಂಕು ದೇಶದಾದ್ಯಂತ ಪತ್ತೆಯಾಗುವ ಸಾಧ್ಯತೆ ಇದ್ದು, ಇದು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ತಂದೊಡ್ಡಬಹುದೆಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ :  ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 40,134 ಕೋವಿಡ್ ಪ್ರಕರಣ ಪತ್ತೆ, ಚೇತರಿಕೆ ಪ್ರಮಾಣ ಶೇ.97.35

ಹೈದರಬಾದ್ ಹಾಗೂ ಕಾನ್ಪುರ ಮೂಲದ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕಾರದ ಮತುಕುಮಲ್ಲಿ ವಿದ್ಯಾಸಗರ್ ಹಾಗೂ ಮಣೀಂದ್ರ ಅಗರ್ ವಾಲ್ ನೇತೃತ್ವದಲ್ಲಿ ನಡೆದ  ಅಧ್ಯಯನದಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಆಗಸ್ಟ್ ಮಧ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಧಿಡೀರನೇ ಏರಿಕೆಯಾಗುವ ಸಾಧಯತೆಯಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ಆದಾಗ್ಯೂ, ಎರಡನೇ ಅಲೆಗಿಂತ ಹರಡುವಿಕೆಯ ಪ್ರಮಾಣ ನಿಧಾನಗತಿಯಲ್ಲಿ ಇರಲಿದೆ ಎಂದು ಸಂಶೋಧಕರು ತಮ್ಮ ಅಧ್ಯಯನ ವರದಿಯಲ್ಲಿ ತಿಳಿಸಿದ್ದಾರೆ.

Advertisement

ಈ ಹಿಂದೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಡಾ. ಸಮೀರನ್ ಪಾಂಡಾ, ಕೋವಿಡ್ 19 ನ ಮೂರನೇ ಅಲೆ ಬಹುಶಃ  ಆಗಸ್ಟ್ ಅಂತ್ಯದ ವೇಳೆಗೆ ಸಂಭವಿಸಬಹುದು ಎಂದು ಹೇಳಿದ್ದರು.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸ ಸೋಂಕಿನ ಪ್ರಮಾಣ ಹಾಗೂ ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಒಟ್ಟು 40,134 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಕಳೆದ ಐದು ದಿನಗಳಲ್ಲಿ ಇದ್ದ ಸೋಂಕಿನ ಹೆಚ್ಚಳಲ್ಲೆ ಸ್ವಲ್ಪ ಬ್ರೇಕ್ ಬಿದ್ದಿದೆ.

ಏತನ್ಮಧ್ಯೆ ಕೋವಿಡ್ ಸೋಂಕಿನಿಂದ ಕಳೆದ 24ಗಂಟೆಗಳಲ್ಲಿ 422 ಮಂದಿ ಸಾವನ್ನಪ್ಪಿದ್ದು, ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಒಟ್ಟು 31 695, 959ಕ್ಕೆ ಏರಿಕೆಯಾಗಿದೆ. ಅದೇ ರೀತಿ ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 4,24,773ಕ್ಕೆ ಹೆಚ್ಚಳವಾಗಿದೆ.

ಇನ್ನು, ಕಳೆದ ವಾರದ ಪಾಸಿಟಿವಿಟಿ ದರ ಪ್ರಸ್ತುತ 2.37% ರಷ್ಟಿದೆ ಮತ್ತು ದೈನಂದಿನ ಪಾಸಿಟಿವಿಟಿ ದರವು ಇಂದು 2.81% ರಷ್ಟಿದೆ ಎಂದು ಸಚಿವಾಲಯ ಇಂದು(ಸೋಮವಾರ, ಆಗಸ್ಟ್ 02) ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಿದೆ.

ಇದನ್ನೂ ಓದಿ : ಮತ್ತೊಂದು ಹಾಕಿ ವಿಕ್ರಮ:ಆಸೀಸ್ ತಂಡವನ್ನು ಸೋಲಿಸಿ ಸೆಮಿ ಫೈನಲ್ ಪ್ರವೇಶಿಸಿದ ಭಾರತ ವನಿತಾ ತಂಡ

Advertisement

Udayavani is now on Telegram. Click here to join our channel and stay updated with the latest news.

Next