Advertisement

ಹಾಸನ ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ 441ಕ್ಕೇರಿಕೆ

06:27 AM Jul 03, 2020 | Lakshmi GovindaRaj |

ಹಾಸನ: ಜಿಲ್ಲೆಯಲ್ಲಿ ಕೋವಿಡ್‌ 19 ಆರ್ಭಟ ಮುಂದುವರಿದಿದ್ದು, ಗುರು ವಾರ 15 ಮಂದಿಗೆ ಸೋಂಕು ದೃಢಪಟ್ಟಿದೆ. ಒಬ್ಬ ಮಹಿಳೆ ಸಾವನ್ನಪ್ಪಿದ್ದು, ಕೋವಿಡ್‌ 19ಗೆ ಬಲಿಯಾದವರ ಸಂಖ್ಯೆ 5ಕ್ಕೇರಿದೆ. ಇದು ವರೆಗೂ ಒಟ್ಟು 441 ಮಂದಿಗೆ  ಕೋವಿಡ್‌ 19 ಹರಡಿದ್ದು, ಆಸ್ಪತ್ರೆಯಲ್ಲಿ 190 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಮಧುಮೇಹಿ ರೋಗಿಯಾಗಿದ್ದ ಚನ್ನರಾಯಪಟ್ಟಣ ತಾಲೂಕಿನ 65 ವರ್ಷದ ಪುರುಷ ಜ್ವರದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದರು.

Advertisement

ಅವರನ್ನು ಬುಧವಾರ ರಾತ್ರಿ ಹಾಸನದ ಕೋವಿಡ್‌ 19 ಆಸ್ಪತ್ರೆಗೆ ಕರೆತಂದು ದಾಖಲಾಗಿತ್ತು. ಅವರು ಗುರುವಾರ ಬೆಳಗ್ಗೆ 7.45ರ ವೇಳೆಗೆ ಸಾವನ್ನಪ್ಪಿದರು. ಅವರಿಗೆ ಕೋವಿಡ್‌ 19 ಸೋಂಕು ಇರುವುದು ದೃಢಪಟ್ಟಿದೆ ಎಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ. ಕೆ.ಎಂ. ಸತೀಶ್‌ಕುಮಾರ್‌ ಅವರು ತಿಳಿಸಿದ್ದಾರೆ. ಗುರುವಾರ ವರದಿಯಾದ 15 ಕೋವಿಡ್‌ 19 ಪಾಸಿಟಿವ್‌ ಪ್ರಕರಣಗಳಲ್ಲಿ ಹಾಸನ ತಾಲೂಕಿನ 6 ಮಂದಿ ಸೋಂಕಿ ತರ ಪೈಕಿ ಇಬ್ಬರು  ಮಹಾರಾಷ್ಟ್ರ ಪ್ರಯಾ ಣದ ಹಿನ್ನೆಯ ಹೊಂದಿದವರಿದ್ದು,

ಒಬ್ಬರು ಆರೋಗ್ಯ ಕಾರಕರ್ತರು ಹಾಗೂ ಒಬ್ಬರು ಶಸ್ತ್ರಚಿಕಿತ್ಸೆಗೆ ದಾಖಲಾ ಗಿದ್ದಾರೆ. ಅರಸೀಕೆರೆ ತಾಲೂಕಿನ ನಾಲ್ವರಲ್ಲಿ ಕೋವಿಡ್‌ 19 ಸೋಂಕಿತರ ಸಂಪರ್ಕಿತರಿದ್ದಾರೆ.  ಹೊಳೆನರಸೀ ಪುರ ಹಾಗೂ ಅರಕಲಗೂಡು ತಾಲೂಕಿನ ತಲಾ ಇಬ್ಬರು ಮತ್ತು ಚನ್ನರಾಯಪಟ್ಟಣ ತಾಲೂಕಿನ ಒಬ್ಬರಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next