Advertisement

ಕೋವಿಡ್ 19 ಅಟ್ಟಹಾಸ; ಭಾರತದಲ್ಲಿ 24ಗಂಟೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ, 68 ಮಂದಿ ಸಾವು

09:08 AM Apr 05, 2020 | Nagendra Trasi |

ನವದೆಹಲಿ:ಮಾರಣಾಂತಿಕ ಕೋವಿಡ್ 19 ವೈರಸ್ ಭಾರತದಲ್ಲಿಯೂ ವೇಗವಾಗಿ ಹರಡತೊಡಗಿದ್ದು, ಕಳೆದ 24ಗಂಟೆಗಳಲ್ಲಿ 601 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕು ಪೀಡಿತರ ಸಂಖ್ಯೆ 2,902ಕ್ಕೆ ಏರಿದೆ. ಸಾವಿನ ಸಂಖ್ಯೆ 68ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

Advertisement

ಆರೋಗ್ಯ ಸಚಿವಾಲಯದ ಅಂಕಿಅಂಶದ ಪ್ರಕಾರ, ದೇಶದಲ್ಲಿ 2902 ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 183 ಮಂದಿ ಚೇತರಿಸಿಕೊಂಡಿದ್ದು, ಒಬ್ಬರು ವಲಸಿಗ ರೋಗಿಯಾಗಿದ್ದು, 68 ಮಂದಿ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದೆ.

ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಏರಿಕೆಯಾಗತೊಡಗಿದೆ. ಉತ್ತರಪ್ರದೇಶದಲ್ಲಿ 200ಕ್ಕೂ ಅಧಿಕ ಪ್ರಕರಣ ಪತ್ತೆಯಾಗಿದೆ, ಉತ್ತರಾಖಂಡ್ ನಲ್ಲಿ 16 ಹೊಸ ಪ್ರಕರಣ, ಪಂಜಾಬ್ ನಲ್ಲಿ 58 ಪ್ರಕರಣ ಮತ್ತು ಐದು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಚಂಡೀಗಢದಲ್ಲಿ 18 ಪ್ರಕರಣ ವರದಿಯಾಗಿದ್ದು, ಹರ್ಯಾಣದಲ್ಲಿ 30ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಅಧಿಕವಾಗಿದ್ದು, ನಂತರದ ಸ್ಥಾನದಲ್ಲಿ ತಮಿಳುನಾಡು, ಕೇರಳ, ದಿಲ್ಲಿ ಹಾಗೂ ಉತ್ತರಪ್ರದೇಶ ಸೇರಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next