Advertisement

2021ರ ಮಧ್ಯೆ ಬ್ರಿಟನ್‌ ಸಂಪೂರ್ಣ ಕೋವಿಡ್‌ ಮುಕ್ತ : ಬೋರಿಸ್‌ ಜಾನ್ಸನ್ ಭರವಸೆ

12:03 PM Jul 26, 2020 | sudhir |

ಲಂಡನ್‌: 2021ರ ಮಧ್ಯೆ ವೇಳೆಗೆ ನಾವು ಸೋಂಕು ಮುಕ್ತರಾಗುವ ಮೂಲಕ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳುತ್ತೇವೆ ಎಂಬ ಭರವಸೆಯನ್ನು ಬ್ರಿಟನಿನ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ವ್ಯಕ್ತಪಡಿಸಿದ್ದಾರೆ.

Advertisement

ಕೋವಿಡ್‌ ಬಾವಲಿಯಿಂದ ಹರಡಿದಿದೆಯೋ ಅಥವಾ ಪ್ಯಾಂಗೊಲಿನ್‌ನಿಂದ ಬಂದಿದೆಯೋ ಅಥವಾ ಮತ್ಯಾವುದರಿಂದ ಹರಡಿದಿದೆಯೋ ತಿಳಿದಿಲ್ಲ.

ಆದರೆ ಈ ಮಾರಣಾಂತಿಕ ಪಿಡುಗಿನಿಂದ ಮನು ಕುಲ ಹೈರಾಣವಾಗಿದ್ದು, ನಾನಾ ಸಮಸ್ಯೆಗಳಿಗೆ ಒಡ್ಡಿಕೊಂಡಿದೆ. ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಾವು ಸಂಪೂರ್ಣವಾಗಿ ಇದರಿಂದ ಹೊರ ಬರಬಹುದಾಗಿದ್ದು, ಮುಂದಿನ ವರ್ಷದ ಮಧ್ಯಾಂತರದ ವೇಳೆಗೆ ಬ್ರಿಟನ್‌ ಕೋವಿಡ್‌ನಿಂದ ಮುಕ್ತವಾಗಲಿದೆ ಎಂಬುದನ್ನು ನಾವು ನಿರೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next