Advertisement
ದೇಶದಲ್ಲಿ ಕೊರೊನಾ ಹೆಚ್ಚು ವ್ಯಾಪಿಸಬಾರದು ಎಂದು ಇಡೀ ದೇಶವನ್ನು ಲಾಕ್‌ಡೌನ್ ಮಾಡಿದ್ದರೂ ಜನ ಮನೆಯಲ್ಲಿ ಇರದೇ ಬೀದಿಗೆ ಬರುತ್ತಿದ್ದು ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ 19 ಗೆ ಒಬ್ಬ ವೃದ್ಧ ಬಲಿಯಾಗಿದ್ದು ಇಬ್ಬರಲ್ಲಿ ಕೊರೊನಾ ವೈರಸ್ ಕಂಡು ಬಂದಿರುವುದು ಜಿಲ್ಲೆಯ ಎಲ್ಲಾ ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ.
Related Articles
Advertisement
ದೇಶದ ಎಲ್ಲಾ ಕಡೆ ಕೋವಿಡ್ 19 ವೈರಸ್ ಸೋಂಕು ಪ್ರಕರಣ ಕಾಣುತ್ತಿತ್ತು ಇದರಲ್ಲಿ ನಿಜಾಮುದ್ದೀನ್ ಮಸೀದಿಗೆ ಹೋದವರಿಗೆ ಹೆಚ್ಚು ಗೋಚರವಾಗುತ್ತಿದೆ. ಮೊದಲು ಜಿಲ್ಲೆಯಲ್ಲಿ ಯಾವುದೇ ಕೊರೊನಾ ವೈರಸ್ ಪತ್ತೆಯಾಗಲಿಲ್ಲ. ಆದರೆ, ಕೆಲವು ದಿನಗಳ ಬಳಿಕ ಏಕಾಏಕಿ ಕೊರೊನಾಗೆ ವೃದ್ಧನೊಬ್ಬ ಬಲಿಯಾದರು. ಇದಾದ ಬಳಿಕ ಜಿಲ್ಲಾಡಳಿತ ಸಂಪೂರ್ಣ ಎಚ್ಚೆತ್ತುಕೊಂಡಿತು. ಈಗ ವೃದ್ಧನ ಮಗನಿಗೇ ಸೋಂಕು ಹರಡಿರುವುದು ಜಿಲ್ಲೆಯ ಜನರ ಆತಂಕ ಹೆಚ್ಚಾಗುವಂತೆ ಮಾಡಿದೆ. ತುಮಕೂರು ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರು ಹೆಚ್ಚುವ ಸಾಧ್ಯತೆ ಕಂಡು ಬಂದಿದೆ, ದೆಹಲಿಯಿಂದ ಬಂದು ಈಗ ಈ ಮಹಾಮಾರಿಗೆ ಮೃತನಾಗಿ ಇನ್ನಿಬ್ಬರಿಗೆ ಸೋಂಕು ಬರುವಂತೆ ಮಾಡಿರುವ ವೃದ್ಧ ಜಿಲ್ಲೆಯ ಹಲವರ ಸಂಪರ್ಕ ಹೊಂದಿದ್ದ ಇದರಿಂದ ತುಮಕೂರು ಕೋವಿಡ್ 19 ಹಾಟ್ ಸ್ಪಾಟ್ ಎನ್ನುವ ಆತಂಕ ಕಾಡಿದೆ.
ಜಿಲ್ಲೆಯ ಇಬ್ಬರಲ್ಲಿ ಕೋವಿಡ್ 19 ಸೋಂಕು ಕಂಡು ಬಂದಿದ್ದು ರೋಗ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ. ಸೋಂಕಿತನೊಂದಿಗೆ ಸಂಪರ್ಕ ಹೊಂದಿದ್ದ ತಿಪಟೂರಿನ 11 ಜನರಲ್ಲಿ ಸೋಂಕು ಪತ್ತೆಯಾಗಿಲ್ಲ. ಆದರೂ ಅವರನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ. –ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾಧಿಕಾರಿ
–ಚಿ.ನಿ.ಪುರುಷೋಅತ್ತಮ್