Advertisement
ಈ ಸಾಲಿನಲ್ಲಿ ಸತತ ನಾಲ್ಕು ಚಂಡಮಾರುತ ಗಳು ಕರಾವಳಿ ತೀರ ಪ್ರದೇಶಕ್ಕೆ ಅಪ್ಪಳಿಸುವ ಭೀತಿ ಎದುರಾಗಿತ್ತು. ಚಂಡಮಾರುತದ ಭೀತಿ ದೂರವಾಗಿ ಪ್ರವಾಸೋದ್ಯಮ ಚೇತರಿಸಿ ಕೊಳ್ಳುವಷ್ಟರಲ್ಲಿ ಈಗ ಕೋವಿಡ್-19 ಭೀತಿ ಎದುರಿಸು ವಂತಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ ಪ್ರವಾಸೋದ್ಯಮ ಕ್ಷೇತ್ರ ಬಹಳಷ್ಟು ನಷ್ಟ ಅನುಭವಿಸಿದೆ. ಕರಾವಳಿ ತೀರ ಪ್ರದೇಶಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕೂಡ ಗಣನೀಯವಾಗಿ ಇಳಿಮುಖವಾಗಿದ್ದು, ಪ್ರವಾಸಿಗರನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಅದೆಷ್ಟೋ ಉದ್ದಿಮೆ, ವ್ಯವಹಾರಗಳು ನಷ್ಟದಲ್ಲಿದೆ.
ಬೋಟಿಂಗ್, ದೋಣಿ ಮನೆ ನಡೆಸುವವರು, ಪ್ರವಾಸಿ ತಾಣಗಳಲ್ಲಿ ಚಿಕ್ಕ – ಪುಟ್ಟ ಅಂಗಡಿಗಳಿಗೂ ಬೇಸಗೆಯ ರಜೆಯಲ್ಲಿ ಉತ್ತಮ ಆದಾಯ ತರುವ ಸಮಯವಾಗಿ ರುತ್ತದೆ. ಆದರೆ ಈ ಬಾರಿ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೇ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿ ತಾಣಗಳಿಗೆ ನಿಷೇಧ ಹೇರಿದೆ. ಸರಕಾರದ ಯಾವುದೇ ಸಹಾಯಧನ, ಸಬ್ಸಿಡಿ ಇಲ್ಲದೆ ಪ್ರವಾಸೋದ್ಯಮದ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿದ್ದ ಹೂಡಿಕೆದಾರರು ದಿಕ್ಕು ತೋಚದಂತಾಗಿದ್ದಾರೆ. ಪಕ್ಕದ ಕೇರಳ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಸಾಂಪ್ರದಾಯಿಕ ದೋಣಿ ಮನೆ ನಡೆಸುವವರಿಗೆ ಉಚಿತ ವಿದ್ಯುತ್, ನೀರು ಹಾಗೂ ಸಬ್ಸಿಡಿ ದರದಲ್ಲಿ ಡೀಸೆಲ್ ನೀಡುತ್ತಿದೆ. ಅದಲ್ಲದೆ ಕೆಲವೊಂದು ವೃತ್ತಿಗೆ ಸಬ್ಸಿಡಿಯನ್ನು ನೀಡುವ ಮೂಲಕ ಹೂಡಿಕೆದಾರರಿಗೆ ಬೆಂಬಲ ನೀಡುತ್ತಿದೆ.
Related Articles
Advertisement
ರಾಜ್ಯದ ಕರಾವಳಿ ಭಾಗದಲ್ಲಿ ನಷ್ಟದಲ್ಲಿರುವ ಪ್ರವಾಸೋದ್ಯಮದ ಉದ್ದಿಮೆ, ವ್ಯವಹಾರಗಳಿಗೆ ಸರಕಾರದ ನೆರವು ಬೇಕಾಗಿದೆ. ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಬೆಳೆಸಲು ಇತರ ರಾಜ್ಯಗಳಲ್ಲಿ ಇರುವಂತೆ ಸಹಾಯಧನ, ಸಬ್ಸಿಡಿ ನೀಡಲು ಕ್ರಮಕೈಗೊಳ್ಳಬೇಕಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇರುವ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಬೆಳೆಸಲು ಸರಕಾರ ಸೂಕ್ತ ಯೋಜನೆ ರೂಪಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಗೋಳಿಯಂಗಡಿ ಸಂತೆ ರದ್ದುಗೋಳಿಯಂಗಡಿ: ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ಆದೇಶದಂತೆ, ಉಡುಪಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬೆಳ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿ ರವಿವಾರ ನಡೆಯುತ್ತಿದ್ದ ವಾರದ ಸಂತೆಯನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಬೆಳ್ವೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಜನಸಂಚಾರ ವಿರಳ, ಬಸ್ ಯಾನ ಕಡಿತ
ಕುಂದಾಪುರ: ಕೋವಿಡ್-19 ಭೀತಿಯಿಂದಾಗಿ ಈಗಲೇ ಸ್ವಯಂ ನಿಯಂತ್ರಣ ಪಾಲಿಸುತ್ತಿರುವ ಜನತೆಯಿಂದಾಗಿ ನಗರದಲ್ಲಿ ಜನಸಂಚಾರ ವಿರಳವಾಗಿದೆ. ಶುಕ್ರವಾರವೂ ನಗರದ ವಿವಿಧೆಡೆ ಜನರ ಓಡಾಟ ಕಡಿಮೆಯಾಗಿತ್ತು. ಸರಕಾರಿ ಕಚೇರಿ
ಸರಕಾರಿ ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ ಜನ ಕಡಿಮೆ ಸಂಖ್ಯೆಯಲ್ಲಿ ಇದ್ದರು. ಆಹಾರ ಶಾಖೆ, ನೋಂದಣಿ ಶಾಖೆ, ಉಪಖಜಾನೆ ಸೇರಿದಂತೆ ಜನರಿರಲಿಲ್ಲ. ಆರ್‌ಟಿಸಿ ಇತ್ಯಾದಿ ಪಡೆಯಲು ಜನರಿದ್ದರೂ ಕೂಡಾ ಎಂದಿನಷ್ಟು ರಶ್ ವಾತಾವರಣ ಇರಲಿಲ್ಲ. ಆಧಾರ್ ನೋಂದಣಿ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ. ಮುಂದಿನ ಆದೇಶವರೆಗೆ ಆಧಾರ್ ನೋಂದಣಿ ಇರುವುದಿಲ್ಲ. ಇದರಿಂದಾಗಿ ತಾಲೂಕು ಕಚೇರಿ ಆಹಾರ ಶಾಖೆಯೊಳಗೆ ಇರುವ ಆಧಾರ್ ಕೇಂದ್ರ ಬಿಕೋ ಎನ್ನುತ್ತಿತ್ತು. ಸರಕಾರಿ ಕಚೇರಿಗಳಿಗೆ ಅನಗತ್ಯವಾಗಿ, ತುರ್ತು ಕಾರಣಗಳಿಲ್ಲದೇ ಬರಬೇಡಿ ಎಂದು ಜಿಲ್ಲಾಡಳಿತ ಕೂಡಾ ಮನವಿ ಮಾಡಿದೆ. ಪಡಿತರಕ್ಕೆ ಒಟಿಪಿ
ಪಡಿತರ ಸಾಮಗ್ರಿ ವಿತರಣೆ ಗುರುವಾರದಿಂದ ಆರಂಭವಾಗಿದ್ದು ಈ ಬಾರಿ ಹೆಬ್ಬೆಟ್ಟು ಗುರುತು ಕಡ್ಡಾಯಗೊಳಿಸಿಲ್ಲ. ಬದಲಾಗಿ ಪಡಿತರ ಚೀಟಿ ಜತೆ ಹೊಂದಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯೇ ಪ್ರಮುಖವಾಗಿರುತ್ತದೆ. ಇದರ ಆಧಾರದಲ್ಲಿ ಪಡಿತರ ಸಾಮಗ್ರಿ ವಿತರಣೆ ಆರಂಭವಾಗಿದೆ. ಈ ಕುರಿತು ಆಹಾರ ಶಾಖೆ ಸ್ಪಷ್ಟಪಡಿಸಿದ್ದು ಪಡಿತರ ಚೀಟಿ ಜತೆ ಆಧಾರ್ ಹೊಂದಾಣಿಕೆ ಕೂಡಾ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಮುಂದಿನ ದಿನಾಂಕ ಸೂಚಿಸಲಾಗುವುದು ಎಂದಿದೆ. ರವಿವಾರ ಬಸ್ಸಿಲ್ಲ
ರವಿವಾರ ಖಾಸಗಿ ಬಸ್ಸುಗಳು ಇರುವುದಿಲ್ಲ. ಸರಕಾರಿ ಬಸ್ಸುಗಳು ಇರುವ ಸಾಧ್ಯತೆಗಳು ಕೂಡಾ ಕಡಿಮೆ. ಹೊಟೇಲ್, ಅಂಗಡಿ ಇತ್ಯಾದಿ ಬಹುತೇಕ ಮಳಿಗೆಗಳು ರವಿವಾರ ತೆರೆಯುವುದಿಲ್ಲ. ಬಂದ್ ರೀತಿಯ ವಾತಾವರಣ ನಿರ್ಮಾಣವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಹರಡದಂತೆ ಜನತಾ ಕರ್ಫ್ಯೂಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಎಲ್ಲೆಡೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಪ್ರವಾಸಿಗರ ಸಂಖ್ಯೆ ಇಳಿಮುಖ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಹಳಷ್ಟು ನಷ್ಟ ಅನುಭವಿಸಿದ್ದೇವೆ. ಚಂಡಮಾರುತ ಹಾಗೂ ಕೊರೊನಾ ಭೀತಿಯಿಂದ ಕುಂದಾಪುರ ತಾಲೂಕಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಸರಕಾರದ ಯಾವುದೇ ಸಹಾಯಧನ, ಸಬ್ಸಿಡಿ ಇಲ್ಲದೆ ನಡೆಯುತ್ತಿರುವ ಸಾಂಪ್ರದಾಯಿಕ ದೋಣಿ ಮನೆಗೆ ಸರಕಾರದ ನೆರವು ಬೇಕಾಗಿದೆ
– ಟಿ.ವಾಸುದೇವ ದೇವಾಡಿಗ, ಸಾಂಪ್ರದಾಯಿಕ ದೋಣಿ ಮನೆ (ಕ್ರೂಸ್) ಪಾಲುದಾರ, ಗಂಗೊಳ್ಳಿ