Advertisement

ಐಆರ್‌ಸಿಟಿಸಿಯ “ವರ್ಕ್‌ ಫ್ರಂ ಹೋಟೆಲ್‌’ : ಆತಿಥ್ಯ ಕ್ಷೇತ್ರದ ಹೊಸ ಟ್ರೆಂಡಿಂಗ್‌ ಕೊಡುಗೆ

11:28 PM May 14, 2021 | Team Udayavani |

ಹೊಸದಿಲ್ಲಿ: ಕೊರೊನಾ ಎರಡನೇ ಅಲೆಯಿಂದ ದೇಶದ ಕೈಗಾರಿಕಾ ವಲಯ ತತ್ತರಿಸಿದೆ. ಹೊಟೇಲ್‌ ಉದ್ಯಮ ಕೂಡ ಇದಕ್ಕೆ ಹೊರತಾಗಿಲ್ಲ. ಈ ನಷ್ಟದಿಂದ ಸ್ವಲ್ಪ ಮಟ್ಟಿಗಾದರೂ ಪಾರಾಗಲು ಕೆಲವು ಸ್ಟಾರ್‌ ಹೋಟೆಲ್‌ಗ‌ಳು ಕೆಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳತೊಡಗಿವೆ.

Advertisement

ಇಂಡಿಯನ್‌ ರೈಲ್ವೇ ಕೇಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಷನ್‌ (ಐಆರ್‌ಸಿಟಿಸಿ) ಕೇರಳದಲ್ಲಿ “ವರ್ಕ್‌ ಫ್ರಂ ಹೋಂ’ ಮಾದರಿಯಲ್ಲಿ “ವರ್ಕ್‌ ಫ್ರಂ ಹೊಟೇಲ್‌’ ಸೇವೆಯನ್ನು ನೀಡುವುದಾಗಿ ಪ್ರಕಟಿಸಿದೆ. ಮನೆಯಿಂದ ಕಚೇರಿ ಕೆಲಸ ಮಾಡಿ ಬೇಸರಗೊಂಡು ಬದಲಾವಣೆ ಬೇಕು ಎನ್ನುವವರಿಗಾಗಿ ಕೇರಳದ ಪ್ರವಾಸಿ ಧಾಮಗಳಲ್ಲಿರುವ ತನ್ನ ಹೊಟೇಲ್‌ಗ‌ಳಲ್ಲಿ ಈ ಸೌಲಭ್ಯ ಸಿಗಲಿದೆ ಎಂದು ಐಆರ್‌ಸಿಟಿಸಿ ಹೇಳಿದೆ.

ಪ್ಯಾಕೇಜ್‌ ಹೇಗೆ?
ಐದು ರಾತ್ರಿಗಳ ಪ್ಯಾಕೇಜ್‌ಗೆ 10,126 ರೂ. ದರ. ಇದರಲ್ಲಿ ಬೆಳಗಿನ ಉಪಾಹಾರ, 2 ಭೋಜನ, ದಿನಕ್ಕೆರಡು ಬಾರಿ ಚಹಾ ಅಥವಾ ಕಾಫಿ, ಕಾಂಪ್ಲಿಮೆಂಟರಿ ವೈಫೈ, ಪಾರ್ಕಿಂಗ್‌ ಸೌಲಭ್ಯ ಮತ್ತು ಪ್ರಯಾಣ ವಿಮೆ ಸಿಗುತ್ತದೆ.

ಇದನ್ನೂ ಓದಿ :ರಾಜ್ಯದ ಜನತೆಗೆ ಆದಷ್ಟು ಬೇಗ ಲಸಿಕೆ ಕೊಡಿಸಲು ಯತ್ನ: ಸಿಎಂ

ಎಲ್ಲೆಲ್ಲಿದೆ ಈ ಸೌಕರ್ಯ?
ಮುನ್ನಾರ್‌, ತೇಕ್ಕಡಿ, ಕುಮಾರಕೋಂ, ಅಲೆಪ್ಪಿ, ಕೋವಳಂ, ವಯನಾಡ್‌, ಕೊಚಿನ್‌ನ ಐಆರ್‌ಸಿಟಿಸಿ ಹೊಟೇಲ್‌ ಕೊರೊನಾ ನಿಯಮಾವಳಿ ಪಾಲಿಸಿ ಈ ಪ್ಯಾಕೇಜ್‌.

Advertisement

ಚೆನ್ನೈಯಲ್ಲಿ ಬೇರೆ ಲೆಕ್ಕಾಚಾರ
ಚೆನ್ನೈಯಲ್ಲೂ ಕೆಲವು ಸ್ಟಾರ್‌ ಹೊಟೇಲ್‌ಗ‌ಳು ಸೋಂಕಿಗೆ ಒಳಗಾಗಿರುವವರಿಗೆ ತಾತ್ಕಾಲಿಕ ಕ್ವಾರಂಟೈನ್‌ ವಲಯಗಳನ್ನು ನಿರ್ಮಿಸಿ, ಆ ಮೂಲಕ ಅಲ್ಪವಾದರೂ ಆದಾಯ ಗಳಿಸಲು ಮುಂದಾಗಿವೆ. ಇಂಥ ಒಂದು ಐಶಾರಾಮಿ ಕೊಠಡಿಗಳಿಗೆ ದಿನ 2,000 ರೂ. ಅಥವಾ 1,500 ರೂ. ವಿಧಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next